ಮೋದಿ ಕನಸು ಸಾಕಾರಗೊಳಿಸಲು ಬಿಜೆಪಿ ಬೆಂಬಲಿಸಿ-ಸಂಸದ ಸಂಗಣ್ಣ ಮನವಿ

ಸಮಗ್ರ ನೀರಾವರಿಗೆ ಬಿಜೆಪಿಗೆ ಮತ | ಅನ್ನಭಾಗ್ಯದಲ್ಲಿ ಕಾಂಗ್ರೆಸ್ ಪುಕ್ಕಟೆ ಪ್ರಚಾರ: ಅಮರೇಶ ಕರಡಿ 
ಕೊಪ್ಪಳ, ಮೇ.೦೩: ರಾಜ್ಯ ಮತ್ತು ಕೇಂದ್ರದಲ್ಲಿ ಒಂದೇ ಪಕ್ಷದ ಸರ್ಕಾರಗಳು ಆಡಳಿತ ನಡೆಸಿದರೆ ರೈತರಿಗೆ ಸಾಕಷ್ಟು ಸೌಲಭ್ಯಗಳನ್ನು ಒದಗಿಸಿಕೊಡಲು ಸಾಧ್ಯವಿದೆ. ಅನ್ನಭಾಗ್ಯ ಯೋಜನೆಯಲ್ಲಿ ಕೇಂದ್ರ ಸರ್ಕಾರ ಕೊಡುವ ಅನುದಾನದ ಮಾಹಿತಿಯನ್ನು ಮುಚಿಟ್ಟು ಸಿದ್ಧರಾಮಯ್ಯನವರು ಪ್ರಚಾರ ಪಡೆದುಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಅಮರೇಶ ಕರಡಿ ಹೇಳಿದರು.
ತಾಲೂಕಿನ ಹಟ್ಟಿ, ಚಿಲವಾಡಗಿ, ಕಲಕೇರಿ, ದೇವಲಾಪೂರ ಹಾಗೂ ವಿವಿಧ ಗ್ರಾಮಗಳಲ್ಲಿ ಮತಯಾಚನೆಯ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರೈತರಿಗೆ ಆತ್ಮಹತ್ಯೆ ಭಾಗ್ಯವನ್ನು ಕರುಣಿಸಿದೆ. ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳಿಗೆ ರಾಜ್ಯ ಸರ್ಕಾರ ವೈಜ್ಞಾನಿಕ ರೀತಿಯಲ್ಲಿ ಪರಿಹಾರ ಪರಿಹಾರ ವಿತರಣೆ ಮಾಡಿಲ್ಲ. ಬೆಳೆದ ಬೆಳೆಗೆ, ಸಂಕಷ್ಟಕ್ಕೊಳಗಾದ ರೈತರಿಗೆ ಬೆಂಬಲ ಬೆಲೆ ನೀಡುವುದಕ್ಕೆ ಸಂಪೂರ್ಣವಾಗಿ ವಿಫಲವಾಗಿದೆ. ಹಿಂದೆ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಜನಸಾಮಾನ್ಯರಿಗೆ ಅನುಕೂಲವಾಗುವ ದಿಸೆಯಲ್ಲಿ ಸಾಕಷ್ಟು ಜನಕಲ್ಯಾಣ ಕಾರ್ಯಕ್ರಮಗಳನ್ನು ಜಾರಿ ಮಾಡಿದ್ದಾರೆ. ಭಾಗ್ಯಲಕ್ಷ್ಮೀ, ಕೃಷಿ ಬಜೆಟ್, ೧೦೮ ವಾಹನ ವ್ಯವಸ್ಥೆ, ಭೂ ಚೇತನ ಕಾರ್ಯಕ್ರಮ, ಸಂಧ್ಯಾ ಸುರಕ್ಷಾ, ವಿದ್ಯಾರ್ಥಿಗಳಿಗೆ ಉಚಿತ ಸೈಕಲ್ ವಿತರಣೆ, ನೆರೆ ಸಂತ್ರಸ್ಥರಿಗೆ ಸಹಾಯ ಹಾಗೂ ಇನ್ನೂ ಅನೇಕ ಯೋಜನೆಗಳು ಹಿತಿಹಾಸದಲ್ಲಿ ಮರೆಯಲಾಗದ ಕಾರ್ಯಗಳಾಗಿವೆ. ಮತ್ತು ತಾಲೂಕಿನ ಸಮಗ್ರ ನೀರಾವರಿ ಯೋಜನೆಗಳ ಅಭಿವೃದ್ಧಿಗೆ ಬಿಜೆಪಿಗೆ ಮತ ನೀಡಿ ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪನವರ ಕೈ ಬಲಪಡಿಸಬೇಕೆಂದು ಕರೆ ನೀಡಿದರು.
ಪಕ್ಷ ಸೇರ್ಪಡೆ: ಈ ಸಂದರ್ಭದಲ್ಲಿ ಪಕೀರಪ್ಪ ಹರಿಜನ, ವಿರುಪಾಕ್ಷೀ ಉಪ್ಪಲದಿನ್ನಿ, ಬಸವರಾಜ ಬಂಗಿ, ವಿರೇಶ ಅಂಚಿ, ರವಿ ಕಿನ್ನಾಳ, ವಿರೇಶ ಉದ್ದಾರ, ಚಂದ್ರಶೇಖರ ರಾಠೋಡ್, ಪಕೀರಪ್ಪ ನಾಯಕ, ಮಲ್ಲೇಶ ಗದ್ದಿಕೇರಿ, ಕನಕಪ್ಪ, ಕಾಶಿನಾಥ, ಹುಸೇನ್, ಹಾಗೂ ಮುಂತಾದವರು ವಿವಿಧ ಪಕ್ಷ ತೊರೆದು ಅಮರೇಶ ಕರಡಿ ನೇತೃತ್ವದಲ್ಲಿ ಭಾಜಪ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಜಿ.ಪಂ. ಸದಸ್ಯ ರಾಮಣ್ಣ ಚೌಡ್ಕಿ, ಎ.ಪಿ.ಎಮ್.ಸಿ ಸದಸ್ಯ ಬಸವರಾಜ ಈಶ್ವರಗೌಡರ, ನಗರಸಭೆ ಸದಸ್ಯ ಪ್ರಾಣೇಶ ಮಾದಿನೂರ, ಗ್ರಾ.ಪಂ. ಸದಸ್ಯರಾದ ಗೋವಿಂದಪ್ಪ ಕಾತರಕಿ, ಅಶೋಕಪ್ಪ ಕಿನ್ನಾಳ, ನಿಂಗಪ್ಪ ಉದ್ದಾರ, ಗ್ರಾಮದ ಮುಖಂಡರಾದ ಸುದೇಶಪ್ಪ ಪಟ್ಟಣಶೆಟ್ಟಿ, ಬಸನಗೌಡ ಯಂಕನಗೌಡರ, ಪಕೀರಪ್ಪ ಹುಲಗಿ, ಗಂಗಪ್ಪ ಉಳಾಗಡ್ಡಿ, ಶೇಖರಗೌಡ ಪೋಲೀಸ್ ಪಾಟೀಲ,ಗಿಡ್ಡಪ್ಪ ಪೂಜಾರ, ಗುಡದಪ್ಪ ಪೂಜಾರ, ದ್ಯಾಮಪ್ಪ ಉಳಾಗಡ್ಡಿ, ಗಿರಿಯಪ್ಪ ಕುಣಕೇರಿ, ಬಸಪ್ಪ ಹೋಸಗೇರಿ, ರಾಮಣ್ಣ ಕಾತರಕಿ, ಮಹಾದೇವಪ್ಪ ಕುಣಕೇರಿ, ಮಾರುತೆಪ್ಪ ಕಾತರಕಿ, ಚಿದಾನಂದ ಪೂಜಾರಿ, ದೇವಪ್ಪ ಬಂಡಿ, ಮಂಜುನಾಥ ಕಿನ್ನಾಳ, ದುರಗಪ್ಪ ಹರಿಜನ, ಹನುಮಂತಪ್ಪ ಸಂಗನಾಳ, ಸಣ್ಣಮರಿಯಪ್ಪ ಸಿಳ್ಳಿಕ್ಯಾತರ, ಶರಣಯ್ಯ ದಾನವಡೆಯರ, ಇಂದ್ರೇಶ ರಾಠೋಡ, ಮಾರುತಿ ಕೋಮಾರಿ, ಹನುಮಂತ ಮೆತಗಲ್, ರಮೇಶ ಚೌಡ್ಕಿ, ಇನ್ನೂ ಅನೇಕರು ಉಪಸ್ಥಿತರಿದ್ದರು.

ಮೋದಿ ಕನಸು ಸಾಕಾರಗೊಳಿಸಲು ಬಿಜೆಪಿ ಬೆಂಬಲಿಸಿ | ಲೋಕಸಭಾದ ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಬೆಂಬಲಿಸಿ || ಬಿಜೆಪಿ ಪ್ರಚಾರಸಭೆಯಲ್ಲಿ ಸಂಸದ ಸಂಗಣ್ಣ ಮನವಿ
ಕೊಪ್ಪಳ, ಮೇ.೦೩: ದೇಶದ ಅಭಿವೃದ್ಧಿಗಾಗಿ ಪ್ರಧಾನಿ ನರೇಂದ್ರ ಮೋದಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಹಲವು ಜನಪರ ಯೋಜನೆಗಳು ಜಾರಿ ಮಾಡಿದ್ದಾರೆ. ದೇಶ ಮತ್ತು ರಾಜ್ಯದ ಅಭಿವೃದ್ಧಿಗೆ ಅವರ ಕನಸು ನನಸು ಮಾಡಲು ಪ್ರತಿಯೊಬ್ಬರು ಬಿಜೆಪಿ ಮತ ನೀಡಬೇಕೆಂದು ಭಾಜಪ ರಾಜ್ಯ ಕಾರ್ಯದರ್ಶಿ ಹಾಗೂ ಕೊಪ್ಪಳ ಲೋಕಸಭಾ ಸದಸ್ಯ ಸಂಗಣ್ಣ ಕರಡಿ ಹೇಳಿದರು.
ತಾಲೂಕಿನ ಅಗಳಕೇರಾ, ಹಲವಾಗಲಿ, ಕೇಸಲಾಪೂರ, ನೇಲುಗಿಪೂರ, ತಿಗರಿ, ಬೋಚನಳ್ಳಿ, ಬೈರಾಪೂರ, ಹನಕುಂಟಿ, ಮತ್ತೂರ, ನೀರಲಗಿ ಹಾಗೂ ವಿವಿಧ ಗ್ರಾಮಗಳಲ್ಲಿ ಮತಯಾಚನೆಯ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಎನ್.ಡಿ.ಎ ಸರ್ಕಾರದ ಆಡಳಿತ ಶುರುವಾದ ಬಳಿಕ ದೇಶದಲ್ಲಿ ಪ್ರತಿ ದಿನ ೩೦ ಕಿ.ಮೀ. ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಆದರೆ ಹಿಂದಿನ ಯುಪಿಎ ಸರ್ಕಾರವು ಕೇವಲ ೮ ಕಿ.ಮೀ ರಸ್ತೆ ನಿರ್ಮಾಣ ಮಾಡುತ್ತಿತ್ತು. ಇದರಲ್ಲಿಯೇ ದೇಶದ ಅಭಿವೃದ್ದಿಯ ಪ್ರಗತಿ ಕಾಣುತ್ತದೆ. ಕೇಂದ್ರದಿಂದ ರಾಜ್ಯಕ್ಕೆ ಹೆಚ್ಚಿನ ಅನುದಾನ ನೀಡುತ್ತಿದೆ. ಕಳೆದ ಮೂರು ವರ್ಷಗಳಲ್ಲಿ ನರೇಗಾದಡಿ ೧೧೨ ಕೋಟಿ, ಸ್ವಚ್ಛ ಭಾರತದಡಿ ೧೩೦೦ ಕೋಟಿ, ಸಿಆರ್‌ಎಪ್‌ನಡಿ ೩೬೯೦ ಕೋಟಿ ಸೇರಿದಂತೆ ವಿವಿಧ ಯೋಜನೆಯಡಿ ಭರಪೂರ ಅನುಧಾನ ನೀಡಿದೆ. ಆದರೆ ಕಾಂಗ್ರಸ್‌ನವರು ವೋಟ್ ಕ್ರೋಡಿಕರಣಕ್ಕಾಗಿ ಬಿಜೆಪಿ ವಿರುದ್ಧ ಬಾಯಿಗೆ ಬಂದಂತೆ ಮಾತನಾಡುತ್ತಿರುವುದು ರಾಜ್ಯದ ಜನತೆ ಗಮನಿಸಿದೆ. ರಾಜ್ಯ ಸರ್ಕಾರ ಕಿತ್ತೊಗೆಯಲು ಮತದಾರ ಕಾತುರನಾಗಿದ್ದಾನೆ. ಹಿಂದಿನ ಸರ್ಕಾರದ ಕೊಡುಗೆಗಳನ್ನು ಜನ ಮರೆತಿಲ್ಲ. ರಾಜ್ಯದಲ್ಲಿ ಬಿಜೆಪಿ ಪರವಾದ ಅಲೆ ಇದ್ದು ಕೊಪ್ಪಳ ಲೋಕಸಭಾದ ಎಲ್ಲಾ ಕ್ಷೇತ್ರಗಳಲ್ಲಿಯೂ ಬಿಜೆಪಿ ಅಭ್ಯರ್ಥಿಗಳು ಜಯಶಾಲಿಗಳಾಗಲಿದ್ದು, ಯಡಿಯೂರಪ್ಪನವರ ಬಿಜೆಪಿ ನೇತೃತ್ವದ ಸರ್ಕಾರ ರಚನೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಸಿ.ವ್ಹಿ.ಚಂದ್ರಶೇಖರ ಮಾತನಾಡಿ ತಾಲೂಕಿನ ರಾಜಕಾರಣದಲ್ಲಿ ಸರ್ವಾಧಿಕಾರಿಯಂತೆ ದುರಾಡಳಿತ ನಡೆಸಿದ ಶಾಸಕರನ್ನು ಮನೆಗೆ ಕಳಿಸುವ ಕಾಲ ಬಂದಿದೆ. ತಾಲೂಕಿನಲ್ಲಿ ಶಾಸಕರ ಕುಮ್ಮಕ್ಕಿನಿಂದ ಅಕ್ರಮಗಳು ತಾಂಡವವಾಡುತ್ತಿದ್ದು, ೫ ವರ್ಷಗಳಲ್ಲಿ ಸಾಕಷ್ಟು ಅನುದಾನ ತಂದು ಮಾದರಿ ಕ್ಷೇತ್ರವನ್ನಾಗಿ ಮಾಡಲಾಗಿದೆ ಎಂದು ಸುಳ್ಳು ಹೇಳಿಕೆಗಳನ್ನು ನೀಡಿ ಜನರ ಕಣ್ಣಿಗೆ ಮಂಕು ಬೂದಿ ಹಚ್ಚುವವರಿಗೆ ಮತದಾರಪ್ರಭು ತಕ್ಕ ಉತ್ತರ ನೀಡಬೇಕಾಗಿದೆ. ರಾಜ್ಯದ ಮತ್ತು ತಾಲೂಕಿನ ಸರ್ವಾಂಗಿಣ ಅಭಿವೃದ್ಧಿಗೆ ಬಿಜೆಪಿ ಅಭ್ಯರ್ಥಿಯಾದ ಅಮರೇಶ ಕರಡಿಯವರಿಗೆ ನಿಮ್ಮ ಅಮೂಲ್ಯವಾದ ಮತ ನೀಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಹಾಲೇಶ ಕಂದಾರಿ, ವಿರುಪಾಕ್ಷಯ್ಯ ಗದುಗಿನಮಠ, ವಿರೇಶ ಸಜ್ಜನ, ಶಂಕರಗೌಡ ಬೆಳಗಟ್ಟಿ, ಸಿದ್ದಪ್ಪ ಹಲವಾಗಲಿ, ಹೇಮನಗೌಡ ಕೇಸಲಾಪೂರ, ಹನುಮಗೌಡ ಪಾಟೀಲ, ತೋಟಪ್ಪ ಕಾಮನೂರ, ರಮೇಶ ಡಂಬ್ರಳ್ಳಿ, ಜಗದೀಶಗೌಡ ತೆಗ್ಗಿನಮನಿ, ಸುರೇಶ ದಾಸರಡ್ಡಿ, ಶೇಖಣ್ಣ ಲಕ್ಷಾಣಿ, ಶರಣಪ್ಪ ಮತ್ತೂರ, ಶ್ರೀನಿವಾಸ ಪೂಜಾರ, ಭಾಜಪ ಜಿಲ್ಲಾ ಮಾಧ್ಯಮ ಪ್ರಮುಖ ಬಿ.ಗಿರೀಶಾನಂದ ಜ್ಞಾನಸುಂದರ ಹಾಗೂ ಹಲವಾರು ಮುಖಂಡರು ಉಪಸ್ಥಿತರಿದ್ದರು.

Please follow and like us:
error