ಮತದಾನ ಪ್ರಕ್ರಿಯೆ : ಮತದಾರರಿಗೆ ಪ್ರಮುಖ ಸೂಚನೆ

ಮತದಾರರು, ತಾವು ಮತ ಚಲಾಯಿಸಿದ ಅಭ್ಯರ್ಥಿಯ ಬದಲಾಗಿ ಬೇರೊಬ್ಬ ಅಭ್ಯರ್ಥಿಗೆ ಮತ ಹೋದರೆ, ಅಂತಹ ಹೆಸರು ಅಥವಾ ಚಿಹ್ನೆಯನ್ನು ತೋರಿಸಿರುವುದಾಗಿ ಘೋಷಣಾ ಪತ್ರವನ್ನು ಮತಗಟ್ಟೆ ಅಧಿಕಾರಿಗಳಿಗೆ ಸಲ್ಲಿಸಿದಲ್ಲಿ, ಅಂತಹವರಿಗೆ ಪುನಃ ಮತದಾನ ಮಾಡಲು ಅವಕಾಶ ಕಲ್ಪಿಸಲಾಗುವುದು. ಬಳಿಕ, ಅಂತಹ ಮತದಾರನ ಘೋಷಣೆ ತಪ್ಪಾದಲ್ಲಿ, ಅಂತಹವರಿಗೆ ೦೬ ತಿಂಗಳ ಜೈಲು ಶಿಕ್ಷೆ ಅಥವಾ ೧೦೦೦ ರೂ. ದಂಡ ಅಥವಾ ಎರಡೂ ಶಿಕ್ಷೆಗೆ ಒಳಪಡಿಸಬಹುದಾಗಿದೆ ಎಂದು ಕೊಪ್ಪಳ ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ತಿಳಿಸಿದ್ದಾರೆ.
ಕರ್ನಾಟಕ ವಿಧಾಸಭಾ ಸಾರ್ವತ್ರಿಕ ಚುನಾವಣೆಯ ಅಂಗವಾಗಿ ಮತದಾನದ ಸಂದರ್ಭದಲ್ಲಿ ಮತದಾರನು ತಾನು ಚಲಾಯಿಸಿದ ಮತವು ಸರಿಯಾದ ಅಭ್ಯರ್ಥಿಗೆ ಚಲಾವಣೆಯಾಗಿರುವ ಕುರಿತು ಖಾತ್ರಿ ಪಡಿಸಿಕೊಳ್ಳುವ ಸಲುವಾಗಿ ಭಾರತ ಚುನಾವಣಾ ಆಯೋಗವು ಹೊಸದಾಗಿ ವಿವಿಪ್ಯಾಟ್ (ಮತ ಖಾತ್ರಿ ಯಂತ್ರ) ಗಳನ್ನು ಉಪಯೋಗಿಸಲು ಕ್ರಮ ಕೈಗೊಂಡಿದ್ದು, ಮತದಾರರು ತಾವು ಚಲಾಯಿಸಿದ ಮತವು ಯಾವ ಅಭ್ಯರ್ಥಿಗೆ ಚಲಾವಣೆಯಾಗಿದೆ ಎಂಬ ಬಗ್ಗೆ ವಿವಿಪ್ಯಾಟ್‌ಗಳಲ್ಲಿ ಕಾಣಬಹುದಾಗಿದೆ. ಮತ ಚಲಾವಣೆ ಸಂದರ್ಭದಲ್ಲಿ ಮತದಾರರು ತಾವು ಚಲಾಯಿಸಿದ ಮತವು ಬೇರೆ ಅಭ್ಯರ್ಥಿಗೆ ಚಲಾವಣೆಯಾಗಿರುವುದಾಗಿ ಭಾವಿಸಿದರೆ, ಅಂತಹ ಸಂದರ್ಭದಲ್ಲಿ ಮತದಾರರು ಸಬ್ ರೂಲ್ (೧) ಆಫ್ ರೂಲ್ ೪೯ಎಂ.ಎ ಆಫ್ ದಿ ಕಂಡಕ್ಟ್ ಆಫ್ ಎಲೆಕ್ಷನ್ಸ್ ರೂಲ್ ೧೯೬೧ರ ಅಡಿಯಲ್ಲಿ, ವಿವಿಪ್ಯಾಟ್‌ನಲ್ಲಿ ತಾನು ಮತ ಚಲಾಯಿಸಿದ ಅಭ್ಯರ್ಥಿಯ ಬದಲಾಗಿ ಬೇರೊಬ್ಬ ಅಭ್ಯರ್ಥಿಯ ಹೆಸರು ಅಥವಾ ಚಿಹ್ನೆಯನ್ನು ತೋರಿಸಿರುವುದಾಗಿ ಘೋಷಣಾ ಪತ್ರವನ್ನು ಸಲ್ಲಿಸಬಹುದು. ಘೋಷಣಾ ಪತ್ರವನ್ನು ಮತಗಟ್ಟೆಯ ಪ್ರಿಸೈಡಿಂಗ್ ಅಧಿಕಾರಿಗೆ ಸಲ್ಲಿಸಿದ ನಂತರ ಮತದಾರರಿಗೆ ಪುನಃ ಮತದಾನವನ್ನು ಮಾಡಲು ಅವಕಾಶ ನೀಡಲಾಗುವುದು.
ಘೋಷಣಾ ಪತ್ರವನ್ನು ಸಲ್ಲಿಸಿದ ಮತದಾರರು ಪುನಃ ಮತದಾನ ಮಾಡಿದ ನಂತರ ಅವರು ನೀಡಿದ ಘೋಷಣೆಯು ತಪ್ಪಾಗಿದ್ದಲ್ಲಿ, ಅಂತಹ ಮತದಾರರನ್ನು ಭಾರತ ದಂಡ ಪ್ರಕ್ರಿಯೆ ಸಂಹಿತೆಯ ಕಲಂ ೧೭೭ ರ ಅನ್ವಯ ಆರು ತಿಂಗಳವರೆಗೆ ಜೈಲು ಶಿಕ್ಷೆ ಅಥವಾ ರೂ.೧೦೦೦ ಗಳವರೆಗೆ ದಂಡ ಅಥವಾ ಎರಡೂ ಶಿಕ್ಷೆಗೆ ಒಳಪಡಿಸಬಹುದಾಗಿದೆ ಎಂದು ಕೊಪ್ಪಳ ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಎಂ. ಕನಗವಲ್ಲಿ   ತಿಳಿಸಿದ್ದಾರೆ.

Please follow and like us:
error