ಬಿಜೆಪಿ ಅಭ್ಯರ್ಥಿ ಗೆಲುವು ನಿಶ್ಚಿತ : ಶಾಸಕ ಸಿ.ಟಿ. ರವಿ ವಿಶ್ವಾಸ

ಈಶಾನ್ಯ ಪದವೀಧರ ಕ್ಷೇತ್ರ
ಕೊಪ್ಪಳ: ವಿಧಾನಪರಿಷತ್ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಪ್ರಜ್ಞಾವಂತ ಮತದಾರರ ಒಲವು, ಮೋದಿ ಸರ್ಕಾರದ ಮೇಲಿನ ನಂಬಿಕೆ ಮತ್ತು ಕಾರ್ಯಕರ್ತರ ಸಂಘಟಿತ ಪ್ರಯತ್ನದಿಂದ ಬಿಜೆಪಿ ಮತ್ತೆ ಈ ಬಾರಿ ಜಯಗಳಿಸಲಿದೆ ಎಂದು ಬಿಜೆಪಿ ಶಾಸಕ ಸಿ.ಟಿ.ರವಿ ಹೇಳಿದರು.
ಸಂಸದ ಸಂಗಣ್ಣ ಕರಡಿ ಅವರ ನಿವಾಸದಲ್ಲಿ ಶನಿವಾರ ಬಿಜೆಪಿ ಪ್ರಮುಖರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹೈ-ಕ ಕ್ಷೇತ್ರದಲ್ಲಿ ಪದವೀಧರರು ಮೊದಲಿನಿಂದಲೂ ಭಾಜಪದ ಅಭ್ಯರ್ಥಿಗಳನ್ನೇ ಗೆಲ್ಲಿಸಿ ಬೆಂಬಲಿಸುತ್ತಿದ್ದಾರೆ, ಪ್ರಸಕ್ತ ಚುನಾವಣೆಯಲ್ಲಿ ಮತ್ತೇ ನಮ್ಮದೆ ಗೆಲ್ಲುವು ಆಗಲಿದೆ. ಉಳಿದಡೆಯಲ್ಲಿಯೂ ಉತ್ತಮ್ಮ ಪ್ರತಿಕ್ರಿಯು ಇದ್ದು, ಇದರಿಂದ ಮೇಲ್ಮನೆಯಲ್ಲಿ ಬಿಜೆಪಿ ತನ್ನ ಶಕ್ತಿಯನ್ನು ಹೆಚ್ಚಿಸಿಕೊಳ್ಳಲಿದೆ ಎಂದರು.
ಸಾರ್ವತ್ರಿಕ ಚುನಾವಣೆಯಲ್ಲಿ ಕಾರ್ಯಕರ್ತರು ಪಕ್ಷದ ಪರವಾಗಿ ಮಾಡಿದಂತೆ ಈ ಚುನಾವಣೆಯಲ್ಲಯೂ ಸಕ್ರಿಯವಾಗಿ ದುಡಿಯಬೇಕು, ಹೈ-ಕ ಪ್ರದೇಶದ ಸಮಸ್ಯೆಗಳ ನಿವಾರಣೆ, ಮತ್ತು ಆಗಬೇಕಾಗಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಪಕ್ಷಕ್ಕೆ ಹೆಚ್ಚು ಆಸಕ್ತಿ ಇದೆ, ಅಭ್ಯರ್ಥಿಯೂ ಕೂಡ ಜನಪರ ಚಿಂತನೆಯುಳ್ಳ ಅನುಭವಿಗಳಾಗಿದ್ದು ಇವರ ಗೆಲುವಿಗೆ ಶ್ರಮಿಸುವುಂತೆ ಕರೆ ನೀಡಿದರು.
ಇದಕ್ಕೂ ಮುಂವೆ ನಗರದ ಶ್ರೀಗವಿಸಿದ್ದೇಶ್ವರ ಮಹಾವಿದ್ಯಾಲಯ ಹಾಗೂ ಜಿಲ್ಲಾ ವಕೀಲರ ಸಂಘಕ್ಕೆ ತೆರಳಿ ಅಭ್ಯರ್ಥಿ ಕೆ.ಬಿ. ಶ್ರೀನಿವಾಸರಡ್ಡಿ ಜೊತೆ ಮತಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಶಾಸಕ ಪರಣ್ಣ ಮುನವಳ್ಳಿ, ಜಿಲ್ಲಾಧ್ಯಕ್ಷ ವಿರುಪಾಕ್ಷಪ್ಪ ಸಿಂಗನಾಳ, ಜಿಲ್ಲಾ ಬೂತ್ ಸಮಿತಿ ಅಧ್ಯಕ್ಷ ಅಮರೇಶ ಕರಡಿ, ರಾಘವೇಂದ್ರ ಪಾನಘಂಟಿ, ರಾಜು ಬಾಕಳೆ, ಈರಣ್ಣ ಗಾಣಿಗೇರ, ಬಸವರಾಜ ಭೋವಿ, ಚಂದ್ರ ನಾಯಕ, ಪಾಲಕ್ಷಪ್ಪ, ಸುರೇಶ ದೇಸಾಯಿ, ಸೇರಿದಂತೆ ಇತರರಿದ್ದರು.