fbpx

ಪ್ರಾಮಾಣಿಕ ಹೋರಾಟ ವರ್ಸಸ್ ಜಾತಿ,ಪಕ್ಷ ಮತ್ತು ದುಡ್ಡು

ಈ ಚುನಾವಣೆ ಪ್ರಾಮಾಣಿಕ ಜನಪರ ಹೋರಾಟ, ಸೇವೆಯ ಸತ್ವಪರೀಕ್ಷೆಯಾಗಿದೆ . ನಿಸ್ವಾರ್ಥದಿಂದ ಹೋರಾಟ ಮಾಡಿ ಪ್ರಾಮಾಣಿಕ ಪ್ರಯತ್ನ ಮಾಡಿ ಸೇವೆ ಮಾಡುತ್ತಿರುವ ಡಾ.ರಜಾಕ್ ಉಸ್ತಾದ್ ಗೆಲುವು ಈ ಭಾಗದ ಪದವೀಧರರ ಜನಪರ ನಿಲುವಿನ, ಅಭಿವೃದ್ದಿ ಪರ ಚಿಂತನೆಯ ಗೆಲುವಾಗಲಿದೆ.
ಈ ಚುನಾವಣೆಯಲ್ಲಿ ಪ್ರಾಮಾಣಿಕ ಹೋರಾಟ ಗೆಲ್ಲುತ್ತೋ ಅಥವಾ ಜಾತಿ,ಪಕ್ಷ ಮತ್ತು ದುಡ್ಡು ಗೆಲ್ಲುತ್ತೋ ಎನ್ನುವುದು ಕುತೂಹಲದ ಪ್ರಶ್ನೆಯಾಗಿದೆ.

ಕೊಪ್ಪಳ : ಇತ್ತೀಚಿನ ದಿನಗಳಲ್ಲಿ ಚುನಾವಣೆಗಳಲ್ಲಿ ಗೆಲ್ಲಬೇಕಾದರೆ ನಿಮ್ಮ ಹತ್ತಿರ ದುಡ್ಡು ಇರಬೇಕು, ಪಕ್ಷದ ಬಲವಿರಬೇಕು ಅದಕ್ಕಿಂತ ಮುಖ್ಯವಾಗಿ ಜಾತಿ ಇರಬೇಕು ಎನ್ನುವುದು ಪದೇ ಪದೇ ಸಾಭೀತಾಗುತ್ತಲೇ ಬಂದಿದೆ. ಇದು ಎಲ್ಲಾ ಚುನಾವಣೆಗಳಲ್ಲೂ ಕಂಡು ಬರುತ್ತಿರುವ ಸತ್ಯ. ಈ ರೋಗ ಈಗ ಶಿಕ್ಷಕರ ಕ್ಷೇತ್ರಕ್ಕೂ , ಪದವೀಧರ ಕ್ಷೇತ್ರಕ್ಕೂ ಕಾಲಿಟ್ಟು ಇಲ್ಲಿಯೂ ಗಬ್ಬೇಬ್ಬಿಸಿದೆ. ಪದವೀಧರರ ಬಗ್ಗೆ, ನೌಕರರ ಬಗ್ಗೆ, ನಿರುದ್ಯೋಗಿಗಳ ಬಗ್ಗೆ ಧ್ವನಿ ಎತ್ತಬೇಕಾದ ಜನ ಪ್ರತಿನಿಧಿಗಳಿಗೆ ಸಾಮಾಜಿಕ ಬದ್ದತೆ ಬಹಳ ಮುಖ್ಯ. ಆದರೆ ಈ ಕ್ಷೇತ್ರವೂ ಸಹ ಸಾಮಾನ್ಯ ಚುನಾವಣಾ ಕ್ಷೇತ್ರದಂತೆ ಜಾತಿ,ಪಕ್ಷ ಮತ್ತು ದುಡ್ಡಿನ ಪಾಲಾಗುತ್ತಿದೆ. ಇದು ಪ್ರಜ್ಞಾವಂತರಿಗೆಲ್ಲಾ ತಲೆ ತಗ್ಗಿಸಬೇಕಾದ ಸಂಗತಿ. ಪ್ರಜ್ಞಾವಂತ ನಾಯಕರನ್ನು ಆಯ್ಕೆ ಮಾಡಬೇಕಾದ ಪದವೀಧರರು, ಶಿಕ್ಷಕರು ಯಾವು ಯಾವುದೋ ಆಮಿಷಗಳಿಗೆ ಒಳಗಾಗಿ ರಾಜಕಾರಣಿಗಳನ್ನು ಆಯ್ಕೆ ಮಾಡುತ್ತಿದ್ದಾರೆ ಎನ್ನುವುದು ವಿಪರ‍್ಯಾಸದ ಸಂಗತಿ.
ಚುನಾವಣೆಯಲ್ಲಿ ಜವಾಬ್ದಾರಿಯುತ ಮತದಾರ ಆಯ್ಕೆ ಮಾಡುವುದು ಯಾರನ್ನು ಎನ್ನುವುದು ಬಹಳ ಮುಖ್ಯ. ಕಲಿತಿರುವ , ಪದವಿ ಪಡೆದಿರುವ ಮತದಾರ ಅಭಿವೃದ್ದಿ ಪರ ಇರುತ್ತಾರೋ, ಜನ ಪರ ಹೋರಾಟಗಳ ಪರ ಇದ್ದು ನಾಡು ನುಡಿಯ ಸಮಗ್ರ ಅಭಿವೃದ್ದಿಯ ಬಗ್ಗೆ ಯೋಚಿಸುತ್ತಾರೋ ಇಲ್ಲವೇ ಸಾಮಾನ್ಯ ಚುನಾವಣೆಗಳಂತೆ ಇಲ್ಲಿಯೂ ಜಾತಿ, ಪಕ್ಷ ಮತ್ತು ದುಡ್ಡಿನ ಆಮಿಷಗಳಿಗೆ ಒಳಗಾಗುತ್ತಾರೋ ಎನ್ನುವ ಚರ್ಚೆಗಳು ಎಲ್ಲ ಸಂದರ್ಭದಲ್ಲಿಯೂ ಇರುತ್ತವೆ. ಈಗ ನಡೆಯುತ್ತಿರುವ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆ ಸಹ ಬಹಳ ಮುಖ್ಯವಾಗಿದೆ. ಈ ಚುನಾವಣೆಯಲ್ಲಿಯೂ ಸಹ ದೊಡ್ಡ ದೊಡ್ಡ ಪಕ್ಷಗಳ ಅಭ್ಯರ್ಥಿಗಳು, ಪಕ್ಷೇತರರು ಸ್ಪರ್ದೆ ಮಾಡುತ್ತಿದ್ದಾರೆ. ಇಲ್ಲಿ ಪ್ರಮುಖವಾಗಿ ಮೂರು ಪಕ್ಷಗಳ ಅಭ್ಯರ್ಥಿಗಳು ಬಹಳಷ್ಟು ಪ್ರಬಲರಾಗಿದ್ದಾರೆ. ಇವರೊಂದಿಗೆ ೩೭೧ಜೆ ಮಾಸ್ಟರ‍್ ಮೈಂಡ್ ಎಂದೇ ಖ್ಯಾತರಾಗಿರುವ ಪ್ರಾಮಾಣಿಕ ಹೋರಾಟಗಾರ ಡಾ.ರಜಾಕ್ ಉಸ್ತಾದ್ ಸಹ ಕಣದಲ್ಲಿದ್ದಾರೆ. ವಾಟಾಳ್ ನಾಗರಾಜ್ ನಾನು ಸ್ಪರ್ಧಿ ಎನ್ನುತ್ತಿದ್ದಾರೆ. ಜೊತೆಗೆ ಪಕ್ಷೇತರ ಸದಸ್ಯರೂ ಇದ್ದಾರೆ. ಇಡೀ ಹೈದ್ರಾಬಾದ್ ಕರ್ನಾಟಕದಲ್ಲಿ ಡಾ.ರಜಾಕ್ ಉಸ್ತಾದ್ ಯಾರು? ಅವರ ಕೊಡುಗೆಗಳೇನು ಎನ್ನುವದು ಪ್ರತಿಯೊಬ್ಬ ಪದವೀಧರರಿಗೆ, ನೌಕರಸ್ಥರಿಗೆ ಹಾಗೂ ಜನಸಾಮಾನ್ಯರಿಗೂ ಗೊತ್ತು. ಕಳೆದ ಹಲವಾರು ವರ್ಷಗಳಿಂದ ಯಾವುದೇ ಸ್ವಾರ್ಥವಿಲ್ಲದೇ ನಿಸ್ವಾರ್ಥದಿಂದ ಹೋರಾಟದಲ್ಲಿ ತೊಡಗಿರುವ ಡಾ.ರಜಾಕ್ ಉಸ್ತಾದ್ ರಿಗೆ ಇಡೀ ಹೈದ್ರಾಬಾದ್ ಕರ್ನಾಟಕದ ಹೋರಾಟಗಾರರ ಬೆಂಬಲವಿದೆ. ಎಲ್ಲರೂ ಜೊತೆಯಾಗಿ ನಿಂತು ಗೆಲ್ಲಿಸುವ ಪಣ ತೊಟ್ಟು ಕೆಲಸ ಮಾಡುತ್ತಿದ್ದಾರೆ.
೩೭೧ಜೆ ಸರಿಯಾಗಿ ಅನುಷ್ಠಾನ ಮಾಡುವಲ್ಲಿ ಮೂರು ಪಕ್ಷಗಳು ತೋರುತ್ತಿರುವ ನಿರ್ಲಕ್ಷ್ಯ ಮತ್ತು ಹಕ್ಕುಗಳನ್ನು ದೊರಕಿಸಿಕೊಡುವಲ್ಲಿ ವಿಫಲರಾಗಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಈ ಹಿನ್ನೆಲೆಯಲ್ಲಿ ಹೋರಾಟ ಸಮಿತಿಯವರೆಲ್ಲರೂ ಸೇರಿಕೊಂಡು ಡಾ.ರಜಾಕ್ ಉಸ್ತಾದ್ ರನ್ನು ಕಣಕ್ಕಿಳಿಸಿ ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ. ೩೭೧ಜೆ ಯ ಲಾಭ ಪಡೆಯುತ್ತಿರುವ ಪ್ರತಿಯೊಬ್ಬರೂ ಡಾ.ರಜಾಕ್ ಉಸ್ತಾದ್ ರ ಗೆಲುವಿಗೆ ಶ್ರಮಿಸಬೇಕಾಗಿದೆ. ನಿರಂತರವಾಗಿ ಪ್ರಾಮಾಣಿಕ ಹೋರಾಟದ ಮೂಲಕ ೨೪ ತಾಸೂ ಎಲ್ಲರ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವ ಡಾ.ರಜಾಕ್ ಉಸ್ತಾದ್ ಆಯ್ಕೆಯಾದರೆ ವಿಧಾನಸೌಧದಲ್ಲಿ ನಮ್ಮೆಲ್ಲರ ಧ್ವನಿಯಾಗಿ ಕೆಲಸ ಮಾಡುವುದು ನಿಶ್ಚಿತ .
ಈ ಚುನಾವಣೆ ಪ್ರಾಮಾಣಿಕ ಜನಪರ ಹೋರಾಟ, ಸೇವೆಯ ಸತ್ವಪರೀಕ್ಷೆಯಾಗಿದೆ . ನಿಸ್ವಾರ್ಥದಿಂದ ಹೋರಾಟ ಮಾಡಿ ಪ್ರಾಮಾಣಿಕ ಪ್ರಯತ್ನ ಮಾಡಿ ಸೇವೆ ಮಾಡುತ್ತಿರುವ ಡಾ.ರಜಾಕ್ ಉಸ್ತಾದ್ ಗೆಲುವು ಈ ಭಾಗದ ಪದವೀಧರರ ಜನಪರ ನಿಲುವಿನ, ಅಭಿವೃದ್ದಿ ಪರ ಚಿಂತನೆಯ ಗೆಲುವಾಗಲಿದೆ.
ಈ ಚುನಾವಣೆಯಲ್ಲಿ ಪ್ರಾಮಾಣಿಕ ಹೋರಾಟ ಗೆಲ್ಲುತ್ತೋ ಅಥವಾ ಜಾತಿ,ಪಕ್ಷ ಮತ್ತು ದುಡ್ಡು ಗೆಲ್ಲುತ್ತೋ ಎನ್ನುವುದು ಕುತೂಹಲದ ಪ್ರಶ್ನೆಯಾಗಿದೆ.

Please follow and like us:
error
error: Content is protected !!