ಪ್ರಾಣೇಶ ಮತದಾನ ಜಾಗೃತಿ ಮೂಡಿಸಲು ಅರ್ಹರಲ್ಲ

ಕೊಪ್ಪಳ : ಮಾ.೨೬, ಎಪ್ರೀಲ ೨೩ ರಂದು ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಗಂಗಾವತಿ ಪ್ರಾಣೇಶರವರು ಮತದಾನ ಜಾಗೃತಿ ಮೂಡಿಸಲು ‘ಐಕಾನ್’ಆಗಿ ನೇಮಿಸಿದ್ದು ಅವರು ಮತದಾನ ಜಾಗೃತಿ ಮೂಡಿಸಲು ಅರ್ಹರಲ್ಲ ಎಂದು ಎಂದು ಸಿಪಿಐಎಂಎಲ್‌ನ ರಾಜ್ಯ ಸ್ಥಾಯಿ ಸಮಿತಿಯ ಭಾರಧ್ವಾಜ ರವರು ಒತ್ತಾಯಿಸಿದ್ದಾರೆ.
ಗಂಗಾವತಿ ಪ್ರಾಣೇಶರವರು ಬಾಲ್ಯದಿಂದಲೂ ಆರ್.ಎಸ್.ಎಸ್ ಪ್ರಭಾವದಿಂದ ಮನುವಾದದ ಪ್ರತಿಪಾದಕರಾಗಿದ್ದಾರೆ. ಅವರ   ಭಾಷಣದಲ್ಲಿ ಕೂಡಾ ಅಲ್ಪಸಂಖ್ಯಾತರನ್ನು, ದಲಿತರನ್ನು, ಶೂದ್ರರನ್ನು ಹೀಯಾಳಿಸಿ ಹಾಸ್ಯವನ್ನು ಸೃಷ್ಠಿ ಮಾಡುತ್ತಾರೆ. ಇದು ಇಡೀ ರಾಜ್ಯದ ಜನರಿಗೆ ಗೊತ್ತಿದೆ. ಪ್ರಾಣೇಶರವರನ್ನು ‘ಐಕಾನ್’ ಆಗಿ ನೇಮಕ ಮಾಡಿದ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ನೂರಾರು ಜನ ಅವರನ್ನು ವಿಮರ್ಶೆ ಮಾಡಿದ್ದಾರೆ.
ಚುನಾವಣೆಯಲ್ಲಿ ಮತದಾನ ಹೆಚ್ಚು ಮಾಡಿಲಸು ಸರ್ಕಾರ ಮಾಡುವ ಪ್ರಯತ್ನಕ್ಕೆ ಪ್ರಾಣೇಶರವರನ್ನು ನೇಮಕ ಮಾಡುವುದರಿಂದ ಅವರು ಒಂದು ಪಕ್ಷಕ್ಕೆ ಪ್ರಚಾರ ಮಾಡಲು ಅನುಕೂಲವಾಗುತ್ತದೆ.
ಆದ್ದರಿಂದ ಮತದಾನ ಜಾಗೃತಿ ಮೂಡಿಸಲು ಪ್ರಾಣೇಶರವರನ್ನು ಜಿಲ್ಲೆಯ ಐಕಾನ ಜವಾಬ್ದಾರಿಯಿಂದ ಬಿಡುಗಡೆಗೊಳಿಸಿ ಎಲ್ಲಾ ಪಕ್ಷಗಳನ್ನು ಸಮನಾಗಿ ಕಾಣುವ ಹಾಗೂ ಮತದಾನ ಹೆಚ್ಚು ಮಾಡಿಸುವಲ್ಲಿ ಪ್ರಯತ್ನ ಮಾಡುವ ವ್ಯಕ್ತಿಯನ್ನು ಐಕಾನ್ ಆಗಿ ನೇಮಕ ಮಾಡಬೇಕೆಂದು ಸಿಪಿಐಎಂಎಲ್ ಪಕ್ಷ ಒತ್ತಾಯಿಸುತ್ತದೆ.
ಈಲ್ಲೆಯಲ್ಲಿ ಮತದಾನ ಹೆಚ್ಚು ಮಾಡಿಸಲು ಜನರಲ್ಲಿ ಪ್ರಜ್ಷೆ ಮೂಡಿಸುವ ಸಮಾವೇಶಗಳಲ್ಲಿ ಗಂಗಾವತಿ ಪ್ರಾಣೇಶರವರು ಭಾಗವಹಿದರೆ ಜನರು ಆಕ್ರೋಶಗೊಳ್ಳುತ್ತಾರೆ ಎಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಭಾರಧ್ವಾಜ್, ವಿಠ್ಠಪ್ಪ ಗೋರಂಟ್ಲಿ, ಸಣ್ಣ ಹನುಮಪ್ಪ, ಬಸವರಾಜ ಶೀಲವಂತರ, ಕೆಂಚಪ್ಪ ಪಾಮಣ್ಣ ಸೇರಿದಂತೆ ಇತರರು ಇದ್ದರು.

Please follow and like us:
error