ಪೂಜಾ ಹಾಗೂ ಧಾರ್ಮಿಕ ಸ್ಥಳಗಳನ್ನು ಪ್ರಚಾರಕ್ಕೆ ಬಳಸುವಂತಿಲ್ಲ- ಸಿ.ಡಿ. ಗೀತಾ

ಚುನಾವಣಾ ನೀತಿ ಸಂಹಿತೆಯನ್ನು ಪಾಲಿಸುವ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು, ರಾಜಕೀಯ ಮುಖಂಡರು ಯಾವುದೇ ಪೂಜಾ ಹಾಗೂ ಧಾರ್ಮಿಕ ಸ್ಥಳಗಳನ್ನು ಪ್ರಚಾರ ಕಾರ್ಯಕ್ಕೆ ಬಳಸುವಂತಿಲ್ಲ. ನಿಯಮ ಉಲ್ಲಂಘನೆ ಕಂಡುಬಂದಲ್ಲಿ ಕೂಡಲೆ ಅಗತ್ಯ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕೊಪ್ಪಳ ವಿಧಾನಸಭಾ ಕ್ಷೇತ್ರ ಚುನಾವಣಾಧಿಕಾರಿ ಸಿ.ಡಿ. ಗೀತಾ ಅವರು ಸೆಕ್ಟರ್ ಅಧಿಕಾರಿಗಳು ಹಾಗೂ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳಿಗೆ ಸೂಚನೆ ತಿಳಿಸಿದರು.
ಕೊಪ್ಪಳ ವಿಧಾನಸಭೆ ಚುನಾವಣೆ ಸಂಬಂಧ ಕ್ಷೇತ್ರದಲ್ಲಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸುವ ಕುರಿತಂತೆ ತಹಸಿಲ್ದಾರರ ಕಚೇರಿ ಸಭಾಂಗಣದಲ್ಲಿ ಫ್ಲೈಯಿಂಗ್ ಸ್ಕ್ವಾಡ್, ಸೆಕ್ಟರ್ ಅಧಿಕಾರಿಗಳು, ಸೇರಿದಂತೆ ವಿವಿಧ ಇಲಾಖೆಗಳೊಂದಿಗೆ ಬುಧವಾರದಂದು ಏರ್ಪಡಿಸಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ಲೈಯಿಂಗ್ ಸ್ವ್ಕಾರ್ಡ, ಸೆಕ್ಟರ್ ಆಪೀಸರಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಚುನಾವಣಾ ಕತ್ಯರ್ವದಲ್ಲಿ ನಿರಂತರವಾಗಿ ೨೪*೭ ಸಮಯ ಅಧಿಕಾರಿಗಳು ತೊಡಗಿಸಿಕೊಳ್ಳಬೇಕಿದೆ. ತಾಲೂಕ ತಹಸಿಲ್ದಾರರ ಕಛೇರಿಯಲ್ಲಿ ಕಂಟ್ರೋಲ್ ರೂಂ ತೆರೆಯಲಾಗಿದ್ದು ದೂರವಾಣಿ ಸಂಖ್ಯೆ:೦೮೫೩೯-೨೨೨೨೪೧ ಆಗಿರುತ್ತದೆ. ಯಾವುದೇ ದೂರುಗಳಲ್ಲಿದ್ದಲ್ಲಿ ಈ ನಂಬರಗೆ ಫೋನ್ ಮಾಡಿ ಕಾರ್ಯನಿರ್ವಹಿಸಲು ಸೂಚಿಸಲಾಯಿತು. ಹಾಗೂ. ರಾತ್ರಿ ೧೦-೦೦ ಗಂಟೆಯ ನಂತರ ಯಾವುದೇ ಧ್ವನಿ ವರ್ಧಕಗಳನ್ನು ಬಳಸುವಂತಿಲ್ಲ. ಯಾವುದೇ ನಾಟಕ ಪ್ರದರ್ಶನಗಳಿದ್ದಲ್ಲಿ, ರಾತ್ರಿ ೧೦ ಗಂಟೆಯೊಳಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಚುನಾವಣಾ ನೀತಿ ಸಂಹಿತೆ ಚಾರಿಯಲ್ಲಿರುವದರಿಂದ ಪೂಜಾ ಸ್ಥಳಗಳನ್ನು ಚುನಾವಣೆ ಪ್ರಚಾರಕ್ಕಾಗಿ ಬಳಸಬಾರದು. ಕಾರ್ಯಕ್ರಮ, ಮೆರವಣಿಗೆಯಂತಹ ಸಂದರ್ಭಗಳಲ್ಲಿ ಅಧಿಕಾರಿಗಳು ಮುಂಜಾಗ್ರತೆಯಾಗಿ ೧ ಗಂಟೆ ಮುಂಚಿತವಾಗಿ ಸಭೆ ನಡೆಯುವ ಸ್ಥಳದಲ್ಲಿ ಹಾಜರಿದ್ದು ಕ್ಯಾಮೇರಾದಲ್ಲಿ ನಿಮ್ಮ ಪರಿಚಯ ಹೇಳಿಕೊಂಡು ಅಲ್ಲಿ ಎಷ್ಟು ಟೇಬಲ್ ಎಷ್ಟು ಖುರ್ಚಿ ಇದೆ ಇಲ್ಲಾ ವಿವರಗಳನ್ನು ನೀಡುವ ಮೂಲಕ ಚಿತ್ರೀಕರಿಸಿಕೊಳ್ಳಬೇಕು. ಪ್ಲೈಯಿಂಗ್ ಸ್ವ್ಕಾರ್ಡ ಮತ್ತು ಸೆಕ್ಟರ್ ಆಪೀಸರಗಳಿಗೆ ಚುನಾವಣಾ ಕಾರ್ಯಗಳ ಪ್ರಾರಂಭದಿಂದ ಮುಕ್ತಾಯವರೆಗೂ ಅವರದೇ ಆದ ಸಂಪೂರ್ಣ ಜವಾಬ್ದಾರಿಯಾಗಿರುತ್ತದೆ ಎಂದು ತಿಳಿಸಿದರು
ಯಾವುದೇ ಕಾರ್ಯಕ್ರಮ ಮುಕ್ತಾಯವಾದ ೨ ಗಂಟೆ ಒಳಗಾಗಿ ಬ್ಯಾನರ್. ಪೋಸ್ಟರಗಳನ್ನು ತೆರೆವುಗೊಳಿಸಬೇಕು. ಸಾರ್ವಜನಿಕ ಆಸ್ತಿಯ ಮೇಲೆ, ಸಂಬಂದಪಟ್ಟವರ ಆಸ್ತಿಯ ಮಾಲೀಕರ ಅನುಮತಿ ಇಲ್ಲದೆ ಪೋಸ್ಟರಗಳನ್ನು ಅಂಟಿಸತಕ್ಕದ್ದಲ್ಲ, ವಿಮಾನ ಹೆಲಿಕಾಪ್ಟರ್ ನಲ್ಲಿ ತಪಾಸನೆ ನಡೆಸಬೇಕು. ಅಭ್ಯರ್ಥಿಗಳ ಚುನಾವಣಾ ಪ್ರಚಾರಕ್ಕಾಗಿ ರೂ ೨೮ ಲಕ್ಷ ಮೀರಬಾರದು. ಹಾಗೂ ಬೈಕ್ ರ‍್ಯಾಲಿಯಲ್ಲಿ ೧೦ ವಾಹನಗಳಿಗಿಂತ ಹೆಚ್ಚಿನ ವಾಹನ ಇದ್ದರೆ ಅದು ನೀತೀ ಸಂಹಿತೆ ಉಲ್ಲಂಘಣೆಯಾಗುತ್ತದೆ ಒಬ್ಬ ಅಭ್ಯರ್ಥಿಗೆ ೩ ವಾಹನಗಳನ್ನು ಮಾತ್ರ ಪ್ರಚಾರಕ್ಕಾಗಿ ಬಳಸಬಹುದು .ಕೆಡಿ.ಪಿ ಸಭೆಗಳನ್ನು ನಡೆಸುವಂತಿಲ್ಲ, ಪ್ರಚಾರ ವೇಳೆಯಲ್ಲಿ ಹಣ, ಉಡುಗೊರೆ, ಹಂಚಿಕೆ ಕಂಡುಬಂದರೆ ಪ್ಲೈಯಿಂಗ್ ಸ್ವ್ಕಾರ್ಡ, ಹಾಗೂ ವೀಡಿಯೋ ಗ್ರಾಪೀಕ್ ಟೀಮ್ ಗೆ ತಿಳಿಸುವುದು ಹೀಗೇ ಹಲವಾರು ವಿಷಯಗಳ ಬಗ್ಗೆ ಸಭೆಯಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆಯನ್ನು ಸಿ.ಡಿ. ಗೀತಾ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ನೀಡಿದರು.
ಹೊಸ ಕಾಮಗಾರಿ ಪ್ರಾರಂಭಿಸುವಂತಿಲ್ಲ : ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಸಂದರ್ಭದಲ್ಲಿ ವಿವಿಧ ಇಲಾಖೆಗಳ ಅನುಷ್ಠಾನಾಧಿಕಾರಿಗಳು ಯಾವುದೇ ಹೊಸ ಕಾಮಗಾರಿಗಳನ್ನು ಪ್ರಾರಂಭಿಸುವಂತಿಲ್ಲ. ಗ್ರಾಮೀಣ ನೀರು ಮತ್ತು ಸರಬರಾಜು ಇಲಾಖೆ. ಲಕೋಪಯೋಗಿ ಇಲಾಖೆ, ಜಿಲ್ಲಾ ಪಂಚಾಯತ ಇಂಜಿನಿಯರ್ ವಿಭಾಗ, ಭೂಸೇನಾ ನಿಗಮ, ನಗರಸಬೆ ಆಯುಕ್ತರು ಕೊಪ್ಪಳ, ಪಟ್ಟಣ ಪಂಚಾತಂii ಬಾಗ್ಯನಗರ ಅಲ್ಲದೆ ವಿವಿಧ ಇಲಾಖೆಗಳ ಅನುಷ್ಠಾನ ಅಧಿಕಾರಿಗಳು, ನೀತಿ ಸಂಹಿತೆ ಅವಧಿಯಲ್ಲಿ ಯಾವುದೇ ಹೊಸ ಕಾಮಗಾರಿ ಪ್ರಾರಂಭಿಸುವಂತಿಲ್ಲ. ಹೀಗಾಗಿ ಸದ್ಯ ಚಾಲ್ತಿಯಲ್ಲಿರುವ ಕಾಮಗಾರಿಗಳ ವಿವರವಾದ ಮಾಹಿತಿಯನ್ನು ಕೂಡಲೆ ಚುನಾವಣಾಧಿಕಾರಿಗಳಿಗೆ ಸಲ್ಲಿಸಬೇಕು. ಕಛೇರಿಯಲ್ಲಿ ಆವರಣದಲ್ಲಿರುವ ನೀತಿಸಂಹಿತೆ ಉಲ್ಲಂಘನೆಯಾಗುವ ಎಲ್ಲಾ ಚಿತ್ರಗಳನ್ನು ತೆರವುಗೊಳಿಸಬೇಕು ಎಂದು ಸೂಚನೆ ನೀಡಲಾಯಿತು.
ಸಭೆಯಲ್ಲಿ ಸಹಾಯಕ ಚುನಾವಣಾಧಿಕಾರಿ ಗುರುಬಸವರಾಜ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.