ನಿಪ್ಪಾಣಿ: ಬಿಜೆಪಿ ಮತ್ತು ಎಂಇಪಿ ಪಕ್ಷದ ಪ್ರಚಾರ ಸಾಮಗ್ರಿಗಳು ಒಂದೇ ಲಗೇಜ್ ನಲ್ಲಿ ಪತ್ತೆ!  

ಬೆಳಗಾವಿ, ಎ.16: ಬಿಜೆಪಿ ಹಾಗು ಮಹಿಳಾ ಎಂಪವರ್ ಮೆಂಟ್ ಪಾರ್ಟಿಯ (ಎಂಇಪಿ) ಪ್ರಚಾರ ಸಾಮಗ್ರಿಗಳು ಒಂದೇ ವಾಹನದಲ್ಲಿ ಪತ್ತೆಯಾಗಿರುವ ಘಟನೆ ನಿಪ್ಪಾಣಿಯ ಸುಲಗಾದಲ್ಲಿ ನಡೆದಿದೆ.

40 ಸಾವಿರಕ್ಕೂ ಅಧಿಕ ಎಂಇಪಿ ಚಿಹ್ನೆಯಳ್ಳ ಟೋಪಿಗಳು ಹಾಗು ಬಿಜೆಪಿಯ 3500 ಶಾಲುಗಳನ್ನು ಬ್ಯಾಗ್ ಗಳಲ್ಲಿ ಪ್ಯಾಕ್ ಮಾಡಿ ಒಂದೇ ಲಗೇಜ್ ನಲ್ಲಿ ಇರಿಸಲಾಗಿದ್ದು, ಬಸ್ಸೊಂದರಲ್ಲಿ ಸಾಗಿಸಲಾಗುತ್ತಿತ್ತು. ಮಾಮೂಲಿ ತಪಾಸಣೆಗಾಗಿ ಸುಲಗಾದಲ್ಲಿರುವ ಚೆಕ್ ಪೋಸ್ಟ್ ನಲ್ಲಿ ಬಸ್ ನಿಲ್ಲಿಸಿದಾಗ ಪೊಲೀಸರು ಹಾಗು ಸಿಬ್ಬಂದಿ ಬಸ್ ತಪಾಸಣೆ ಮಾಡಿದ್ದಾರೆ.

ಈ ಸಂದರ್ಭ ಬಸ್ ನಲ್ಲಿ ಎಂಇಪಿ ಹಾಗು ಬಿಜೆಪಿ ಪಕ್ಷದ ಪ್ರಚಾರ ಸಾಮಗ್ರಿಗಳು ಪತ್ತೆಯಾಗಿವೆ. ಈ ಬಸ್ ಮುಂಬೈಯಿಂದ ಬೆಂಗಳೂರಿಗೆ ತೆರಳುತ್ತಿತ್ತು. ಬಸ್ ಚಾಲಕನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

varthabharati