ನಮ್ಮದು ಹಗರಣ ಮುಕ್ತ ಸರ್ಕಾರ-ಶಾಸಕ ಕೆ.ರಾಘವೇಂದ್ರ ಹಿಟ್ನಾಳ

ಕೊಪ್ಪಳ,   ಬಂಡಿ ಹರ್ಲಾಪುರ ಜಿಲ್ಲಾ ಪಂಚಾಯತ ವ್ಯಾಪ್ತಿಯ ಗ್ರಾಮಗಳಾದ ಅಗಳಕೇರಾ, ಬಂಡಿ ಹರ್ಲಾಪುರ, ಶಿವಪುರ ಗ್ರಾಮಗಳಲ್ಲಿ ಮನೆಮನೆಗೆ ತೆರಳಿ ಮತಯಾಚನೆ ಮಾಡಿ ಬಳಿಕ ಮಾತನಾಡಿದ ಕಾಂಗ್ರೇಸ್ ಅಭ್ಯರ್ಥಿ ಕೆ.ರಾಘವೇಂದ್ರ ಹಿಟ್ನಾಳ್ ರವರು ಭ್ರಷ್ಟಾಚಾರಿಗಳಿಂದ ಕಾಂಗ್ರೇಸ್‌ನವರು ಪಾಠ ಕಲಿಯಬೇಕಾಗಿಲ್ಲ, ದಕ್ಷಿಣ ಭಾರತದ ಮೊದಲ ಬಿ.ಜೆ.ಪಿ ಸರ್ಕಾರವೆಂದು ಜಂಬ ಕೊಚ್ಚಿದ ಯಡಿಯೂರಪ್ಪನವರ ಸರ್ಕಾರವು ಹಗರಣಗಳ ಸರಮಾಲೆಯನ್ನು ಕೊರಳಿಗೆ ಸುತ್ತಿಕೊಂಡಿತ್ತು. ಕಾಂಗ್ರೇಸ್ ಸರ್ಕಾರದ ಮುಖ್ಯ ಸಿದ್ಧರಾಮಯ್ಯನವರ ಈ ಐದು ವರ್ಷದ ಅವಧಿಯಲ್ಲಿ ಎದುರಾಳಿಗಳಿಗೆ ಒಂದೇ ಒಂದು ಹಗರಣವನ್ನು ಸಾಬೀತು ಮಾಡಲಾಗಲಿಲ್ಲ. ರಾಜ್ಯವನ್ನು ಹಸಿವು ಮುಕ್ತ ಕರ್ನಾಟಕವನ್ನಾಗಿ ಮಾಡಿದ ಶ್ರೇಯಸ್ಸು ದೇಶದಲ್ಲಿಯೇ ಪ್ರಥಮ ರಾಜ್ಯ ನಮ್ಮದಾಗಿದೆ. ಬಡವರ ದೀನ ದಲಿತರ ಶೋಷಿತ ವರ್ಗಗಳ ಅಲ್ಪ ಸಂಖ್ಯಾತರ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಧ್ವನಿಯಾದ ಸಿದ್ಧರಾಮ್ಮನವರ ಸರ್ಕಾರಕ್ಕೆ ರಾಜ್ಯದಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದ್ದು, ರಾಜ್ಯ ಹಾಗೂ ಕೊಪ್ಪಳ ಕ್ಷೇತ್ರದಲ್ಲಿ ಮತ್ತೋಮ್ಮೆ ಕಾಂಗ್ರೇಸ್ ರಣ ಕಹಳೆ ಮೊಳಗಿಸಲಿದೆ ಎಂದು ಹೇಳಿ ಬಿ.ಜೆ.ಪಿ ನಾಯಕರ ವಿರುದ್ಧ ಕಿಡಿಕಾರಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರುಗಳಾದ ಸುರೇಶ ಭೂಮರೆಡ್ಡಿ, ತಾ.ಪಂ.ಅಧ್ಯಕ್ಷ ಬಾಲಚಂದ್ರನ್, ಗ್ರಾ.ಪಂ.ಅಧ್ಯಕ್ಷ ರೇಣುಕಮ್ಮ ಕಟಿಗಿ, ಮುಖಂಡರುಗಳಾದ ಟಿ.ಜನಾರ್ಧನ್ ಹುಲಿಗಿ, ವೆಂಕಟೇಶ ಕಂಪಸಾಗರ, ವಿಶ್ವನಾಥ ರಾಜು, ದೇವಣ್ಣ ಮೇಕಾಳಿ, ವೆಂಕಟೇಶ ಅಗಳಕೇರಾ, ಯಂಕಪ್ಪ ಹೋಸಳ್ಳಿ, ಹನುಮಂತ ಹ್ಯಾಟಿ, ಚನ್ನಕೃಷ್ಣ, ಅಬೂಲಿಲಿಂಗಪ್ಪ, ನಾಗರಾಜ ಪಟವಾರಿ, ಕೌಶಲ ಚೋಪ್ರಾ, ಗುರುಬಸವರಾಜ ಹಳ್ಳಕೇರಿ, ಹಾಗೂ ವಕ್ತಾರ ಅಕ್ಬರ್ ಪಾಷಾ ಪಲ್ಟನ್ ಇತರರು ಉಪಸ್ಥಿತರಿದ್ದರು.

Please follow and like us:
error