ನಗರದ ಅಭಿವೃದ್ಧಿಗೆ ಬಿಜೆಪಿಗೆ ಮತ ಹಾಕಿ: ಗವಿಸಿದ್ದಪ್ಪ ಕರಡಿ

೨೪ನೇ ವಾರ್ಡ್‌ನಲ್ಲಿ ಪ್ರಚಾರಸಭೆ | ಕಾಂಗ್ರೆಸ್‌ನ ಹಲವು ಯುವಕರು ಬಿಜೆಪಿ ಸೇರ್ಪಡೆ

ಕೊಪ್ಪಳ:
ಐದು ವರ್ಷಗಳ ಕಾಲ ಅಧಿಕಾರ ಅನುಭವಿಸಿದ ಕಾಂಗ್ರೆಸ್ ಶಾಸಕರು ಕೊಪ್ಪಳ ನಗರವನ್ನು ಅಭಿವೃದ್ಧಿ ಮಾಡದೇ ಕೇವಲ ಅಕ್ರಮ ದಂಧೆಗಳಲ್ಲಿ ತೊಡಗಿದ್ದಾರೆ. ನಗರವನ್ನು ಸಮಗ್ರ ಅಭಿವೃದ್ಧಿ ಮಾಡುವ ಸಲುವಾಗಿ ಈ ಬಾರಿ ಬಿಜೆಪಿ ಅಭ್ಯರ್ಥಿ ಅಮರೇಶ್ ಕರಡಿಯವರನ್ನು ಗೆಲ್ಲಿಸಬೇಕು ಎಂದು ಜಿಪಂ ಸದಸ್ಯ ಗವಿಸಿದ್ದಪ್ಪ ಕರಡಿ ಮನವಿ ಮಡಿದರು.
ಅವರು ಕೊಪ್ಪಳ ನಗರದ ೨೪ನೇ ವಾರ್ಡ್‌ನಲ್ಲಿ ಯುವಕರೊಂದಿಗೆ ಪ್ರಚಾರಸಭೆ ನಡೆಸಿದ ಅವರು, ಕೊಪ್ಪಳ ನಗರ ಇಂದಿಗೂ ಸಹ ಧೂಳಿನಿಂದ ಕೂಡಿದೆ. ಅಧಿಕಾರದಲ್ಲಿದ್ದವರು ಉತ್ತಮ ರಸ್ತೆ, ಚರಂಡಿ ವ್ಯವಸ್ಥೆ ಮಾಡುವ ಬದಲು ಇನ್ನೇನು ಚುನಾವಣೆ ಸಮೀಪಿಸುವ ಸಂದರ್ಭದಲ್ಲಿ ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ. ನಾಲ್ಕುವರೆ ವರ್ಷ ನಿದ್ದೆ ಮಾಡಿದ್ದ ಶಾಸಕ, ಸರ್ಕಾರ ಕೊನೆ ಗಳಿಗೆಯಲ್ಲಿ ಎಚ್ಚರಗೊಂಡಿದೆ. ಇಂತಹ ಸರ್ಕಾರದಿಂದ ನಗರಪ್ರದೇಶ ಉದ್ಧಾರವಾಗುವುದಾದರು ಎಂದು ಪ್ರಶ್ನಿಸಿದರು.
ಕೇಂದ್ರ ಸರ್ಕಾರದಿಂದ ಜಿಲ್ಲೆಗೆ ರಾಷ್ಟ್ರೀಯ ಹೆದ್ದಾರಿಗಳನ್ನು ತಂದಿದ್ದಾರೆ. ಕೊಪ್ಪಳ ನಗರದ ಹೊರವಲಯದಲ್ಲಿ ಬೈಪಾಸ್ ಆಗಿದ್ದು ನಮ್ಮ ತಂದೆಯವರ ಪ್ರಯತ್ನದಿಂದ. ಇದೀಗ ನಗರದ ಮಧ್ಯೆ ಹಾಯ್ದು ಹೋಗಿರುವ ಹೆದ್ದಾರಿಯನ್ನು ಸಿಆರ್‌ಎಫ್ ನಿಧಿಯಿಂದ ಸಂಪೂರ್ಣ ಸಿಮೆಂಟ್ ರಸ್ತೆಯನ್ನು ನಿರ್ಮಾಣ ಮಾಡಲಾಗುತ್ತಿದೆ. ಹೀಗೆ ಹತ್ತು ಹಲವು ಯೋಜನೆಗಳನ್ನು ಸಂಸದರು ಕೊಪ್ಪಳಕ್ಕೆ ತಂದಿದ್ದಾರೆ. ಮುಂದಿನ ದಿನಗಳಲ್ಲಿ ಇಡೀ ಕೊಪ್ಪಳ ಕ್ಷೇತ್ರ, ಜಿಲ್ಲೆ ಸಮಗ್ರ ಅಭಿವೃದ್ಧಿಯಾಗಲು ಬಿಜೆಪಿಗೆ ಮತ ನೀಡಿ ರಾಜ್ಯದಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗುವಂತೆ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ. ಯುವಕರು ಹೆಚ್ಚು ಪ್ರಚಾರದಲ್ಲಿ ತೊಡಗಿ ಬೆಜೆಪಿ ಗೆಲ್ಲಿಸಬೇಕು ಎಂದು ಕೋರಿದರು.
ಇದೇ ಸಂದರ್ಭದಲ್ಲಿ ಗವಿಸಿದ್ದಪ್ಪ ಕರಡಿ ನೇತೃತ್ವದಲ್ಲಿ ೧೫ಕ್ಕೂ ಹೆಚ್ಚು ಯುವಕರು ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಗೊಂಡರು. ಮುಖಂಡ ಗವಿ ಜಂತಕಲ್, ಬಸವರಾಜ ನೀರಲಗಿ, ಸಂಜಯ್ ಕಟವಾಟೆ, ಬಾಬಣ್ಣ ಭುಜಂಗಾರ್, ಸಂತೋಷ್ ಪವಾರ್, ಚಂದ್ರು ಛಲವಾದಿ, ಉದಯ್ ಕಲಾಲ್, ವಕೀಲ್ ರಾಕೇಶ್ ಪಾನಘಂಟಿ, ರವಿಚಂದ್ರ ಮಾಲಿಪಾಟೀಲ್, ಸಂತೋಷ್ ಟಣಕನಕಲ್, ನಾಗರಾಜ್ ಕಂದಗಲ್ಲ.

Please follow and like us:
error