You are here
Home > Election_2018 > ತರಕಾರಿ ಮಾರುಕಟ್ಟೆಯಲ್ಲಿ ಮತಗಟ್ಟೆ : ದುರ್ವಾಸನೆಯಿಂದ ಕೆಲಸ ಮಾಡಲು ಹಿಂದೇಟು ಹಾಕಿದ ಅಧಿಕಾರಿಗಳು

ತರಕಾರಿ ಮಾರುಕಟ್ಟೆಯಲ್ಲಿ ಮತಗಟ್ಟೆ : ದುರ್ವಾಸನೆಯಿಂದ ಕೆಲಸ ಮಾಡಲು ಹಿಂದೇಟು ಹಾಕಿದ ಅಧಿಕಾರಿಗಳು

Gangavati News  ಮಾರ್ಕೆಟ್ ನಲ್ಲಿ ಮತಗಟ್ಟೆ ತೆರೆದ ಹಿನ್ನೆಲೆ, ದುರ್ವಾಸನೆಯಿಂದ ಮತಗಟ್ಟೆಯಲ್ಲಿ ಕೆಲಸ ಮಾಡಲು ಅಧಿಕಾರಿಗಳು ಹಿಂದೇಟು ಹಾಕಿರುವ ಘಟನೆ ಜರುಗಿದೆ.ಕೊಪ್ಪಳ ಜಿಲ್ಲೆಯ ಗಂಗಾವತಿಯ 25 ನೇ ವಾರ್ಡ್ ನಲ್ಲಿರುವ ಮೂರು ಮತಗಟ್ಟೆಗಳ ಸುತ್ತ ಗಬ್ಬು ವಾಸನೆ ಬಂದ  ಹಿನ್ನೆಲೆ ಮತಗಟ್ಟೆಗಳಿಗೆ ತೆರಳಿದ  ಅಧಿಕಾರಿಗಳು ನಾವು ಕೆಲಸ ಮಾಡುವುದಿಲ್ಲ ಅಂತ ಹಿಂದೇಟು ಹಾಕಿದರು. ಈ ಬಗ್ಗೆ ತಹಶೀಲ್ದಾರಿಗೆ ಮಾಹಿತಿ ನೀಡಿದ ಬೂತ್ ಅಧಿಕಾರಿಗಳು ನಂತರ  ಬೂತ್ ಪಕ್ಕ ಬ್ಲೀಚಿಂಗ್ ಪೌಡರ್ ಹಾಕಿಸಿದರು ಆದ್ರೂ  ವಾಸನೆ ನಿಂತಿರಲಿಲ್ಲ. ನಂತರ ವಿಷಯ ತಿಳಿದ ಮಾಧ್ಯಮಗಳು ಸ್ಥಳಕ್ಕೆ ತೆರಳಿ ವರದಿ ಮಾಡಿದಾಗ ಎಚ್ಚೆತ್ತುಕೊಂಡ ಅಧಿಕಾರಿಗಳು ಬೂತ್ ಪಕ್ಕ ಮರಮ್ ತರಿಸಿ ಹಾಕಿಸಿದರು. ಈ ಘಟನೆ ಜರುಗಿದ್ದು, ಗಂಗಾವತಿಯ 8, 9 ನೇ ವಾರ್ಡ್ ಮೆಹಬೂಬ್ ನಗರದಲ್ಲಿನ 22,23, 25 ಬೂತ್ ಬಳಿ. ಮಾರ್ಕೆಟ್ ನ ತ್ಯಾಜ್ಯದಿಂದ  ಈ ದುರ್ವಾಸನೆ ಬೀರುತ್ತಿತ್ತು.

Top