ಡಿಸಿಸಿಗೆ K.ಬಸವರಾಜ್ ಹಿಟ್ನಾಳ ರಾಜೀನಾಮೆ : ನೂತನ ಅಧ್ಯಕ್ಷರಾಗಿ ಶಿವರಾಜ್ ತಂಗಡಗಿ !

ಕೊಪ್ಪಳ : ಚುನಾವಣಾ ಸೋಲಿನ ನೈತಿನ ಹೊಣೆ ಹೊತ್ತು ಕೊಪ್ಪಳ ಕಾಂಗ್ರೆಸ್ ನ ಜಿಲ್ಲಾಧ್ಯಕ್ಷ ಬಸವರಾಜ್ ಹಿಟ್ನಾಳ ರಾಜೀನಾಮೆ ಸಲ್ಲಿಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಐದೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ನ್ನು ಗೆಲ್ಲಿಸಿತರುವ ಭರವಸೆ ನೀಡಿದ್ದ ಬಸವರಾಜ್ ಹಿಟ್ನಾಳ ೩ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸೋತಿದ್ದಕ್ಕೆ ನೈತಿಕ ಹೊಣೆಗಾರಿಕೆ ಹೊತ್ತು ರಾಜೀನಾಮೆ ಸಲ್ಲಿಸಿದ್ದಾರೆ. ಜಿ.ಪರಮೇಶ್ವರರಿಗೆ ೭-೬-೨೦೧೮ರಂದು ಸಲ್ಲಿಸಿರುವ ರಾಜೀನಾಮೆ ಪತ್ರದಲ್ಲಿ ಉಳಿದ ಮೂರು ಸ್ಥಾನಗಳಲ್ಲಿ ಸೋಲಲು ಅಲ್ಲಿಯ ಅಭ್ಯರ್ಥಿಗಳ ಸ್ವಯಂಕೃತ ಅಪರಾದವೇ ಕಾರಣ , ಸ್ವತಂತ್ರವಾಗಿ ಕಾಂಗ್ರೆಸ್ ಪಕ್ಷದ ಸರಕಾರ ರಚನೆಯಾಗದ್ದಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
ಬಸವರಾಜ್ ಹಿಟ್ನಾಳ ರಾಜೀನಾಮೆ ಹಿನ್ನೆಲೆ ತೆರವಾಗಿರುವ ಸ್ಥಾನಕ್ಕೆ ಮಾಜಿ ಸಚಿವ ಶಿವರಾಜ್ ತಂಗಡಗಿ ಹೆಸರು ಕೇಳಿಬಂದಿದ್ದು ಬಹುತೇಕ ಅವರೇ ಅಧ್ಯಕ್ಷರಾಗಿ ಆಯ್ಕೆಯಾಗುವುದು ಖಚಿತವಾಗಿದೆ. ನಿನ್ನೆ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಪಕ್ಷದ ಎಲ್ಲ ಹಿರಿಯ ಮುಖಂಡರು ಶಿವರಾಜ್ ತಂಗಡಗಿ ಅಧ್ಯಕ್ಷರಾಗುವುದು ಸೂಕ್ತ ಎಂದು ಅಭಿಪ್ರಾಯ ಪಟ್ಟಿದ್ಧಾರೆ. ಇದಕ್ಕೆ ಜಿಲ್ಲೆಯ ಸಮಸ್ತ ಮುಖಂಡರು ಒಪ್ಪಿಗೆ ಸೂಚಿಸಿದ್ಧಾರೆ ಎನ್ನಲಾಗಿದೆ.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವುದು , ಕಾಂಗ್ರೆಸ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಿ ಬೇಕಾದ ಹೊಣೆಗಾರಿಕೆ ಶಿವರಾಜ್ ತಂಗಡಗಿಯವರದಾಗಿದೆ. ಲೋಕಸಭಾ ಅಭ್ಯರ್ಥಿಯ ರೇಸ್ ನಲ್ಲಿ ೫-೬ ಜನರಿದ್ದು ಯಾರಿಗೇ ಆಗಲಿ ಟಿಕೇಟ್ ದೊರೆತರೂ ಎಲ್ಲರೂ ಒಂದಾಗಿ ಪಕ್ಷಕ್ಕಾಗಿ ದುಡಿಯಬೇಕು ಎಂದು ಕಾಂಗ್ರೆಸ್ ಮುಖಂಡರು ಹೇಳಿದ್ಧಾರೆ ಎನ್ನಲಾಗಿದೆ. ಲೋಕಸಭಾ ಟಿಕೇಟ್ ಗಾಗಿ ಮಾಜಿ ಸಂಸದ ಶಿವರಾಮಗೌಡ, ಬಸವರಾಜ್ ಹಿಟ್ನಾಳ, ಬಸನಗೌಡ ಬಾದರ್ಲಿ, ಅಮರೇಗೌಡ ಬಯ್ಯಾಪುರರ ಅಣ್ಣನ ಮಗ ಶರಣೇಗೌಡ, ಜಿಲ್ಲಾ ಪಂಚಾಯತ್ ಅಧ್ಯಕ್ಷ ರಾಜಶೇಖರ ಹಿಟ್ನಾಳ ಇದ್ಧಾರೆ. ಅಲ್ಲದೇ ಮಾಜಿ ಸಚಿವ ಇಕ್ಬಾಲ್ ಅನ್ಸಾರಿಯವರಿಗೂ ಆಪರ್ ಇದ್ದು ಅವರು ಇದರ ಬಗ್ಗೆ ಇನ್ನೂ ನಿರ್ಣಯಿಸಿಲ್ಲ ಎಂದು ಹೇಳಲಾಗಿದೆ. ನಿನ್ನೆ ಸಭೆ ನಡೆಯುತ್ತಿದ್ದ ಸಂದರ್ಭದಲ್ಲಿ ಮಾನಸ ಸರೋವರದಲ್ಲಿದ್ದ ಮಾಜಿ ಸಚಿವ ಬಸವರಾಜ್ ರಾಯರಡ್ಡಿಯವರು ಫೋನ್ ಮಾಡಿ ಸ್ಪರ್ಧಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಇವೆಲ್ಲವುಗಳ ಹೊರತಾಗಿ ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ. ಆದರೆ ಈಗಾಗಲೇ ಸಿದ್ದಾರಮಯ್ಯ  ಇದನ್ನು ಅಲ್ಲಗಳೆದಿದ್ದಾರೆ.
ಮಾಜಿ ಸಚಿವ ಶಿವರಾಜ್ ತಂಗಡಗಿ ಹೆಸರು ವಿಜಯಪುರದ ಲೋಕಸಭಾ ಅಭ್ಯರ್ಥಿ ಸ್ಥಾನಕ್ಕೂ ಕೇಳಿಬರುತ್ತಿದೆ. ಆದರೆ ವರಿಷ್ಠರು ಅದೇ ಬೇರೆ ವಿಷಯ, ಕೊಪ್ಪಳ ಜಿಲ್ಲಾಧ್ಯಕ್ಷ ಸ್ಥಾನವೇ ಬೇರೆ ವಿಷಯ ಹೀಗಾಗಿ ಅಧ್ಯಕ್ಷ ಸ್ಥಾನವನ್ನು ಒಪ್ಪಿಕೊಳ್ಳುವಂತೆ ಒತ್ತಡ ಹೇರಿದ್ದಾರೆ ಎನ್ನಲಾಗುತ್ತಿದೆ.  ನಾಳೆ ಅಥವಾ ನಾಡಿದ್ದು ಶಿವರಾಜ್ ತಂಗಡಗಿವರನ್ನು ಜಿಲ್ಲಾಧ್ಯಕ್ಷರನ್ನಾಗಿ ಅಧಿಕೃತ ಘೋಷಣೆ ಮಾಡುವ ಸಾಧ್ಯತೆ ಇದೆ.

Please follow and like us:
error