fbpx

ಡಾ.ರಜಾಕ್ ಉಸ್ತಾದ ಪರ ಪ್ರಚಾರ


ಈಶಾನ್ಯ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಡಾ.ರಜಾಕ್ ಉಸ್ತಾದ ಪರ ಕನ್ನಡ ಸಾಹಿತ್ಯ ಪರೀಷತ್ ತಾಲೂಕು ಅಧ್ಯಕ್ಷ ಮೆಹಬೂಬಹುಸೇನ ಸಮೀಪದ ನಾನಾ ಗ್ರಾಮಗಳಲ್ಲಿ ಶನಿವಾರ ಮತಯಾಚನೆ ಮಾಡಿದರು.
ನಂತರ ಮಾತನಾಡಿ, ಹೈ.ಕರ್ನಾಟಕ ಪ್ರದೇಶಕ್ಕೆ ಜೆ.೩೭೧ಕಲಂ ಜಾರಿಗೆ ಹೋರಾಟ ನಡೆಸಿದ ಡಾ.ರಜಾಕ್ ಉಸ್ತಾದ್ ಈಶಾನ್ಯ ಪದವೀಧರ ಕ್ಷೇತ್ರಕ್ಕೆ ಸ್ಪರ್ಧಿಸಿದ್ದು, ಅವರ ಗೆಲುವಿಗೆ ಮತ ನೀಡಬೇಕು ಹಾಗೂ Uದ್ದರೇ ಈ ಭಾಗದ ಪ್ರಮುಖ ಸಮಸ್ಯೆಗಳನ್ನು ಸದನದ ಒಳಗೆ ಮತ್ತು ಹೊರಗೆ ಧ್ವನಿ ಎತ್ತಿ ನ್ಯಾಯ ನೀಡಲಿದ್ದಾರೆ. ೩೭೧ ಕಲಂ ತಿದ್ದುಪಡಿ ಸಂಪೂರ್ಣ ಅನುಷ್ಠಾನಗೊಳ್ಳದೇ ಗೊಂದಲದಲ್ಲಿದ್ದು, ಅದನ್ನು ನಿವಾರಿಸಿ ಶಿಕ್ಷಣ ಮೀಸಲಾತಿ, ನೌಕರಿಯಲ್ಲಿ ಬಡ್ತಿ, ಹೈ.ಕರ್ನಾಟಕದ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಮತ್ತು ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಲು ಹಾಗೂ ಜೆ.೩೭೧ಕಲಂ ಸಂಪೂರ್ಣ ಜಾರಿಗೊಳಿಸಲು ಮತ ನೀಡಬೇಕು ಎಂದು ಮನವಿ ಮಾಡಿದರು. ಆನಂದ ಬೇನಕನಾಳ, ವೀರೇಶ, ಕೃಷ್ಣಾ, ದುರುಗಪ್ಪ ನಾಯಕ, ಷಣ್ಮುಖ ಇತರರು ಇದ್ದರು. ತಿಪ್ಪನಾಳ, ಸುಳೇಕಲ್, ಬೆನಕನಾಳ, ಕಲಕೇರಿ, ಜೀರಾಳ, ವಡಕಿ, ಆಕಳಕುಂಪಿ, ಕಾಟಾಪುರ, ಮಲ್ಲಿಗೆವಾಡ, ಹಿರೇಖೇಡ, ಚಿಕ್ಕಖೇಡ ಗ್ರಾಮದಲ್ಲಿ ಪ್ರಚಾರ ನಡೆಸಿದರು.

Please follow and like us:
error
error: Content is protected !!