ಜನಾಂದೋಲನಗಳ ಮಹಾಮೈತ್ರಿ :ಮಹಾಮೈತ್ರಿ ಬೆಂಬಲಿಸುತ್ತಿರುವ ಅಭ್ಯರ್ಥಿಗಳ ವಿವರ…

ಅತಿ ದು? ಪಕ್ಷವನ್ನು ಹಾಗೂ ಮಹಾ ಭ್ರ? ಅಭ್ಯರ್ಥಿಗಳನ್ನು ಅಧಿಕಾರದಿಂದ ದೂರವಿಡಿ
ಜನ ಚಳವಳಿಗಳ ಅಭ್ಯರ್ಥಿಗಳನ್ನು ಜನ ಪ್ರತಿನಿಧಿಗಳನ್ನಾಗಿ ಆಯ್ಕೆ ಮಾಡಿ
ಕರ್ನಾಟಕದ ಮಹಾಜನತೆಗೆ ಜನಾಂದೋಲನಗಳ ಮಹಾಮೈತ್ರಿಯ ಕರೆ………..

ಪ್ರತಿ ಚುನಾವಣೆಯೂ ಯಾರು ಹಿತವರು ಎನಗೆ, ಈ ಕಳ್ಳರ ಕೂಟಗಳೊಳಗೆ? ಎಂಬ ಪ್ರಶ್ನೆಯನ್ನು ಜನ ಸಾಮಾನ್ಯರ ಮುಂದೆ ತರುತ್ತದೆ. ೭೧ ವ?ಗಳ ಸ್ವಾತಂತ್ರ್ಯೋತ್ತರ ಭಾರತ ಅನೇಕ ಚುನಾವಣೆಗಳನ್ನು ಕಂಡಿದೆ. ರಾಜಕಾರಣ ಪ್ರತಿಬಾರಿಯೂ ಜನರಿಂದ ದೂರವಾಗಿ ಬಲಾಢ್ಯರ ವಠಾರದಲ್ಲಿ ಹೋಗಿ ಕೂರುತ್ತಿದೆ. ಇಂದು ರಾಜಕಾರಣ ಕಾರ್ಪೋರೇಟ್ ಶಕ್ತಿಗಳ ಚೆಸ್ ಗೇಮ್ ಆಗಿ ಪರಿವರ್ತನೆಯಾಗಿದೆ. ಯಾವ ಕಾಯಿಯನ್ನು ಮುಂದೆ ಮಾಡಬೇಕು, ಯಾವ ಕಾಯಿಯನ್ನು ಹಿಂದಕ್ಕೆ ತೆಗೆದುಕೊಳ್ಳಬೇಕು ಎಂದು ಈ ’ಸರ್ವಶಕ್ತ’ ದೊಡ್ಡ ಬಂಡವಾಳಿಗ ಶಕ್ತಿಗಳು ತೀರ್ಮಾನಿಸುತ್ತಿವೆ.
ಕರ್ನಾಟಕವನ್ನು ಆಳಿದ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಮೂರೂ ಪಕ್ಷಗಳು ಜನರ ಹಿತಕಾಯುವುದರಲ್ಲಿ ವಿಫಲಗೊಂಡಿವೆ. ಹಾಗಾಗಿಯೇ ಇಂದು ಇಡೀ ದೇಶ ಮತ್ತು ರಾಜ್ಯ ಸಮಸ್ಯೆಗಳ ಆಗರವಾಗಿ ಪರಿವರ್ತನೆಯಾಗಿದೆ. ಕೃಷಿ ರೈತರನ್ನು ಸಾಲಗಾರರನ್ನಾಗಿಸಿ ನಗರಗಳಿಗೆ ನೂಕುತ್ತಿದೆ. ಶಿಕ್ಷಣ ವ್ಯಾಪಾರವಾಗಿದೆ, ಡಿಗ್ರಿ ಕೆಲಸ ನೀಡದಾಗಿದೆ. ಇಡೀ ಯುವ ಪೀಳಿಗೆ ಉದ್ಯೋಗ ಭದ್ರತೆ ಇಲ್ಲದೆ, ಅತಂತ್ರತೆಯಲ್ಲೇ ದುಡಿಯಬೇಕಿದೆ. ಆಸ್ಪತ್ರೆಗಳು ಹಣ ಸುಲಿಯುವ ಖಾಸಗೀ ಅಡ್ಡೆಗಳಾಗಿವೆ. ಮಧ್ಯಪಾನ ಬಡ ಮಹಿಳೆಯರ ನೆಮ್ಮದಿಯನ್ನೆಲ್ಲಾ ನುಂಗಿಬಿಟ್ಟಿದೆ. ತಲೆ ಮೇಲಿನ ಸಣ್ಣ ಸೂರಿಗೂ ಜನ ವ?ನುಗಟ್ಟಲೆ ಅರ್ಜಿ ಹಾಕಿಕೊಂಡು ಅಲೆಯುತ್ತಲೇ ಇದ್ದಾರೆ. ವ್ಯಾಪಾರ ದಿವಾಳಿಯಾಗಿ ಸಣ್ಣ ಮಧ್ಯಮ ಉದ್ದಿಮೆದಾರರೂ ತಲೆ ಮೇಲೆ ಕೈಹೊತ್ತು ಕೂತಿದ್ದಾರೆ. ಮಹಿಳೆಯರು, ಮಕ್ಕಳು, ದಲಿತರು, ಅಲ್ಪಸಂಖ್ಯಾತರು, ಆದಿವಾಸಿಗಳು..ಹೀಗೆ ಎಲ್ಲಾ ನಿರ್ಲಕ್ಷಿತ ಜನಸಮುದಾಯಗಳು ದಮನ ಮತ್ತು ದೌರ್ಜನ್ಯಗಳಿಗೆ ಗುರಿಯಾಗುತ್ತಿರುವ ಪ್ರಮಾಣ ಆತಂಕಕಾರಿಯಾಗಿ ಏರುತ್ತಿದೆ. ನಿಜ ಹೇಳಬೇಕೆಂದರೆ, ಜನ ಸಾಮಾನ್ಯರ ಅಳಿವು ಉಳಿವಿನ ಈ ಯಾವೊಂದು ಸಮಸ್ಯೆಗಳಿಗೂ, ಈ ಯಾವೊಂದು ಪಕ್ಷದ ಬಳಿಯೂ ಉತ್ತರವಿಲ್ಲ.
ಕಾಂಗ್ರೆಸ್ಸಿನ ವೈಫಲ್ಯವನ್ನು ಆಧಾರ ಮಾಡಿಕೊಂಡು, ಭಾರತವನ್ನು ಸೂಪರ್ ಪವರ್ ಮಾಡುವ ಕನಸು ನೀಡುತ್ತಾ ಬಂದ ಬಿಜೆಪಿ ತನ್ನ ಅವಧಿಯಲ್ಲಿ ಇದುವರೆಗಿನ ಎಲ್ಲಾ ಸರ್ಕಾರಗಳಿಗಿಂತಲೂ ಅತಿಕೆಟ್ಟ ದುರಾಡಳಿತವನ್ನು ನೀಡಿದೆ. ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಮಾಡಿದ ’ಆಪರೇ?ನ್ ಕಮಲ, ಗಣಿಗಾರಿಕೆ ಹೆಸರಿನಲ್ಲಿ ಖನಿಜ ಸಂಪತ್ತಿನ ಹಗಲು ದರೋಡೆ, ಬಹಿರಂಗ ಭ್ರ?ಚಾರ’ವನ್ನು ಯಾರೂ ಮರೆತಿಲ್ಲ. ಮೋಡಿಗಾರ ಮೋದಿ ಅದಾನಿ, ಅಂಬಾನಿ ಸಂತಾನಗಳಿಗೆ ಕೋಟಿಕೋಟಿಗಳನ್ನು ಬಾಚಲು ಅವಕಾಶ ಮಾಡಿಕೊಟ್ಟಿದ್ದು ಬಿಟ್ಟರೆ ಬಡಜನರನ್ನು ಅವರ ಸಂಕ?ದಿಂದ ಮುಕ್ತಗೊಳಿಸುವ ಒಂದೇ ಒಂದು ಜನಪರ ಯೋಜನೆಯನ್ನೂ ತರಲಿಲ್ಲ. ಬದಲಿಗೆ ಡಿಮಾನಿಟೈಸೇ?ನ್, ಜಿಎಸ್‌ಟಿ ಮೂಲಕ ಮಧ್ಯಮ ವರ್ಗದ ಬಳಿ ಅಳಿದುಳಿದಿದ್ದ ಚೂರುಪಾರು ಹಣವನ್ನೂ ಬಾಚಿ ಕಂಪನಿಗಳ ತೆಕ್ಕೆಗೆ ಹಾಕುತ್ತಿದ್ದಾರೆ. ಈ ಮಹಾ ವಂಚನೆಯನ್ನು ಮುಚ್ಚಿಹಾಕಲು ಮತಾಂಧತೆಯ ಅಫೀಮನ್ನು ಸಮಾಜಕ್ಕೆ ಉಣಬಡಿಸಲಾಗುತ್ತಿದೆ. ಉಚ್ಛ ನ್ಯಾಯಾಲಯದ, ಉಚ್ಛ ನ್ಯಾಯಾಧೀಶರೇ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಕರೆ ನೀಡುವ ಸ್ಥಿತಿಗೆ ದೇಶ ತಲುಪಿದೆ.

ಈ ಹಿನ್ನೆಲೆಯಲ್ಲಿಯೇ ಇಂದಿನ ರಾಜಕಾರಣದಲ್ಲಿ ಅತಿದು? ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿಯನ್ನು ಯಾವುದೇ ಕಾರಣಕ್ಕಾಗಿಯೂ ಬೆಂಬಲಿಸಬಾರದೆಂದು ನಾವು ಜನರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇವೆ. ಅದೇ ವೇಳೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷವೂ ಜನಸಾಮಾನ್ಯರ ಪಕ್ಷಗಳಲ್ಲ ಎಂಬುದನ್ನು ಮತ್ತೊಮ್ಮೆ ಒತ್ತಿ ಹೇಳಲು ಬಯಸುತ್ತೇವೆ. ವಿಧಿ ಇಲ್ಲದೆ ಅನೇಕ ಕ್ಷೇತ್ರಗಳಲ್ಲಿ ಈ ಪಕ್ಷಗಳಿಗೇ ಓಟು ನೀಡುವುದು ಅನಿವಾರ್ಯವಾಗಿದೆಯಾದರೂ ಅವುಗಳ ವತಿಯಿಂದಲೂ ನಿಂತಿರುವ ಮಹಾ ಭ್ರ? ಅಬ್ಯಾರ್ಥಿಗಳನ್ನು ಯಾವ ಮುಲಾಜೂ ಇಲ್ಲದೆ ಸೋಲಿಸಬೇಕೆಂದು ಜನರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇವೆ.
ಕೊನೆಯದಾಗಿ, ಆದರೆ ಎಲ್ಲದಕ್ಕಿಂತ ಮುಖ್ಯವಾದ ವಿಚಾರವೆಂದರೆ, ಈ ಬಾರಿಯ ಚುನಾವಣೆಯಲ್ಲಿ ಕೆಲವರಾದರೂ ಜನಪರ ಅಭ್ಯರ್ಥಿಗಳು ಗೆದ್ದು ವಿಧಾನ ಸಭೆಯನ್ನು ಪ್ರವೇಶಿಸಬೇಕಿರುವುದು ಮತ್ತು ಅಲ್ಲಿ ಜನ ಸಾಮಾನ್ಯರ ಹಕ್ಕುಗಳಿಗಾಗಿ ದನಿ ಎತ್ತಿ ಹೋರಾಡಬೇಕಿರುವುದು ಅತಿ ಮುಖ್ಯವಾದ ಸಾಮಾಜಿಕ ಅಗತ್ಯವಾಗಿದೆ. ಸಮಾಜದಲ್ಲಿ ಬದಲಾವಣೆ ಬರಬೇಕಾದರೆ ’ಪ್ರಬಲ ಚಳವಳಿ ಮತ್ತು ಪರ್ಯಾಯ ರಾಜಕಾರಣ’ ಎರಡು ಕಾಲಿನ ನಡಿಗೆಗಳಾಗಿ ಮುಂದೆ ಸಾಗಬೇಕು ಎಂಬ ಸೂತ್ರದಲ್ಲಿ ಜನಾಂದೋಲನಗಳ ಮಹಾಮೈತ್ರಿ ವಿಶ್ವಾಸವನ್ನಿಟ್ಟಿದೆ. ಜನಾಂದೋಲನಗಳ ಮಹಾಮೈತ್ರಿ ರಾಜಕೀಯ ಪಕ್ಷವಾಗಿರದೆ ರೈತ, ಕಾರ್ಮಿಕ, ಮಹಿಳಾ, ವಿದ್ಯಾರ್ಥಿ, ದಲಿತ, ಅಲ್ಪಸಂಖ್ಯಾತ ಮುಂತಾದ ಜನ ವರ್ಗಗಳ ನಡುವೆ ಕೆಲಸ ಮಾಡುತ್ತಿರುವ ಪ್ರಾಮಾಣಿಕೆ ಸಂಘಟನೆಗಳ ಮತ್ತು ಕಾರ್ಯಕರ್ತರ ಸಂಯುಕ್ತ ವೇದಿಕೆಯಾಗಿದೆ. ಕಳೆದ ಎರಡು ವ?ಗಳಲ್ಲಿ ಜನ ಚಳವಳಿಗಳನ್ನು ಬೆಸೆಯಲು ಹಾಗೂ ಪರ್ಯಾಯ ರಾಜಕೀಯ ಶಕ್ತಿಗಳನ್ನು ಹತ್ತಿರಕ್ಕೆ ತರಲು ಮಹಾಮೈತ್ರಿ ಹಲವು ಪ್ರಯತ್ನಗಳನ್ನು ನಡೆಸಿದೆ.
ಈ ಚುನಾವಣೆಯಲ್ಲೂ ಪರ್ಯಾಯ ಶಕ್ತಿಗಳೆಲ್ಲಾ ಪರಸ್ಪರ ಎದುರುಬದುರಾಗಿ ಸ್ಪರ್ಧಿಸದೆ, ಪರಸ್ಪರ ಸಹಕಾರದ ಜೊತೆ ಬಲಾಢ್ಯ ಪಕ್ಷಗಳ ಜೊತೆ ಸೆಣೆಸಬೇಕು, ಓಟು ವಿಭಜನೆಯಾಗಿ ಅತಿದು? ಕೋಮುವಾದಿ ಶಕ್ತಿಯಾದ ಬಿಜೆಪಿಗೆ ಸಹಾಯವಾಗದಂತೆ ಎಚ್ಚರವಹಿಸಬೇಕು, ನೀತಿಬದ್ಧ ರಾಜಕಾರಣವನ್ನೇ ಮಾಡಬೇಕು ಮತ್ತು ಸ್ಪರ್ಧೆಗಾಗಿ ಸ್ಪರ್ಧೆ ನಡೆಸದೆ, ಗೆಲ್ಲುವ ಸಾಧ್ಯತೆ ಇರುವ ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧಿಸಬೇಕು ಎಂದು ಮನವೊಲಿಸುವ ಪ್ರಯತ್ನವನ್ನು ಮಾಡಿದೆ. ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಹೊರತುಪಡಿಸಿ ಮಿಕ್ಕ ಪಕ್ಷಗಳ ಜೊತೆ ಆರು ಸುತ್ತು ದುಂಡು ಮೇಜಿನ ಸಭೆಗಳನ್ನು ನಡೆಸಿದೆ. ಮಹಾಮೈತ್ರಿಯ ಈ ಪ್ರಯತ್ನಕ್ಕೆ ಎಲ್ಲಾ ಜನಪರ ಪಕ್ಷಗಳಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಆದರೆ, ತಮ್ಮದೇ ಆದ ಕಾರಣಗಳಿಂದ ಕೆಲವು ಪಕ್ಷಗಳು ತಮ್ಮದೇ ಹಾದಿಯಲ್ಲಿ ಮುಂದುವರೆದಿವೆ, ಇನ್ನುಳಿದ ಜನಪರ ಪಕ್ಷಗಳು ಮಹಾಮೈತ್ರಿಯ ಕರೆಗೆ ಸಕರಾತ್ಮಕವಾಗಿ ಸ್ಪಂದಿಸಿ, ಸೀಮಿತ ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧಿಸಲು ಮತ್ತು ಅತಿ ದು? ಪಕ್ಷಕ್ಕೆ ಸಹಾಯವಾಗದಂತೆ ಎಚ್ಚರಿಕೆವಹಿಸಲು ಮುಂದೆ ಬಂದಿವೆ. ಇಂತಹ ಪಕ್ಷಗಳ ತಲಾ ಮೂರು ಅಭ್ಯರ್ಥಿಗಳಿಗೆ ಹಾಗೂ ಕೆಲವು ಜನಪರ ಸ್ಪತಂತ್ರ ಅಭ್ಯರ್ಥಿಗಳಿಗೆ ಬೆಂಬಲ ನೀಡಲು ಜನಾಂದೋಲನಗಳ ಮಹಾಮೈತ್ರಿ ತೀರ್ಮಾನಿಸಿದೆ. [ವಿವರಗಳ ಪಟ್ಟಿಯನ್ನು ಲಗತ್ತಿಸಲಾಗಿದೆ]. ಜನ ಚಳವಳಿಗಳ ಈ ಅಭ್ಯರ್ಥಿಗಳನ್ನೂ ಗೆಲ್ಲಿಸುವ ಮೂಲಕ ಮುಂದಿನ ವಿಧಾನಸಭೆಯಲ್ಲಿ ಜನದನಿಯನ್ನು ಗಟ್ಟಿಗೊಳಿಸಿಕೊಳ್ಳುವ ಹೊಣೆಗಾರಿಕೆ ನಮ್ಮೆಲ್ಲರದಾಗಿದೆ. ಮತಾಂಧತೆಗೆ ಬಲಿಯಾಗದೆ, ಭ್ರ?ಚಾರಕ್ಕೆ ಒಳಗಾಗದೆ, ಜಾಗ್ರತೆಯ ಜೊತೆ ಜನ ಸಾಮಾನ್ಯರ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಬೇಕೆಂದು ಜನರಲ್ಲಿ ಮತ್ತೊಮ್ಮೆ ವಿನಂತಿ ಮಾಡಿಕೊಳ್ಳುತ್ತಿದ್ದೇವೆ.
ಪರ್ಯಾಯ ಅಬ್ಯಾರ್ಥಿಗಳನ್ನು ಒಟ್ಟುಗೂಡಿಸುವ ಪ್ರಕ್ರಿಯೆಯಲ್ಲಿ ಒಮ್ಮತಕ್ಕೆ ಬರಲು ಸಾಧ್ಯವಾದ ಹೆಸರುಗಳು ಇವಾಗಿವೆ. ಇದಲ್ಲದೆಯೂ ಅನೇಕ ಜನಪರ ಮಿತ್ರರು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ.

ಜನಾಂದೋಲನಗಳ ಮಹಾಮೈತ್ರಿಯ ಪರವಾಗಿ,

ಎಸ್. ಆರ್. ಹಿರೇಮಠ್, ರಾಘವೇಂದ್ರ ಕು?ಗಿ,
ಜನಾಂದೋಲನ ಮಹಾಮೈತ್ರಿ ಮುಖಂಡರು ಜನಾಂದೋಲನ ಮಹಾಮೈತ್ರಿ ಮುಖಂಡರು

ಡಿ.ಎಚ್.ಪೂಜಾರ ವಿಠಪ್ಪ ಗೋರಂಟ್ಲಿ
ಸಿಪಿಐ(ಎಂಎಲ್) ರೆಡ್‌ಸ್ಟಾರ್ ಹಿರಿಯ ಪತ್ರಕರ್ತರು,

ಬಸವರಾಜ ಬುನ್ನಟ್ಟಿ ಹೇಮರಾಜ ವಿರಾಪುರ
ಜಿಲ್ಲಾ ಕಾರ್ಯದರ್ಶಿ, ಸಿಪಿಐ (ಎಂಎಲ್) ರೆಡ್ ಸ್ಟಾರ್,

ಹನುಮೇಶ ಮ್ಯಾಗಳಮನಿ ಕೊಪ್ಪಳ ಆದಿಲ್.ಪಟೇಲ್
ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ,

ಶರಣಪ್ಪ (ಎಸ್.ಯು.ಸಿ.ಐ).
ಸಂಘಟಕರು

ಜನಾಂದೋಲನಗಳ ಮಹಾಮೈತ್ರಿ ಬೆಂಬಲಿಸುತ್ತಿರುವ ಅಭ್ಯರ್ಥಿಗಳ ವಿವರ…

ಕ್ರಂ.ಸಂಖ್ಯೆ ಅಭ್ಯರ್ಥಿ ಕ್ಷೇತ್ರ ಪಕ್ಷ

೧ ರಾಮಾಂಜಿನಪ್ಪ ಸಂಡೂರು ಎಸ್‌ಯುಸಿಐ(ಸಿ)
೨ ಗಣಪರಾವ್ ಮಾನೆ ಗುಲ್ಬರ್ಗ ರೂರಲ್. ಎಸ್‌ಯುಸಿಐ(ಸಿ)
೩ ಹೆಚ್.ಪಿ.ಶಿವಪ್ರಕಾಶ್. ರಾಜರಾಜೇಶ್ವರಿ ನಗರ ಎಸ್‌ಯುಸಿಐ(ಸಿ)
೪ ದರ್ಶನ್ ಪುಟ್ಟಣ್ಣಯ್ಯ ಮೇಲುಕೋಟೆ ಸ್ವರಾಜ್ ಇಂಡಿಯಾ
೫ ಎಸ್.ಎಚ್.ಲಿಂಗೆಗೌಡ ಮದ್ದೂರು ಸ್ವರಾಜ್ ಇಂಡಿಯಾ

೬ ಕೆ.ಪಿ. ಭೂತಯ್ಯ ಚಳ್ಳಕೆರೆ ಸ್ವರಾಜ್ ಇಂಡಿಯಾ
೭ ಅಬ್ದುಲ್ ಬಾರಿ ಗುಲ್ಬರ್ಗ ದಕ್ಷಿಣ ಸ್ವರಾಜ್ ಇಂಡಿಯಾ

೮ ನಜೀರ್ ಅಹಮದ್ ಬೀದರ್ ದಕ್ಷಿಣ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ

೯ ತಾಜುದ್ದೀನ್ ಶರೀಫ್ ತುಮಕೂರು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ

೧೦ ಸಂತೋ? ನರಗುಂದ್ ಹುಬ್ಬಳ್ಳಿ – ಧಾರವಾಡ ಸೇಂಟ್ರಲ್ ಆಮ್‌ಆದ್ಮಿ ಪಾರ್ಟಿ

೧೧ ಪೃಥ್ವಿ ರೆಡ್ಡಿ. ಸರ್ವಜ್ಞ ನಗರ ಆಮ್‌ಆದ್ಮಿ ಪಾರ್ಟಿ
೧೨ ಮೋಹನ್ ದಾಸರಿ ಸಿ.ವಿ.ರಾಮನ್ ನಗರ ಆಮ್‌ಆದ್ಮಿ ಪಾರ್ಟಿ

೧೩ ಆರ್. ಮಾನಸಯ್ಯ. ಲಿಂಗಸೂರು ಸಿಪಿಐ [ಎಂಎಲ್] ರೆಡ್ ಸ್ಟಾರ್
೧೪ ವಿಜಯ್ ಮೂಡಿಗೆರೆ ಸಿಪಿಐ [ಎಂಎಲ್] ರೆಡ್ ಸ್ಟಾರ್
೧೫ ಹನುಮೇಶ ಮ್ಯಾಗಳ ಮನಿ ಕೊಪ್ಪಳ ಸಿಪಿಐ [ಎಂಎಲ್] ರೆಡ್ ಸ್ಟಾರ್
೧೬ ಅಂಕುಶ್ ಗೋಖಲೆ ಹುಮ್ನಾಬಾದ್ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ

೧೭ ಶಿವಲಿಂಗಂ ಕೆಜಿಎಫ್ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ
೧೮ ಡಾ.ವಿ.ಎ. ಮಾಲಿಪಾಟೀಲ್ ರಾಯಚೂರು ಸ್ವತಂತ್ರ ಅಭ್ಯರ್ಥಿ

೧೯ ಲಕ್ಷಣ ಬಾದಾಮಿ ಸ್ವತಂತ್ರ ಅಭ್ಯರ್ಥಿ
೨೦ ಮರಡಿತೋಟ ರವಿಕೃಷ್ಣ ರೆಡ್ಡಿ ಜಯನಗರ ಸ್ವತಂತ್ರ ಅಭ್ಯರ್ಥಿ

Please follow and like us:
error