ಜನಪರ ಆಡಳಿತಕ್ಕೆ ಕಾಂಗ್ರೆಸ್ ಬೆಂಬಲಿಸಿ – ಶಾಸಕ ಕೆ.ರಾಘವೇಂದ್ರ ಹಿಟ್ನಾಳ

ಕೊಪ್ಪಳ:೦೯, ಭಾಗ್ಯನಗರ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಕಾಂಗ್ರೆಸ್ ನಿಯೋಜಿತ ಅಭ್ಯರ್ಥಿ ಕೆ.ರಾಘವೇಂದ್ರ ಹಿಟ್ನಾಳರವರು ರಾಜ್ಯದಲ್ಲಿ ಐದು ವರ್ಷ ಅಧಿಕಾರ ಮಾಡಿದ ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರವು ಎಲ್ಲಾ ವರ್ಗಗಳ ಹಿತ ಕಾಪಾಡಿದ್ದು ಅನೇಕ ಜನಪರ ಯೋಜನೆಗಳನ್ನು ನೀಡಿದ ಕಾಂಗ್ರೆಸ್ ಸರ್ಕಾರವು ಶೋಷಿತ, ದುರ್ಬಲ, ಹಿಂದುಳಿದ, ಅಲ್ಪಸಂಖ್ಯಾತರ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಶ್ರೆಯೋಭಿವೃದ್ಧಿಗೆ ಶ್ರಮಿಸಿ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತಂದ ಶ್ರೇಯಸ್ಸು ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ. ರಾಜ್ಯದ ಹಿತದೃಷ್ಟಿ ಹಾಗೂ ಅಭಿವೃದ್ಧಿಗೆ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಬೇಕೆಂದು ಕರೆ ನೀಡಿದರು.
ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆಯಾದ ಪ್ರಮುಖರು: ಅಶೋಕ ಮೇಘರಾಜ, ಕಿರಣ ಮಗಜಿ, ರೋಹಿತ್, ಸುನೀಲ್ ಖೋಡೆ, ವಿನಾಯಕ ನಾರಾಯಣಸಾ ಪವಾರ, ಅನೀಲ ಖೋಡೆ, ಗಣೇಶ ಖೋಡೆ, ರಾಮು ಬಾಕಳೆ, ಸಂಜು, ಪ್ರದೀಪ ದಲಬಂಜನ್, ಲಕ್ಷ್ಮಣ ಪವಾರ, ಸುನೀಲ್ ಪೂಜಾರಿ, ಮುರಳಿ ಮಗಜಿ, ಪ್ರಶಾಂತ ದಲಬಂಜನ್, ಪರಶುರಾಮ ಪವಾರ, ನಾಗರಾಜ ಬೂತೆ, ನಾರಾಯಣ.ಎನ್. ಗಣೇಶ ಪವಾರ್, ವೀರೇಶ ಇಂದರಗಿ, ವೀರೇಶ ಗುಳೆದಗುಡ್ಡ, ಕಾರ್ತಿಕ ಇನ್ನೂ ಅನೇಕ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಭೂಮರಡ್ಡಿ, ಮುಖಂಡರುಗಳಾದ ಶ್ರೀನಿವಾಸ ಗುಪ್ತಾ, ಯಮನಪ್ಪ ಕಬ್ಬೇರ್, ಪ್ರಸನ್ನ ಗಡಾದ, ಕೃಷ್ಣಾರಡ್ಡಿ ಗಲಬಿ, ಹೊನ್ನೂರಸಾಬ ಬೈರಾಪೂರ, ಮಲ್ಲಿಕಾರ್ಜುನ ಸಾಲಿಮಠ, ಮಂಜುನಾಥ ಗೊಂಡಬಾಳ, ಚೆನ್ನಪ್ಪ ತಟ್ಟಿ, ಸವಿತಾ ಗೋರಂಟ್ಲಿ, ರಮೇಶ ಹ್ಯಾಟಿ, ಯಶೋಧಾ ಮರಡಿ, ಹುಲಿಗೆಮ್ಮ ತಟ್ಟಿ, ವರ್ಮಾ, ಸುರೇಶ ಮುಂಡರಗಿ, ಅಶೋಕ ಗೋರಂಟ್ಲಿ, ಮಹೆಬೂಬಸಾಬ ಬಳೆಗಾರ ಹಾಗೂ ಪಕ್ಷದ ವಕ್ತಾರ ಅಕ್ಬರ್ ಪಾಷಾ ಪಲ್ಟನ್ ಉಪಸ್ಥಿತರಿದ್ದರು.