ಅಂಬೇಡ್ಕರ್‌ರವರ ಕಾರ್ಯಗಳನ್ನು ಮರೆಮಾಚಿ ಅಗೌರವ ತೋರಿಸಿರುವುದು ಖಂಡನೀಯ-ಸಂಗಣ್ಣ ಕರಡಿ


ಕೊಪ್ಪಳ, ಏ.೧೪: ದೀನ ದಲಿತರ, ಅಲ್ಪಸಂಖ್ಯಾತರ, ಹಿಂದುಳಿದವರ ಪರವಾದ ಪಕ್ಷ ಎಂದು ದಶಕಗಳ ಕಾಲ ಬಡಾಯಿ ಕೊಚ್ಚಿಕೊಳ್ಳುವ ಕಾಂಗ್ರೆಸ್ ಪಕ್ಷ ಬಾಬಾ ಸಾಹೇಬ್ ಅಂಬೇಡ್ಕರ್‌ರವರನ್ನು ೨ ಬಾರಿ ಸೋಲಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಕೊಪ್ಪಳ ಲೋಕಸಭಾ ಸದಸ್ಯ ಸಂಗಣ್ಣ ಕರಡಿ ಹೇಳಿದರು. ಶೋಷಿತರು ರಾಜಕೀಯಕ್ಕೆ ಬರಬೇಕು ಎಂದು ೧೯೫೨ರಲ್ಲಿ ಮೊದಲಬಾರಿಗೆ ಚುನಾವಣೆಗೆ ಸ್ಪರ್ಧಿಸಿದಾಗ ನೆಹರುರವರು ಅವರ ಸೋಲಿಗೆ ಕಾರಣಿಕರ್ತರಾಗಿದ್ದರು. ೧೯೫೪ರಲ್ಲಿ ಉಪ ಚುನಾವಣೆಯಲ್ಲಿಯೂ ಕೂಡಾ ಕಾಂಗ್ರೆಸ್ ಅವರನ್ನು ಸೋಲಿಸುತ್ತದೆ. ಅಂದು ಸಂಸತ್ತಿನಲ್ಲಿ ಹಿಂದು ಬಿಲ್ ಪಾಸು ಮಾಡಲು ಕಾಂಗ್ರೆಸ್ ಚಕಾರ ಎತ್ತಿದ್ದಾಗ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಬಂದ ಹಠವಾದಿ ಅಂಬೇಡ್ಕರ್ ಎಂದರು.
ಡಾ|| ಬಿ.ಆರ್. ಅಂಬೇಡ್ಕರ್‌ರವರ ೧೨೭ನೇ ಜಯಂತೋತ್ಸವದ ಅಂಗವಾಗಿ ಭಾಜಪ ಜಿಲ್ಲಾ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಂಬೇಡ್ಕರ್ ರವರ ಚರಿತ್ರೆಯನ್ನು ನೋಡಿದಾಗ ಅವರ ವಿದ್ಯಾರ್ಥಿ ಜೀವನದಲ್ಲಿ ಬೇರೆ ಸ್ಥಳದಲ್ಲಿ ವ್ಯಾಸಂಗ ಮಾಡುತ್ತಿರುವಾಗ ತಂದೆಯವರ ನೆನಪು ಸದಾ ಕಾಡುತ್ತಿದ್ದ ಸಮಯದಲ್ಲಿ ಅವರನ್ನು ನೋಡಿಕೊಂಡು ಕುಷಲೋಪರಿ ವಿಚಾರಿಸಿ ಬರಲು ಒಂದು ತಳ್ಳುವ ಬಂಡಿಯಲ್ಲಿ ಸಾಗುತ್ತಿರುವಾಗ ಮಾರ್ಗ ಮಧ್ಯದಲ್ಲಿ ಚಾಲಕ ಮಾತಿಗೆಳೆದಾಗ ನೀವು ಯಾವ ಜಾತಿಯವರು ಎಂದು ಪ್ರಶ್ನೀಸಿದಾಗ ಅಂಬೇಡ್ಕರ್ ಮೇಹಾರ ಸಮುದಾಯ ಎಂದು ಉತ್ತರಿಸಿದಾಗ ಚಾಲಕ ಬಂಡಿಯಿಂದ ಕೇಳದಿಳಿಸಿದ್ದರಿಂದ ಕಾಲುನಡಿಗೆಯಲ್ಲಿ ಸಾಗುತ್ತಿರುವಾಗ ಬಾಯಾರಿದ ಅಂಬೇಡ್ಕರ್‌ರವರಿಗೆ ಕುಡಿಯಲು ಯಾರು ನೀರು ಕೊಡದ ಕಾರಣ ಅಲ್ಲಿಯ ಬಾವಿಯ ನೀರನ್ನು ಸೇವಿಸಿದ ಸಂದರ್ಭದಲ್ಲಿ ನೇರದಂತಹ ಜನರು ನಿಂದಿಸಿದಾಗ ಅವರ ಮನಸ್ಸಿನ ಮೇಲೆ ತಾರತಮ್ಯದ ಪರಿಣಾಮ ಬೀರುತ್ತದೆ. ೧೯೧೭ ರಲ್ಲಿ ಸ್ನಾತಕೊತ್ತರ ಪದವಿಯ ನಂತರದಲ್ಲಿ ಭಾರತಕ್ಕೆ ಮರಳಿದಾಗ ಬರೋಡಾದ ಮಹಾರಾಜರು ಸೇನಾಮುಖ್ಯಸ್ಥರನ್ನಾಗಿ ನೇಮಕ ಮಾಡಿ ಒಂದು ವಸತಿಗೃಹದ ವ್ಯವಸ್ಥೆ ಮಾಡಿರುತ್ತಾರೆ. ಆದರೆ ಅವರು ಅಸ್ಪೃಶ್ಯರು ಎಂದು ತಿಳಿದಾಗ ಅಲ್ಲಿಂದ ಅವರನ್ನು ಹೊರದಬ್ಬಲಾಗುತ್ತದೆ.
ದಲಿತರ ಹೆಸರಿನಲ್ಲಿ ಕಾಂಗ್ರೆಸ್ ಪಕ್ಷ ರಾಜ್ಯ ಮತ್ತು ರಾಷ್ಟ್ರದಲ್ಲಿ ಆಡಳಿತ ನಡೆಸಿದ್ದು, ಸಂವಿಧಾನದ ಪೀತಾಮಹ ಬಡವರ ಆಶಾಕಿರಣವಾದ ಅಂಬೇಡ್ಕರ್‌ರವರು ಮಾಡಿದ ಕಾರ್ಯಗಳನ್ನು ಮರೆಮಾಚಿ ಅವರಿಗೆ ಅಗೌರವವನ್ನು ತೋರಿಸಿರುವುದು ಖಂಡನೀಯ. ಆದರೆ ಇಂದು ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಅವರ ಸಾಧನೆನ್ನು ಬಿಂಬಿಸುವ ಕೆಲಸಕ್ಕೆ ಮುಂದಾಗಿ ಭೀಮ್ ಯ್ಯಾಪ್, ಅಂಬೇಡ್ಕರ್ ರವರ ಪಂಚಸ್ಥಳಗಳ ಅಬೀವೃದ್ಧಿಗೆ ಸುಮಾರು ೬೦೦ ಕೋಟಿ ಹಣ ಕೇಂದ್ರ ಸರ್ಕಾರ ಖರ್ಚುಮಾಡುತ್ತಿದೆ. ಅವರ ಜಯಂತಿಯನ್ನು ಇಂದು ವಿಶ್ವಮಟ್ಟದಲ್ಲಿ ಆಚರಿಸುವ ಹಾಗೆ ಮಾಡಿದ ಕೀರ್ತಿ ಪ್ರಧಾನಿಯವರಿಗೆ ಸಲ್ಲುತ್ತದೆ ಎಂದರು.

ಚಾಯವಾಲಾ ಕೂಡಾ ಪ್ರಧಾನಿ ಪಟ್ಟ ಪಡೆಯಲು ಅಂಬೇಡ್ಕರ್ ನೀಡಿದ ಸಂವಿಧಾನವೇ ಕಾರಣ- ಸಿ.ವಿ.ಚಂದ್ರಶೇಖರ

ಭಾಜಪ ರಾಷ್ಟ್ರೀಯ ಪರಿಷತ ಸದಸ್ಯ ಸಿ.ವಿ ಚಂದ್ರಶೇಖರ ಮಾತನಾಡಿ ದಲಿತ ಜನಾಂಗದಲ್ಲಿ ಜನಿಸಿದ ಅಂಬೇಡ್ಕರ್ ಬಡತನ, ಅಸೂಹೆ, ಅವಮಾನ ಅನುಭವಿಸಿದ್ದರು ಕೂಡಾ ದೇಶದ ಒಳಿತಗಾಗಿ ಸುಭದ್ರ ಸಂವಿಧಾನವನ್ನು ನೀಡಿದ್ದಾರೆ. ಹೆಮ್ಮಯ ನಾಯಕ ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರದಲ್ಲಿ ಸಂಸತ ಪ್ರವೇಶದಲ್ಲಿ ಸಂವಿಧಾನಕ್ಕೆ ಹಣೆಹಚ್ಚಿ ಗೌರವಿಸಿದ್ದಾರೆ. ಒಬ್ಬ ಸಾಮಾನ್ಯ ಚಾಯವಾಲಾ ಕೂಡಾ ಇಂದು ದೇಶದ ಅತ್ಯುನ್ನತ ಹುದ್ದೆಯಾದ ಪ್ರಧಾನಿ ಪಟ್ಟವನ್ನು ಹೇರಲು ಅಂಬೇಡ್ಕರ್ ನೀಡಿದ ಸಂವಿಧಾನವೇ ಸಾಕ್ಷಿಯಾಗಿದೆ. ಪ.ಜಾತಿ, ಪ.ಪಂ ಅಭಿವೃದ್ಧಿ ಕೇಂದ್ರ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿ ಮಾಡಿದೆ. ಹಿಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ದಲಿತರ ಉದ್ದಾರಕ್ಕೆ ಸಾಕಷ್ಟು ಕಾರ್ಯಕ್ರಮಗಳನ್ನು ನೀಡಿದ್ದಾರೆ. ಕಾಂಗ್ರೆಸ್ ಕೆವಲ ದಲಿತರನ್ನು ಮತಬ್ಯಾಂಕ್ ಮಾಡಕೊಂಡು ಮೋಸದ ರಾಜಕಾರಣ ಮಾಡುತ್ತಿದೆ. ಆದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಮುಕ್ತ ಭಾರತ ಆಗುವುದರಲ್ಲಿ ಸಂಶಯವಿಲ್ಲ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಗರ ಮಂಡಲ ಅಧ್ಯಕ್ಷ ಶಿವಕುಮಾರ ಹಕ್ಕಾಪಕ್ಕಿ ವಹಿಸಿ ಮಾತನಾಡಿದರು. ಭಾಜಪ ಮುಖಂಡರಾದ ಕೆ.ಜಿ.ಕುಲ್ಕರ್ಣಿ, ಗವಿಸಿದ್ದಪ್ಪ ಕಂದಾರಿ, ಡಿ.ಮಲ್ಲಣ್ಣ, ಪೀರಾ ಹುಸೇನ ಹೊಸಳ್ಳಿ ಮಾತನಾಡಿದರು. ನಂತರದಲ್ಲಿ ಅಂಬೇಡ್ಕರ್ ವೃತ್ತದಲ್ಲಿರುವ ಬಾಬಾಸಾಹೇಬರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ವಂದನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಭಾಜಪ ಜಿಲ್ಲಾ ಉಪಾಧ್ಯಕ್ಷರಾದ ರಾಜು ಬಾಕಳೆ, ಅಲ್ಪಸಂಖ್ಯಾತ ಮೊರ್ಚಾ ಜಿಲ್ಲಾಧ್ಯಕ್ಷ ಸಯ್ಯದ ನಾಸೀರ ಹುಸೇನ್, ಎಸ್,ಸಿ ಮೊರ್ಚಾದ ಕನಕಮೂರ್ತಿ, ಮುಖಂಡರಾದ ಅಪ್ಪಣ್ಣ ಪದಕಿ, ವಿರುಪಾಕ್ಷಯ್ಯ ಗದುಗಿನಮಠ, ಹಾಲೇಶ ಕಂದಾರಿ, ವೈಜನಾಥ ದಿವಟರ್, ಎಮ್.ವ್ಹಿ.ಪಾಟೀಲ, ಸಂಗಮೇಶ ಡಂಬಳ, ವಿಜಯ ರಡ್ಡೇರ್, ವೀರಣ್ಣ ಗಾಣಗೇರ, ಕಂಠಯ್ಯ ಹಿರೇಮಠ, ಚನ್ನಬಸಪ್ಪ ಹೊಳೆಯಪ್ಪನವರ, ಗವಿಸಿದ್ದಪ್ಪ ಗಿಣಗೇರಿ, ದೇವರಾಜ ಹಾಲಸಮುದ್ರ, ಗವಿಸಿದ್ದಪ್ಪ ಬೆಲ್ಲದ, ಭಾಜಪ ಜಿಲ್ಲಾ ಮಾಧ್ಯಮ ಪ್ರಮುಖ ಬಿ.ಗಿರೀಶಾನಂದ ಜ್ಞಾನಸುಂದರ ಹಾಗೂ ಅನೇಕರು ಭಾಗವಹಿಸಿದ್ದರು.

Please follow and like us:
error