ಕೊಪ್ಪಳ : ಸ್ತ್ರೀಶಕ್ತಿ ಸಂಘಗಳಿಗೆ ಮತದಾನ ಜಾಗೃತಿ

ಕೊಪ್ಪಳ ತಾಲೂಕಿನ ಸ್ತ್ರೀ ಶಕ್ತಿ ಸಂಘಗಳ ಸದಸ್ಯರುಗಳಿಗೆ ನೈತಿಕ ಮತದಾನ ಕುರಿತು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಲ್ಲಿ ಸೋಮವಾರದಂದು ಜಾಗೃತಿ ಮೂಡಿಸಲಾಯಿತು.
ಕೊಪ್ಪಳ ಸಿಡಿಪಿಒ ಸಿಂಧು ಎಲಿಗಾರ್ ಅವರು ಮಾತನಾಡಿ, ಚುನಾವಣೆಯನ್ನು ಒಬ್ಬ ಮತದಾರರಾಗಿ ಸಂಭ್ರಮದಿಂದ ಪಾಲ್ಗೊಳ್ಳಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಲು, ಪ್ರತಿಯೊಬ್ಬರೂ ತಪ್ಪದೆ ಮತದಾನ ಮಾಡಿ, ಹಣ, ಕಾಣಿಕೆಗಳ ಆಮಿಷ ಒಡ್ಡುವವರನ್ನು ತಿರಸ್ಕರಿಸಿ, ನೈತಿಕವಾಗಿ ಮತದಾನ ಮಾಡಬೇಕು. ಮಹಿಳೆಯರು ತಾವು ಮತದಾನ ಮಾಡುವುದರ ಜೊತೆಗೆ, ಇತರರನ್ನು ಕೂಡ ಮತದಾನಕ್ಕೆ ಪ್ರೇರೇಪಿಸಬೇಕು ಎಂದರು.
ಕೊಪ್ಪಳ ತಾಲೂಕಿನ ಸುಮಾರು ಎರಡು ನೂರಕ್ಕೂ ಹೆಚ್ಚು ಸ್ತ್ರೀಶಕ್ತಿ ಗುಂಪಿನ ಸದಸ್ಯರುಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.