ಕೊಪ್ಪಳ : ಮತಗಟ್ಟೆ ಸಿಬ್ಬಂದಿಗಳಿಗೆ ಬಸ್ ಸೌಲಭ್ಯ

ವಿಧಾನಸಭೆ ಚುನಾವಣೆ ಪ್ರಯುಕ್ತ ಕೊಪ್ಪಳ ನಗರದಿಂದ ಜಿಲ್ಲೆಯ ವಿವಿಧ ತಾಲೂಕುಗಳಿಗೆ ತೆರಳುವ ಮತಗಟ್ಟೆ ಸಿಬ್ಬಂದಿಗಳಿಗೆ ಮೆ. ೧೧ ರಂದು ಬೆಳಿಗ್ಗೆ ೦೬ ಗಂಟೆಗೆ ವಿಶೇಷ ಬಸ್ ಸೌಲಭ್ಯ ಕಲ್ಪಿಸಲಾಗಿದೆ ಎಂದು ಕೊಪ್ಪಳ ಕ್ಷೇತ್ರ ಚುನಾವಣಾಧಿಕಾರಿ ಸಿ.ಡಿ. ಗೀತಾ ಅವರು ತಿಳಿಸಿದ್ದಾರೆ.
ಕೊಪ್ಪಳ ವಿಧಾನಸಭಾ ಕ್ಷೇತ್ರ ಕೊಪ್ಪಳ ನಗರದಿಂದ ಬೇರೆ ತಾಲೂಕುಗಳಿಗೆ ತೆರಳಲಿರುವ ಮತಗಟ್ಟೆ ಸಿಬ್ಬಂದಿಗಳಿಗೆ ಮೇ. ೧೧ ರಂದು ಬೆಳಿಗ್ಗೆ ೬.೦೦ ಗಂಟೆಗೆ ಶ್ರಿ ಗವಿಸಿದ್ದೇಶ್ವರ ಮಠ ಮೈದಾನದಿಂದ ಕುಷ್ಟಗಿ ತಾಲ್ಲೂಕಿಗೆ ೮ ಬಸ್ಸುಗಳು, ಗಂಗಾವತಿ ತಾಲ್ಲೂಕಿಗೆ ೫ ಬಸ್ಸುಗಳು, ಯಲಬುರ್ಗಾ ತಾಲ್ಲೂಕಿಗೆ ೬ ಬಸ್ಸುಗಳ ವ್ಯವಸ್ಥೆ ಮಾಡಲಾಗಿರುತ್ತದೆ. ಈ ತಾಲ್ಲೂಕುಗಳಿಗೆ ತೆರಳಲಿರುವ ಮತಗಟ್ಟೆ ಸಿಬ್ಬಂದಿಗಳು ಬಸ್ ವ್ಯವಸ್ಥೆಯ ಸದುಪಯೋಗ ಪಡೆದುಕೊಳ್ಳಬಹುದಾಗಿದೆ ಎಂದು ಕೊಪ್ಪಳ ಕ್ಷೇತ್ರ ಚುನಾವಣಾಧಿಕಾರಿ ಸಿ.ಡಿ. ಗೀತಾ ಅವರು ತಿಳಿಸಿದ್ದಾರೆ.