ಕೊಪ್ಪಳ ನಗರಸಭೆ ನಿಶ್ಚಿತವಾಗಿ ಕಾಂಗ್ರೆಸ್ ಮಡಿಲಿಗೆ ಬರುತ್ತೆ : ಶಾಸಕ ಹಿಟ್ನಾಳ


ಕೊಪ್ಪಳ, ಆ. ೨೭, ಕೊಪ್ಪಳ ಕ್ಷೇತ್ರ ಮತ್ತು ನಗರಕ್ಕೆ ಕಾಂಗ್ರೆಸ್ ಮಾಡಿರುವ ಸೇವೆಯನ್ನು ಪರಿಗಣಿಸಿ ಮಹಾಜನತೆ ನಿಶ್ಚಿತವಾಗಿ ಕಾಂಗ್ರೆಸ್ ಬೆಂಬಲಿಸಿ ಅಧಿಕಾರ ನೀಡುತ್ತಾರೆ ಎಂದು ಕೊಪ್ಪಳ ಕ್ಷೇತ್ರದ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಆಶಾಭಾವನೆ ವ್ಯಕ್ತಪಡಿಸಿದರು.
ಅವರು ನಗರದ ೧೭, ೧೮, ೧೯, ೨೦, ೧೧, ೧೫, ೧೬ ಮತ್ತು ೨೮ ನೇ ವಾರ್ಡಗಳಲ್ಲಿ ಕಾಂಗ್ರೇಸ್ ಪಕ್ಷದ ಚುನಾವಣಾ ಪ್ರಚಾರ ಹಾಗೂ ಅಭ್ಯರ್ಥಿಗಳ ಪರ ಮತಯಾಚನೆ ಮಾಡಿದ ಬಳಿಕ ಮಾತನಾಡಿದರು.
ಹಿಂದಿನ ಕಾಂಗ್ರೇಸ್ ಸರ್ಕಾರದ ಅವಧಿಯಲ್ಲಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಜನರಿಗೆ ಅನ್ನಭಾಗ್ಯ, ಕ್ಷೀರ ಭಾಘ್ಯ, ಶಾದಿ ಭಾಗ್ಯ, ಋಣಮುಕ್ತ ಕರ್ನಾಟಕ, ಸಾಲ ಮನ್ನಾ, ವಿದ್ಯಾಸಿರಿ ಹೀಗೆ ಅನೇಕ ಕೊಡುಗೆ ಜೊತೆಗೆ ಕೊಪ್ಪಳ ಕ್ಷೇತ್ರದ ಅಭಿವೃದ್ಧಿಗೆ ೨೨೩೭ ಕೋಟಿ ಹಣವನ್ನು ಕೊಟ್ಟಿದ್ದಾರೆ, ವಿರೋಧ ಪಕ್ಷದ ಅನೇಕರು ಎಲ್ಲಿ ಅಭಿವೃದ್ಧಿಯಾಗಿದೆ ಎಂದು ಉಡಾಫೆ ಪ್ರಶ್ನೆ ಕೇಳುತ್ತಾರೆ, ಆದರೆ ಆಗಿರುವ ಅಭಿವೃದ್ಧಿ ಕಾರ್ಯಗಳು ಸಾಮಾನ್ಯ ಜನರಿಗೂ ಗೊತ್ತಾಗುತ್ತವೆ. ಅಭಿವೃದ್ಧಿ ವಿಷಯದಲ್ಲಿ ತಾವು ಬಹಿರಂಗ ಚರ್ಚೆಗೆ ಸಿದ್ಧ ಎಂದ ಅವರು ನಗರದ ಅಭಿವೃದ್ಧಿಗಾಗಿ ಸುಮಾರು ೭೩ ಕೋಟಿಗಿಂತಲೂ ಹೆಚ್ಚು ಅನುದಾನ ತಂದಿದ್ದು, ನಗದರಲ್ಲಿ ಎಲ್ಲಾ ರಸ್ತೆಗಳ ಕಾಮಗಾರಿ ಸಂಪೂರ್ಣಗೊಳ್ಳುತ್ತಿವೆ, ನಗರದಲ್ಲಿ ಜೆ.ಪಿ.ಮಾರ್ಕೆಟ್ ನಿರ್ಮಾಣ, ಮಹಿಳಾ ಪದವಿ ಕಾಲೇಜು, ಕೊಪ್ಪಳ ಸ್ನಾತಕೋತ್ತರ ಕೇಂದ್ರ ೧೩ ಏಕರೆ ಭೂಮಿ ಮಂಜೂರು ಮಾಡಿಸಿದ್ದು, ಜಿಲ್ಲಾ ಆಸ್ಪತ್ರೆ ಹೆಚ್ಚಿನ ೪೫೦ ಹಾಸಿಗೆಯುಳ್ಳ ಆಸ್ಪತ್ರೆ ಮಂಜೂರು ಮಾಡಿಸಿದ್ದು, ಮುಖ್ಯವಾಗಿ ನಗರದ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಿ ಜನರಿಗೆ ೨೪*೭ ಮಾದರಿಯ ಶುದ್ಧ ಕುಡಿಯುವ ನೀರಿನ ಸರಬರಾಜು ಮಾಡಲು ಹುಲಿಕೆರೆಗೆ ನೀರು ತುಂಬಿಸುವ ಕಾರ್ಯ ಮಾಡಲಾಗಿದೆ ಮುಂದಿನ ಅವಧಿಯಲ್ಲಿ ಕಾಂಗ್ರೆಸ್ ಮಡಿಲಿಗೆ ನಗರಸಭೆ ಬರುವದು ನಿಶ್ಚಿತ ಹಾಗೂ ನಗರದ ಸಂಪೂರ್ಣ ಅಭಿವೃದ್ಧಿ ಕೈಗೊಳ್ಳುವದು ಸಹ ಶತಸಿದ್ಧ ಎಂದು ಭರವಸೆ ವ್ಯಕ್ತಪಡಿಸಿದರು.
ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಪ್ರಸನ್ನ ಗಡಾದ ಮಾತನಾಡಿ, ನಗರದಲ್ಲಿ ಉಳಿದಿರುವ ಮುಂದಿನ ಅಭಿವೃದ್ಧಿಗೆ ಸ್ಥಳಿಯ ಸಂಸ್ಥೆಯ ಗೆಲುವು ಸಹಕಾರಿಯಾಗಲಿದ್ದು, ಸರ್ವ ಜನಾಂಗದ ಶಕ್ತಿಯಾದ ಕಾಂಗ್ರೆಸ್ ಮಾತ್ರ ಅಭಿವೃದ್ಧಿಯನ್ನು ನಿಷ್ಪಕ್ಷಪಾತವಾಗಿ ಮಾಡಲು ಸಾಧ್ಯ ಆದ್ದರಿಂದ ನಗರದ ೩೧ ವಾರ್ಡಗಳ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿರಿ ಎಂದರು.
ಈ ಸಂದರ್ಭದಲ್ಲಿ ಮಾಜಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಜುಲ್ಲು ಖಾದರ ಖಾದ್ರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾಟನ್ ಪಾಷಾ, ಪ್ರಚಾರ ಸಮಿತಿ ಅಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೃಷ್ಣ ಎಂ. ಇಟ್ಟಂಗಿ, ಮುಖಂಡರುಗಳಾದ ದ್ಯಾಮಣ್ಣ ಚಿಲವಾಡಗಿ, ನವೋದಯ ವಿರುಪಣ್ಣ, ರಾಮಣ್ಣ ಕಲ್ಲನವರ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಇಂದಿರಾ ಭಾವಿಕಟ್ಟಿ, ಮಹೇಂದ್ರ ಚೋಪ್ರಾ, ಜಿ.ಪಂ. ಸದಸ್ಯ ಗೂಳಪ್ಪ ಹಲಗೇರಿ, ರಾಜ್ಯ ಕಾರ್ಯದರ್ಶಿ ಕಿಶೋರಿ ಬೂದನೂರ, ಗವಿಸಿದ್ದಪ್ಪ ಮುದಗಲ್, ನಾಗರಾಜ ಬಳ್ಳಾರಿ, ಅರ್ಜುನಸಾ ಕಾಟವಾ, ಗವಿಸಿದ್ದಪ್ಪ ಚಿನ್ನೂರ, ಶಬ್ಬೀರ್ ಸಿದ್ದಖಿ, ದಶರಥ ಅರಕೇರಿ, ಗಿಡ್ಡಯಲ್ಲಪ್ಪ, ಯಮನೂರ ಭೋವಿ, ಈರಪ್ಪ ಹುಣಸಿಮರದ, ರವಿ ಕುರಗೋಡ, ಕೌಶಲ್ ಚೋಪ್ರಾ, ಶೀತಲ್ ಪಾಟೀಲ್, ರಮೇಶ ಗಿಣಗೇರಿ ಮುಂತಾದವರು ಇದ್ದರು.
ವಿವಿಧ ವಾರ್ಡಗಳ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಗಳಾದ ಗವಿಸಿದ್ದಪ್ಪ ಬಸಪ್ಪ ದೊಡ್ಡಮನಿ (೧೭), ಜಯಮ್ಮ ಯಮನೂರಪ್ಪ ನಾಯಕ (೧೮), ಸೈಯದ್ ನಾಜಿಯಾ ಬೇಗಂ (೧೯), ಲತಾ ಗವಿಸಿದ್ದಪ್ಪ ಚಿನ್ನೂರ (೨೦), ಮಹೆಬೂಬ ತಂದಿ ಮಹೆಬೂಬಸಾಬ್ ಮಾನ್ವಿ (೧೫), ರಾಮಣ್ಣ ವೆಂಕಪ್ಪ ಹದ್ದಿನ್ (೧೬), ಈರಣ್ಣ ಗಂಗಪ್ಪ ಬಂಡಾನವರ (೧೧), ಮುತ್ತುರಾಜ ಕುಷ್ಟಗಿ (೨೮) ಉಪಸ್ಥಿತರಿದ್ದರು.