ಕೊಪ್ಪಳ ಜಿಲ್ಲೆ : ಚುನಾವಣಾ ವೀಕ್ಷಕರ ಆಗಮನ

ಕೊಪ್ಪಳ ಏ.   : ವಿಧಾನಸಭಾ ಚುನಾವಣೆಯನ್ನು ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ಜರುಗಿಸುವ ಉದ್ದೇಶದಿಂದ ಚುನಾವಣೆ ಪ್ರಕ್ರಿಯೆ ಬಗ್ಗೆ ನಿಗಾ ವಹಿಸಲು ಚುನಾವಣಾ ಆಯೋಗವು ಕೊಪ್ಪಳ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಿಗೆ ನೇಮಿಸಿರುವ ೦೩ ಸಾಮಾನ್ಯ ವೀಕ್ಷಕರು ಹಾಗೂ ಒಬ್ಬರು ಪೊಲೀಸ್ ವೀಕ್ಷಕರು ಜಿಲ್ಲೆಗೆ ಆಗಮಿಸಿದ್ದು, ಕರ್ತವ್ಯ ನಿರ್ವಹಣೆಯನ್ನು ಪ್ರಾರಂಭಿಸಿದ್ದಾರೆ.
ಕುಷ್ಟಗಿ ಮತ್ತು ಯಲಬುರ್ಗಾ ವಿಧಾನಸಭಾ ಕ್ಷೇತ್ರಗಳಿಗೆ ಐಎಎಸ್ ಅಧಿಕಾರಿ ಕೆ.ಎನ್. ಸತೀಶ್- ೯೪೮೩೭೪೦೯೩೬. ಕನಕಗಿರಿ ಮತ್ತು ಗಂಗಾವತಿ ವಿಧಾನಸಭಾ ಕ್ಷೇತ್ರಗಳಿಗೆ ಐಎಎಸ್ ಅಧಿಕಾರಿ ಎಂ. ಜಾಯ್‌ಸಿಂಗ್- ೯೪೮೩೭೪೦೩೭೫. ಹಾಗೂ ಕೊಪ್ಪಳ ವಿಧಾನಸಭಾ ಕ್ಷೇತ್ರದ ಚುನಾವಣಾ ಸಾಮಾನ್ಯ ವೀಕ್ಷಕರಾಗಿ ಐಎಎಸ್ ಅಧಿಕಾರಿ ಎಂ. ಶಂಕರನಾರಾಯಣನ್-೯೪೮೩೭೪೦೩೪೨ ಅವರು ಆಗಮಿಸಿದ್ದಾರೆ. ಕೊಪ್ಪಳ ಜಿಲ್ಲೆಗೆ ಪೊಲೀಸ್ ವೀಕ್ಷಕರಾಗಿ ಐಪಿಎಸ್ ಅಧಿಕಾರಿ ಬಿ. ಶಂಕರ ಜೈಸ್ವಾಲ್- ೮೨೭೭೮೮೫೧೫೨ ಅವರು ಆಗಮಿಸಿದ್ದಾರೆ.
ಚುನಾವಣೆ ವಿಷಯಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರು ಯಾವುದೇ ಅಹವಾಲು, ದೂರುಗಳಿದ್ದಲ್ಲಿ ಚುನಾವಣಾ ವೀಕ್ಷಕರಿಗೆ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ  ತಿಳಿಸಿದ್ದಾರೆ.

Please follow and like us:
error