ಕೊಪ್ಪಳ ಜಿಲ್ಲೆ : ಗೆದ್ದವರು , ಪಡೆದ ಮತಗಳು ,ಸೋತವರು -ಪಡೆದ ಮತಗಳು ಗೆಲುವಿನ ಅಂತರ Full Details

ರಾಜ್ಯವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಕೊಪ್ಪಳ ಜಿಲ್ಲೆಯ ಘಟಾನುಘಟಿಗಳು ಸೋಲನ್ನು ಕಂಡಿದ್ದಾರೆ. ಕೊಪ್ಪಳ ಜಿಲ್ಲೆಯ ೫ ವಿಧಾನಸಭಾ ಕ್ಷೇತ್ರಗಳ ಪೈಕಿ ಮೂರರಲ್ಲಿ ಬಿಜೆಪಿ ಗೆಲುವು ಕಂಡರೆ ಕಾಂಗ್ರೆಸ್ ಪಕ್ಷ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ಕಂಡಿದೆ. ಕೊಪ್ಪಳ ಕ್ಷೇತ್ರದ ಶಾಸಕ ರಾಘವೇಂದ್ರ ಹಿಟ್ನಾಳ ಸತತ ಎರಡನೇ ಬಾರಿ ಗೆಲುವಿನ ರುಚಿ ಕಂಡಿದ್ದಾರೆ.

ಕೊಪ್ಪಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಘವೇಂದ್ರ ಹಿಟ್ನಾಳ ತಮ್ಮ ಸಮೀಪದ ಪ್ರತಿಸ್ಪಧಿ ಬಿಜೆಪಿ ಅಮರೇಶ ಸಂಗಣ್ಣ ಕರಡಿಯವರನ್ನು ೨೬೩೫೧ ಮತಗಳಿಂದ ಸೋಲಿಸಿದ್ದಾರೆ. ಕಾಂಗ್ರೆಸ್ ನ ರಾಘವೇಂದ್ರ ಹಿಟ್ನಾಳ ಒಟ್ಟು ೯೮೭೮೩ ಮತಗಳನ್ನು ಪಡೆದರೆ ಬಿಜೆಪಿ ಅಮರೇಶ ಕರಡಿ ೭೨07೨ ಮತಗಳನ್ನು ಪಡೆದಿದ್ದಾರೆ. ಜೆಡಿಎಸ್ ನ ಕೆ.ಎಂ.ಸಯ್ಯದ್ ೪೧೮೫ ಮತಗಳನ್ನು ಪಡೆದಿದ್ದಾರೆ. ಇಲ್ಲಿ ಕಳೆದ ಸಲ ಸಹ ರಾಘವೇಂದ್ರ ಹಿಟ್ನಾಳ ಕಾಂಗ್ರೆಸ್ ನಿಂದ ಆಯ್ಕೆಯಾಗಿದ್ದರು.  ಪ್ರದಾನಿ ನರೇಂಧ್ರ ಮೋದಿ ಈ ಭಾಗದಲ್ಲಿ ಪ್ರಚಾರದ ಮಾಡಿದ್ದೂ ಸಹ ಬಿಜೆಪಿಗೆ ಜಿಲ್ಲೆಯಲ್ಲಿ ಅಲೆ ಸೃಷ್ಟಿ ಮಾಡುವಲ್ಲಿ ಯಶಸ್ವಿಯಾಗಿದೆ . ಮತಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನು ತೀವ್ರ ಜಿದ್ದಾಜಿದ್ದಿಯ ಕ್ಷೇತ್ರವಾಗಿದ್ದ ಗಂಗಾವತಿಯಲ್ಲಿ ಮಾಜಿ ಸಚಿವ, ಕಾಂಗ್ರೆಸ್ ನ ಅಭ್ಯರ್ಥಿ ಇಕ್ಬಾಲ್ ಅನ್ಸಾರಿ ಸೋಲನ್ನುಂಡಿದ್ದಾರೆ. ಇಲ್ಲಿ ಬಿಜೆಪಿ ಪರಣ್ಣ ಮುನವಳ್ಳಿ ಗೆಲುವಿನ ನಗೆ ಬೀರಿದ್ದಾರೆ.  ಬಿಜೆಪಿಯ ಪರಣ್ಣ ಮುನವಳ್ಳಿ ೬೭೬೧೭ ಮತ ಪಡೆದರೆ ಕಾಂಗ್ರೆಸ್ ನ ಇಕ್ಬಾಲ್ ಅನ್ಸಾರಿ ೫೯೬೪೪ ಪಡೆದರೆ ಜೆಡಿಎಸ್ ನ ಕರಿಯಣ್ಣ ಸಂಗಟಿ ೧೪೧೬೧ ಮತ ಪಡೆದಿದ್ದಾರೆ. ಬಿಜೆಪಿಯಿಂದ ಮತ್ತೊಮ್ಮೆ ಪರಣ್ಣ ಮುನವಳ್ಳಿ ಆಯ್ಕೆಯಾಗಿದ್ಧಾರೆ. ಈ ಹಿಂದೆ ೨೦೦೮ರಲ್ಲಿ ಪರಣ್ಣ ಮುನವಳ್ಳಿ ಬಿಜೆಪಿಯಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಕಳೆದ ಸಲ ಈ ಕ್ಷೇತ್ರದಲ್ಲಿ ಇಕ್ಬಾಲ್ ಅನ್ಸಾರಿ ಶಾಶಕರಾಗಿ ಆಯ್ಕೆಯಾಗಿದ್ದರು. ಯಲಬುರ್ಗಾ ಕ್ಷೇತ್ರದಲ್ಲಿ ಉನ್ನತ ಶಿಕ್ಷಣ ಸಚಿವ ಬಸವರಾಜ್ ರಾಯರಡ್ಡಿ  ಸೋಲಿನ ಕಹಿ ಕಂಡಿದ್ದಾರೆ. ಬಿಜೆಪಿಯ ಹಾಲಪ್ಪ ಆಚಾರ್ ೭9072 ಮತಗಳನ್ನು ಪಡೆದು ಜಯಶಾಲಿಯಾದರೆ ಕಾಂಗ್ರೆಸ್ ನ ಬಸವರಾಜ್ ರಾಯರಡ್ಡಿ ೬೫75೪ ಹಾಗೂ ಜೆಡಿಎಸ್ ನ ವೀರನಗೌಡ ಪಾಟೀಲ್ ೧೪591 ಮತಗಳನ್ನು ಪಡೆದಿದ್ದಾರೆ. ಇಲ್ಲಿ ನೋಟಾ ಮತಗಳು ೧೫೦೭ ಎನ್ನುವುದು ಗಮನಾರ್ಹವಾಗಿದೆ. ಬಸವರಾಜ್ ರಾಯರಡ್ಡಿ ಕಳೆದ ಸಲ ಇಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದರು.

ಕನಕಗಿರಿಯ ಶಾಸಕ, ಮಾಜಿ ಸಚಿವ ಕಾಂಗ್ರೆಸ್ ನ  ಶಿವರಾಜ್ ತಂಗಡಗಿ ಸಹ ಸೋಲನ್ನು ಕಂಡಿದ್ದಾರೆ. ಇಲ್ಲಿ ಬಿಜೆಪಿಯ ಬಸವರಾಜ್ ದಡೆಸೂಗೂರು ೮೭೭೩೫ ಪಡೆದು 14225 ಮತಗಳ ಅಂತರದಿಂದ ಜಯ ಕಂಡಿದ್ದಾರೆ. ಕಾಂಗ್ರೆಸ್ ನ ಶಿವರಾಜ್ ತಂಗಡಗಿ ೭೩೫೧೦ ಹಾಗೂ ಜೆಡಿಎಸ್ ನ ಮಂಜುಳಾ ರವಿಕುಮಾರ್ ೧೪೬೪ ಮತಗಳನ್ನು ಪಡೆದಿದ್ದಾರೆ.  ಕಳೆದ ಸಲ ಶಿವರಾಜ್ ತಂಗಡಗಿ – ಹಾಗೂ ಬಸವರಾಜ್ ದಡೆಸೂಗೂರು ನಡುವೆ ತೀವ್ರ ಪೈಪೋಟಿ ನಡೆದಿತ್ತು. ಕೊನೆಗೆ ಶಿವರಾಜ್ ತಂಗಡಗಿ ಶಾಸಕರಾಗಿ ಆಯ್ಕೆಯಾಗಿದ್ದರು. ಕುಷ್ಟಗಿಯಲ್ಲಿ ಮಾಜಿ ಸಚಿವ ಕಾಂಗ್ರೆಸ್ ನ ಅಮರೇಗೌಡ ಬಯ್ಯಾಪೂರ ಮತ್ತೊಮ್ಮೆ ಗೆಲುವನ್ನು ಕಂಡಿದ್ಧಾರೆ. ಅಮರೇಗೌಡ ಬಯ್ಯಾಪೂರ ೮7566 ಮತಗಳನ್ನು ಪಡೆದರೆ ಹಾಲಿ ಶಾಸಕ, ಬಿಜೆಪಿ ದೊಡ್ಡನಗೌಡ ಪಾಟೀಲ್ ೬೮೫35 ಪಡೆದು ಸೋಲನುಭವಿಸಿದ್ದಾರೆ. ಜೆಡಿಎಸ್ ನ ಹೆಚ್.ಸಿ.ನೀರಾವರಿ 4002 ಮತಗಳನ್ನು ಪಡೆದಿದ್ದಾರೆ. ಕಳೆದ ಸಲ ಈ ಕ್ಷೇತ್ರದಲ್ಲಿ ಬಿಜೆಪಿಯ ದೊಡ್ಡನಗೌಡ ಪಾಟೀಲರು ಆಯ್ಕೆಯಾಗಿದ್ದರು. ಒಟ್ಟಾರೆಯಾಗಿ ಕೊಪ್ಪಳ ಜಿಲ್ಲೆಯಲ್ಲಿ ಕಾಂಗ್ರೆಸ್ ನ ದೊಡ್ಡ ಘಟಾನುಘಟಿಗಳು ಸೋಲನುಭಿಸಿದ್ರೆ. ಕನಕಗಿರಿಯಿಂದ ಬಸವರಾಜ್ ದಡೇಸೂಗೂರು ಮೊದಲ ಬಾರಿಗೆ ವಿಧಾನಸೌಧದ ಮೆಟ್ಟಲು ಏರುತ್ತಿದ್ದಾರೆ. ಗೆದ್ದ ಅಭ್ಯರ್ಥಿಗಳು ಹಾಗೂ ಬೆಂಬಲಿಗರು ಪರಸ್ಪರ ಬಣ್ಣ ಎರಚಿಕೊಂಡು ಸಂಭ್ರಮಿಸಿದರು.

Please follow and like us:
error