fbpx

ಕೊಪ್ಪಳ ಜಿಲ್ಲೆಯಲ್ಲಿ ೧೦ ಮತದಾನ ಕೇಂದ್ರಗಳ ಸ್ಥಾಪನೆ : ಒಟ್ಟು ೮೩೪೦ ಮತದಾರರು

ವಿಧಾನ ಪರಿಷತ್ ಈಶಾನ್ಯ ಪದವಿದರ ಕ್ಷೇತ್ರ ಚುನಾವಣೆ-೨೦೧೮

ಕೊಪ್ಪಳ ಜೂ. ೦೧  : ಕರ್ನಾಟಕ ರಾಜ್ಯ ಈಶಾನ್ಯ ಪದವೀಧರರ ಕ್ಷೇತ್ರದಿಂದ ನಡೆಯುವ ಚುನಾವಣೆಗೆ ಕೊಪ್ಪಳ ಜಿಲ್ಲೆಯಲ್ಲಿ ಹತ್ತು ಮತದಾನ ಕೇಂದ್ರಗಳನ್ನು ಭಾರತ ಚುನಾವಣಾ ಆಯೋಗದ ಅನುಮತಿಯ ಮೇರೆಗೆ ಸ್ಥಾಪಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು ೮೩೪೦ ಪದವೀಧರ ಮತದಾರರಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ತಿಳಿಸಿದ್ದಾರೆ.
ಈಶಾನ್ಯ ಪದವೀಧರರ ಮತಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಕೊಪ್ಪಳ ಜಿಲ್ಲೆಯಲ್ಲಿ ಸ್ಥಾಪಿಸಲಾದ ಮತದಾನ ಕೇಂದ್ರಗಳ ವಿವರ ಇಂತಿದೆ. ಮತಗಟ್ಟೆ ಸಂಖ್ಯೆ ೯೮-ಕುಷ್ಟಗಿ ತಹಶೀಲ ಕಾರ್ಯಾಲಯ, ಸಿಬ್ಬಂದಿ ಕೊಠಡಿ, ಕುಷ್ಟಗಿ-೬೮೯ ಮತದಾರರು. ೯೮/ಎ-ಕುಷ್ಟಗಿ ತಹಶೀಲ ಕಾರ್ಯಾಲಯ, ಸರ್ವೇ ಸೆಕ್ಷನ್, ಕುಷ್ಟಗಿ-೬೯೮ ಮತದಾರರು. ೧೦೦-ಯಲಬುರ್ಗಾ-೧ ಸರಕಾರಿ ಪದವಿ ಪೂರ್ವ ಕಾಲೇಜ (ಪ್ರೌಢ ಶಾಲೆ ವಿಭಾಗ), ಹೊಸ ಕಟ್ಟಡ (ದಕ್ಷಿಣ ಭಾಗ) ಯಲಬುರ್ಗಾ-೬೧೭ ಮತದಾರರು. ೧೦೦/ಎ-ಯಲಬುರ್ಗಾ-೨ ಸರಕಾರಿ ಪದವಿ ಪೂರ್ವ ಕಾಲೇಜ (ಪ್ರೌಢ ಶಾಲೆ ವಿಭಾಗ), ಹೊಸ ಕಟ್ಟಡ (ಮಧ್ಯ ಭಾಗ), ಯಲಬುರ್ಗಾ-೮೧೯ ಮತದಾರರು. ೧೦೪-ಗಂಗಾವತಿ ಸರಕಾರಿ ಬಾಲಕರ ಪದವಿ ಪೂರ್ವ ಕಾಲೇಜ (ಪ್ರೌಢ ಶಾಲೆ ವಿಭಾಗ), (ದಕ್ಷಿಣ ಭಾಗ) ಗಂಗಾವತಿ-೭೬೬ ಮತದಾರರು. ೧೦೪/ಎ-ಗಂಗಾವತಿ ಸರಕಾರಿ ಬಾಲಕರ ಪದವಿ ಪೂರ್ವ ಕಾಲೇಜ (ಪ್ರೌಢ ಶಾಲೆ ವಿಭಾಗ), (ಪಶ್ಚಿಮ ಎಡ ಭಾಗ) ಗಂಗಾವತಿ-೭೬೦ ಮತದಾರರು. ೧೦೫-ಗಂಗಾವತಿ ಸರಕಾರಿ ಬಾಲಕರ ಪದವಿ ಪೂರ್ವ ಕಾಲೇಜ (ಪ್ರೌಢ ಶಾಲೆ ವಿಭಾಗ), (ಉತ್ತರ ಭಾಗ) ಗಂಗಾವತಿ-೧೩೧೨ ಮತದಾರರು. ೧೦೬-ಕೊಪ್ಪಳ ತಾಲೂಕ ಪಂಚಾಯತ್ ಕಾರ್ಯಾಲಯ, ಸಭಾ ಕೊಠಡಿ (ಪಶ್ಚಿಮ ಭಾಗ) ಕೊಪ್ಪಳ-೮೭೩ ಮತದಾರರು. ೧೦೬/ಎ-ಕೊಪ್ಪಳ ತಾಲೂಕ ಪಂಚಾಯತ್ ಕಾರ್ಯಾಲಯ, ಸಭಾ ಕೊಠಡಿ (ಪಶ್ಚಿಮ ಭಾಗ, ಎಡಗಡೆಯ ಕೊಠಡಿ) ಕೊಪ್ಪಳ-೮೮೯ ಮತದಾರರು. ೧೦೭-ಕೊಪ್ಪಳ ಜಿಲ್ಲಾ ತರಬೇತಿ ಸಂಸ್ಥೆ, ತಹಶೀಲ್ ಕಛೇರಿ ಕಟ್ಟಡ (ನೆಲ ಮಹಡಿ) ಕೊಪ್ಪಳ-೯೧೭ ಮತದಾರರು. ಜಿಲ್ಲೆಯಲ್ಲಿ ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಒಟ್ಟು ೮೩೪೦ ಪದವೀಧರ ಮತದಾರರಿದ್ದಾರೆ.
ಕೊಪ್ಪಳ ಜಿಲ್ಲೆಯಲ್ಲಿ ಸ್ಥಾಪಿಸಲಾದ ಮತಗಟ್ಟೆಗಳಿಗೆ ನಿಗದಿಪಡಿಸಿದ ಮತದಾರರ ಪಟ್ಟಿಗಳನ್ನು ಸಂಬಂಧಪಟ್ಟ ತಹಶೀಲ ಕಾರ್ಯಾಲಯ ಹಾಗೂ ಜಿಲ್ಲಾಧಿಕಾರಿಗಳ ಕಾರ್ಯಾಲಯಗಳಲ್ಲಿ ವಿಕ್ಷಣೆಗಾಗಿ ಇರಿಸಲಾಗಿದೆ. ಮತದಾನವನ್ನು ಜೂನ್. ೦೮ ರಂದು ಬೆಳಿಗ್ಗೆ ೭ ಗಂಟೆಯಿಂದ ಸಾಯಂಕಾಲ ೫ ಗಂಟೆವರೆಗೆ ನಡೆಸಲಾಗುವುದು. ಮನದಾನವನ್ನು ಮುಕ್ತ, ಶಾಂತರೀತಿಯಿಂದ ಹಾಗೂ ನ್ಯಾಯಸಮ್ಮತವಾಗಿ ಕೈಗೊಳ್ಳು ಮತದಾರರು ಸಹಕರಿಸುವಂತೆ ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಎಂ. ಕನಗವಲ್ಲಿ   ತಿಳಿಸಿದ್ದಾರೆ.

Please follow and like us:
error
error: Content is protected !!