ಕೊಪ್ಪಳ ಜಿಲ್ಲೆಯಲ್ಲಿ ೧೦೭೮೩೬೪ ಮತದಾರರು : ಮತದಾನ ಕರ್ತವ್ಯಕ್ಕೆ ೭೭೯೫ ಸಿಬ್ಬಂದಿ

ಕೊಪ್ಪಳ ಮೇ. ೦೩ : ವಿಧಾನಸಭಾ ಸಾರ್ವತ್ರಿಕ ಚುನಾವಣೆ ಸಂಬಂಧಿಸಿದಂತೆ ಮೇ. ೧೨ ರಂದು ಮತದಾನ ನಡೆಯಲಿದ್ದು, ಮತದಾರರ ಪಟ್ಟಿಗೆ ಹೆಸರು ಸೇರಿಸಲು ಹೆಚ್ಚಿನ ಕಾಲಾವಕಾಶ ನೀಡಲಾಗಿತ್ತು. ಮತದಾರರ ಪರಿಷ್ಕೃತ ಪಟ್ಟಿಯನ್ವಯ ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು ೧೦೭೮೩೬೪ ಮತದಾರರು ಹಾಗೂ ೩೭೨ ಸೇವಾ ಮತದಾರರಿದ್ದು ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು ೧೩೦೧ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ತಿಳಿಸಿದ್ದಾರೆ.
ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಕೊಪ್ಪಳ ಜಿಲ್ಲೆಯಲ್ಲಿನ ಒಟ್ಟು ಮತದಾರರ ಸಂಖ್ಯೆ, ಒಟ್ಟು ಮತಗಟ್ಟೆಗಳು, ನೇಮಕ ಮಾಡಲಾದ ಮತಗಟ್ಟೆ ಸಿಬ್ಬಂದಿಗಳು, ಮೈಕ್ರೋ ಆಬ್ಸರ್‍ವರ್‍ಸ್, ಸ್ಪರ್ಧಿಸುವ ಅಭ್ಯರ್ಥಿಗಳ ಸಂಖ್ಯೆ, ಚುನಾವಣೆಗಾಗಿ ಉಪಯೋಗಿಸಲಾಗುವ ವಿದ್ಯುನ್ಮಾನ ಮತಯಂತ್ರಗಳು, ಮತ ಎಣಿಕೆ ಹಾಗೂ ಟೇಬಲ್ ಹಾಗೂ ಸಿಬ್ಬಂದಿಗಳು, ಮಸ್ಟರಿಂಗ್ ಮತ್ತು ಡಿ-ಮಸ್ಟರಿಂಗ್ ಕೆಂದ್ರ, ಮತ ಎಣಿಕಾ ಕೇಂದ್ರ, ಚುನಾವಣಾ ಕರ್ತವ್ಯಕ್ಕಾಗಿ ಉಪಯೋಗಿಸಲಾಗುವ ವಾಹನಗಳ ಸಂಖ್ಯೆ, ಸಖಿ ಮತಗಟ್ಟೆಗಳು (ಪಿಂಕ್ ಪುಲ್ಲಿಂಗ್ ಸ್ಟೇಶನ್ಸ್), ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು, ವಶಪಡಿಸಿಕೊಂಡ ನಗದು ಹಣದ ವಿವಿರ, ಚುನಾವಣಾ ಸಂಬಂದಿತ ಸಾರ್ವಜನಿಕರ ದೂರುಗಳು, ಚುನಾವಣಾ ಪ್ರಚಾರದ ಅನುಮತಿಗಾಗಿ ಸ್ವೀಕರಿಸಿದ ಅರ್ಜಿಗಳ ವಿವರ ಇಂತಿದೆ.
ಮತದಾರರ ಸಂಖ್ಯೆ : ೬೦-ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ ೧೧೩೪೬೯ ಪುರುಷರು, ೧೧೧೨೧೦ ಮಹಿಳೆಯರು ಹಾಗೂ ೧೦ ಇತರೆ ಸೇರಿ ಒಟ್ಟು ೨೨೪೬೮೯ ಮತದಾರರಿದ್ದು, ೧೩೯ ಸೇವಾ ಮತದಾರರಿದ್ದಾರೆ. ೬೧-ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ೧೦೪೭೮೬ ಪುರುಷರು, ೧೦೬೭೫೧ ಮಹಿಳೆಯರು ಹಾಗೂ ೬ ಇತರೆ ಸೇರಿ ಒಟ್ಟು ೨೧೧೫೪೩ ಮತದಾರರಿದ್ದು, ೨೨ ಸೇವಾ ಮತದಾರರಿದ್ದಾರೆ. ೬೨-ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ೯೬೭೦೯ ಪುರುಷರು, ೯೭೩೪೭ ಮಹಿಳೆಯರು ಹಾಗೂ ೦೧ ಇತರೆ ಸೇರಿ ಒಟ್ಟು ೧೯೪೦೫೭ ಮತದಾರರಿದ್ದು, ೨೨ ಸೇವಾ ಮತದಾರರಿದ್ದಾರೆ. ೬೩-ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ೧೦೪೪೫೮ ಪುರುಷರು, ೧೦೨೬೪೮ ಮಹಿಳೆಯರು ಹಾಗೂ ೦೪ ಇತರೆ ಸೇರಿ ಒಟ್ಟು ೨೦೭೧೧೦ ಮತದಾರರಿದ್ದು, ೧೨೨ ಸೇವಾ ಮತದಾರರಿದ್ದಾರೆ. ೬೪-ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ೧೨೦೩೩೬ ಪುರುಷರು, ೧೨೦೬೧೪ ಮಹಿಳೆಯರು ಹಾಗೂ ೧೫ ಇತರೆ ಸೇರಿ ಒಟ್ಟು ೨೪೦೯೬೫ ಮತದಾರರಿದ್ದು, ೬೭ ಸೇವಾ ಮತದಾರರಿದ್ದಾರೆ. ಜಿಲ್ಲೆಯಲ್ಲಿ ೫೩೯೭೫೮ ಪುರುಷರು, ೫೩೮೫೭೦ ಮಹಿಳೆಯರು ಹಾಗೂ ೩೬ ಇತರೆ ಸೇರಿ ಒಟ್ಟು ೧೦೭೮೩೬೪ ಮತದಾರರಿದ್ದು, ೩೭೨ ಸೇವಾ ಮತದಾರರಿದ್ದಾರೆ. ೩೭೨ ಸೇವಾ ಮತದಾರರಿಗೆ ಏ. ೨೮ ರಂದು ಇಟಿಪಿಬಿಎಸ್ (ಎಲೆಕ್ಟ್ರಾನಿಕಲಿ ಟ್ರಾನ್ಸ್‌ಮಿಟೆಟ್ ಪೋಸ್ಟಲ್ ಬ್ಯಾಲೆಟ್ ಸಿಸ್ಟಮ್) ಮೂಲಕ ಅಂಚೆ ಮತಪತ್ರಗಳನ್ನು ರವಾನಿಸಲಾಗಿದೆ.
ಮಟಗಟ್ಟೆಗಳು : ಕೊಪ್ಪಳ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿರುವ ಮತಗಟ್ಟೆಗಳ ವಿವರ ಇಂತಿದೆ. ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ ೨೬೯ ಮತಗಟ್ಟೆಗಳಿವೆ. ಕನಕಗಿರಿ-೨೬೦ ಮತಗಟ್ಟೆಗಳು. ಗಂಗಾವತಿ – ೨೩೨ ಮತಗಟ್ಟೆಗಳು. ಯಲಬುರ್ಗಾ-೨೫೩ ಮತಗಟ್ಟೆಗಳು. ಹಾಗೂ ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ೨೮೭ ಮತಗಟ್ಟೆಗಳಿದ್ದು, ಜಿಲ್ಲೆಯಲ್ಲಿ ಒಟ್ಟು ೧೩೦೧ ಮತಗಟ್ಟೆಗಳಿವೆ.
ಮಟಗಟ್ಟೆ ಸಿಬ್ಬಂದಿಗಳು : ಕೊಪ್ಪಳ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ನೇಮಕ ಮಾಡಲಾದ ಮತಗಟ್ಟೆ ಸಿಬ್ಬಂದಿಗಳ ವಿವರ ಇಂತಿದೆ. ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ ಪಿ.ಆರ್.ಓ – ೩೨೨, ಎ.ಪಿ.ಆರ್.ಓ – ೩೨೨, ಪಿ.ಓ.ಎಸ್- ೯೬೬ ಸೇರಿ ಒಟ್ಟು ೧೬೧೦ ಸಿಬ್ಬಂದಿಗಳನ್ನು ಮತಗಟ್ಟೆಗಳಿಗೆ ನೇಮಕ ಮಾಡಲಾಗಿದೆ. ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಪಿ.ಆರ್.ಓ – ೩೧೧, ಎ.ಪಿ.ಆರ್.ಓ – ೩೧೧, ಪಿ.ಓ.ಎಸ್- ೯೩೩, ಒಟ್ಟು ೧೫೫೫ ಸಿಬ್ಬಂದಿಗಳು. ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಪಿ.ಆರ್.ಓ – ೨೭೮, ಎ.ಪಿ.ಆರ್.ಓ – ೨೭೮, ಪಿ.ಓ.ಎಸ್ – ೮೩೪, ಒಟ್ಟು ೧೩೯೦ ಸಿಬ್ಬಂದಿಗಳು. ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ಪಿ.ಆರ್.ಓ – ೩೦೪, ಎ.ಪಿ.ಆರ್.ಓ – ೩೦೪, ಪಿ.ಓ.ಎಸ್-೯೧೨, ಒಟ್ಟು ೧೫೨೦ ಸಿಬ್ಬಂದಿಗಳು. ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಪಿ.ಆರ್.ಓ – ೩೪೪, ಎ.ಪಿ.ಆರ್.ಓ – ೩೪೪, ಪಿ.ಓ.ಎಸ್- ೧೦೩೨, ಒಟ್ಟು ೧೭೨೦ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದ್ದು, ಜಿಲ್ಲೆಯಲ್ಲಿ ಪಿ.ಆರ್.ಓ – ೧೫೫೯, ಎ.ಪಿ.ಆರ್.ಓ – ೧೫೫೯, ಪಿ.ಓ.ಎಸ್ – ೪೬೭೭. ಜಿಲ್ಲೆಯಲ್ಲಿ ಮೇ. ೧೨ ರಂದು ಜರುಗುವ ಮತದಾನ ಕಾರ್ಯಕ್ಕೆ ಒಟ್ಟಾರೆ ಒಟ್ಟು ೭೭೯೫ ಸಿಬ್ಬಂದಿಗಳನ್ನು ಮತಗಟ್ಟೆಗಳಿಗೆ ನೇಮಕ ಮಾಡಲಾಗಿದೆ.
ಮೈಕ್ರೋ ಆಬ್ಸರ್‍ವರ್‍ಸ್ : ಕೊಪ್ಪಳ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಮೈಕ್ರೋ ಆಬ್ಸರ್‍ವರ್‍ಸ್ ಸಂಖ್ಯೆ ವಿವರ ಇಂತಿದೆ. ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ ೫೨, ಕನಕಗಿರಿ-೪೯, ಗಂಗಾವತಿ -೫೦, ಯಲಬುರ್ಗಾ-೫೬, ಕೊಪ್ಪಳ-೫೦, ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು ಮೈಕ್ರೋ ಆಬ್ಸರ್‍ವರ್‍ಸ್ ೨೫೭.
ಅಭ್ಯರ್ಥಿಗಳ ಸಂಖ್ಯೆ : ಕೊಪ್ಪಳ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಸಂಖ್ಯೆ ವಿವರ ಇಂತಿದೆ. ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ ೦೯, ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ೧೦, ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ೧೨, ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ೧೧, ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ೧೦ ಅಭ್ಯರ್ಥಿಗಳು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು ೫೨ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.
ವಿದ್ಯುನ್ಮಾನ ಮತಯಂತ್ರಗಳು : ಕೊಪ್ಪಳ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆಗಾಗಿ ಉಪಯೋಗಿಸುವ ವಿದ್ಯುನ್ಮಾನ ಮತಯಂತ್ರಗಳ ವಿವಿರ ಇಂತಿದೆ. ೬೦-ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ ಬ್ಯಾಲೊಟ್ ಯುನಿಟ್, ಕಂಟ್ರೋಲ ಯುನಿಟ್ ಹಾಗೂ ವಿವಿಪ್ಯಾಡ್ ತಲಾ ೩೨೩, ೬೧-ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಬ್ಯಾಲೊಟ್ ಯುನಿಟ್, ಕಂಟ್ರೋಲ ಯುನಿಟ್ ಹಾಗೂ ವಿವಿಪ್ಯಾಡ್ ತಲಾ ೩೧೨, ೬೨-ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಬ್ಯಾಲೊಟ್ ಯುನಿಟ್, ಕಂಟ್ರೋಲ ಯುನಿಟ್ ಹಾಗೂ ವಿವಿಪ್ಯಾಡ್ ತಲಾ ೨೭೯, ೬೩-ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ಬ್ಯಾಲೊಟ್ ಯುನಿಟ್, ಕಂಟ್ರೋಲ ಯುನಿಟ್ ಹಾಗೂ ವಿವಿಪ್ಯಾಡ್ ತಲಾ ೩೦೪, ೬೪-ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಬ್ಯಾಲೊಟ್ ಯುನಿಟ್, ಕಂಟ್ರೋಲ ಯುನಿಟ್ ಹಾಗೂ ವಿವಿಪ್ಯಾಡ್ ತಲಾ ೩೪೫, ಯಂತ್ರಗಳನ್ನು ಉಪಯೋಗಿಸಲಾಗುತ್ತಿದ್ದು, ಜಿಲ್ಲೆಯಲ್ಲಿ ಬ್ಯಾಲೊಟ್ ಯುನಿಟ್-೧೫೬೩, ಕಂಟ್ರೋಲ ಯುನಿಟ್-೧೫೬೩, ಹಾಗೂ ವಿವಿಪ್ಯಾಡ್-೧೫೬೩ ವಿದ್ಯುನ್ಮಾನ ಮತಯಂತ್ರಗಳನ್ನು ಉಪಯೋಗಿಸಲಾಗುತ್ತಿದೆ.
ಮತ ಎಣಿಕಾ ಟೇಬಲ್ ಹಾಗೂ ಸಿಬ್ಬಂದಿಗಳು : ಕೊಪ್ಪಳ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಮತ ಎಣೆಕಾ ಟೇಬಲ್ ಹಾಗೂ ಸಿಬ್ಬಂದಿಗಳ ವಿವರ ಇಂತಿದೆ. ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ ೧೪ ಟೇಬಲ್‌ಗಳು, ಹಾಗೂ ಮತ ಎಣಿಕಾ ಮೇಲ್ವಿಚಾರಕರು-೧೭, ಸಹಾಯಕರು-೧೭, ಮತ್ತು ಸ್ಟ್ಯಾಟಿಕ್ ಆಬ್ಸರ್‍ವರ್‍ಸ್-೧೭ ಸಿಬ್ಬಂದಿಗಳನ್ನು ನೇಮಿಸಲಾಗಿದ್ದು, ಜಿಲ್ಲೆಯಲ್ಲಿ ಒಟ್ಟು ೭೦ ಟೇಬಲ್‌ಗಳು, ಮತ ಎಣಿಕಾ ಮೇಲ್ವಿಚಾರಕರು-೮೫, ಸಹಾಯಕರು-೮೫, ಮತ್ತು ಸ್ಟ್ಯಾಟಿಕ್ ಆಬ್ಸರ್‍ವರ್‍ಸ್-೮೫ ಸಿಬ್ಬಂದಿಗಳನ್ನು ನಿಯೋಜಿಸಲಾಗುವುದು.
ಮಸ್ಟರಿಂಗ್ & ಡಿ-ಮಸ್ಟರಿಂಗ್ ಕೇಂದ್ರ : ಕೊಪ್ಪಳ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಮಸ್ಟರಿಂಗ್ ಮತ್ತು ಡಿ-ಮಸ್ಟರಿಂಗ್ ಕೆಂದ್ರಗಳ ವಿವರ ಇಂತಿದೆ. ಕುಷ್ಟಗಿ ವಿಧಾನಸಭಾ ಕ್ಷೇತ್ರಕ್ಕೆ ಕುಷ್ಟಗಿಯ ಪ್ರಥಮ ದರ್ಜೆ ಪದವಿ ಕಾಲೇಜು ಮಸ್ಟರಿಂಗ್ ಕೇಂದ್ರ ಹಾಗೂ ಪ್ರಥಮ ಡಿ-ಮಸ್ಟರಿಂಗ್ ಕೇಂದ್ರವಾಗಿದೆ. ಕನಕಗಿರಿ ವಿಧಾನಸಭಾ ಕ್ಷೇತ್ರಕ್ಕೆ ಗಂಗಾವತಿಯ ಎಮ್.ಎನ್.ಎಮ್ ಬಾಲಕಿಯರ ಪದವಿ ಪೂರ್ವ ಕಾಲೇಜು ಮಸ್ಟರಿಂಗ್ ಕೇಂದ್ರ ಹಾಗೂ ಪ್ರಥಮ ಡಿ-ಮಸ್ಟರಿಂಗ್ ಕೇಂದ್ರವಾಗಿದೆ. ಗಂಗಾವತಿ ವಿಧಾನಸಭಾ ಕ್ಷೇತ್ರಕ್ಕೆ ಗಂಗಾವತಿಯ ಲಯನ್ಸ್ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪದವಿ ಪೂರ್ವ ಕಾಲೇಜು ಮಸ್ಟರಿಂಗ್ ಕೇಂದ್ರ ಹಾಗೂ ಪ್ರಥಮ ಡಿ-ಮಸ್ಟರಿಂಗ್ ಕೇಂದ್ರವಾಗಿದೆ. ಯಲಬುರ್ಗಾ ವಿಧಾನಸಭಾ ಕ್ಷೇತ್ರಕ್ಕೆ ಯಲಬುರ್ಗಾದ ಪ್ರಥಮ ದರ್ಜೆ ಪದವಿ ಕಾಲೇಜು ಮಸ್ಟರಿಂಗ್ ಕೇಂದ್ರ ಹಾಗೂ ಪ್ರಥಮ ಡಿ-ಮಸ್ಟರಿಂಗ್ ಕೇಂದ್ರವಾಗಿದೆ. ಕೊಪ್ಪಳ ವಿಧಾನಸಭಾ ಕ್ಷೇತ್ರಕ್ಕೆ ಕೊಪ್ಪಳ ನಗರದ ಗವಿಸಿದ್ದೇಶ್ವರ ಪ್ರೌಢ ಶಾಲೆಯು ಮಸ್ಟರಿಂಗ್ ಕೇಂದ್ರ ಹಾಗೂ ಪ್ರಥಮ ಡಿ-ಮಸ್ಟರಿಂಗ್ ಕೇಂದ್ರವಾಗಿದೆ.
ಮತ ಎಣಿಕಾ ಕೇಂದ್ರ್ರ : ಗವಿಸಿದ್ದೇಶ್ವರ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲವು ಕೊಪ್ಪಳ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಮತ ಎಣಿಕಾ ಕೇಂದ್ರವಾಗಿದೆ. ಕುಷ್ಟಗಿ, ಕನಕಗಿರಿ ಮತ್ತು ಕೊಪ್ಪಳ ವಿಧಾನಸಭಾ ಕ್ಷೇತ್ರಗಳ ಮತ ಎಣಿಕಾ ಕೇಂದ್ರದ ಸ್ಟ್ರಾಂಗ್ ರೂಮ್ ಸಂಖ್ಯೆ-೦೨, ಗಂಗಾವತಿ ವಿಧಾನಸಭಾ ಕ್ಷೇತ್ರದ ಮತ ಎಣಿಕಾ ಕೇಂದ್ರದ ಸ್ಟ್ರಾಂಗ್ ರೂಮ್ ಸಂಖ್ಯೆ-೦೧, ಹಾಗೂ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಮತ ಎಣಿಕಾ ಕೇಂದ್ರದ ಸ್ಟ್ರಾಂಗ್ ರೂಮ್ ಸಂಖ್ಯೆ-೦೩ ಆಗಿದ್ದು, ನೆಲಮಹಡಿ ರೂಮ್ ನಂ.೬ ರಲ್ಲಿ ಮೀಡಿಯಾ ಸೆಂಟರ್, ನಂ.೧೧ ರಲ್ಲಿ ಪೊಲೀಸ್ ವೇಟಿಂಗ್ ರೋಮ್, ನಂ.೧೪ ರಲ್ಲಿ ಲೇಡಿಸ್ ವೇಟಿಂಗ್ ರೂಮ್, ನಂ. ೧೩ ರಲ್ಲಿ ಅಬ್ಸರ್‍ವರ್ ರೂಮ್ ಹಾಗೂ ಮೊದಲನೆ ಮಹಡಿ ರೂಮ್. ನಂ. ೨೫ ರಲ್ಲಿ ಡಿ.ಇ.ಓ ರೂಮ್ ಆಗಿ ನಿಗದಿಪಡಿಸಲಾಗಿದೆ.
ವಾಹನಗಳ ಸಂಖ್ಯೆ : ಕೊಪ್ಪಳ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ದಿನದಂದು ಚುನಾವಣಾ ಕರ್ತವ್ಯಕ್ಕಾಗಿ ಉಪಯೋಗಿಸಲಾಗುವ ವಾಹನಗಳ ಸಂಖ್ಯೆ ವಿವರ ಇಂತಿದೆ. ಕುಷ್ಟಗಿ ವಿಧಾನಸಭಾ ಕ್ಷೇತ್ರಕ್ಕೆ ಕೆ.ಎಸ್.ಆರ್.ಟಿ.ಸಿ ಬಸ್‌ಗಳು-೪೮, ಕ್ರೂಸರ್-೧೫, ಮಿನಿಬಸ್-೦೪, ಕನಕಗಿರಿ ವಿಧಾನಸಭಾ ಕ್ಷೇತ್ರಕ್ಕೆ ಕೆ.ಎಸ್.ಆರ್.ಟಿ.ಸಿ ಬಸ್‌ಗಳು-೩೨, ಕ್ರೂಸರ್-೨೯, ಜೀಪ್-೪೫, ಮ್ಯಾಕ್ಸಿಕ್ಯಾಬ್-೧೧, ಹಾಗೂ ಮಿನಿಬಸ್-೦೨, ಗಂಗಾವತಿ ವಿಧಾನಸಭಾ ಕ್ಷೇತ್ರಕ್ಕೆ ಕೆ.ಎಸ್.ಆರ್.ಟಿ.ಸಿ ಬಸ್‌ಗಳು-೧೭, ಕ್ರೂಸರ್-೫೦, ಜೀಪ್-೩೯, ಮ್ಯಾಕ್ಸಿಕ್ಯಾಬ್-೦೮, ಹಾಗೂ ಮಿನಿಬಸ್-೦೨, ಯಲಬುರ್ಗಾ ವಿಧಾನಸಭಾ ಕ್ಷೇತ್ರಕ್ಕೆ ಕೆ.ಎಸ್.ಆರ್.ಟಿ.ಸಿ ಬಸ್‌ಗಳು-೩೭, ಕ್ರೂಸರ್-೧೬, ಜೀಪ್-೩೬, ಮ್ಯಾಕ್ಸಿಕ್ಯಾಬ್-೧೧, ಹಾಗೂ ಮಿನಿಬಸ್-೦೨, ಕೊಪ್ಪಳ ವಿಧಾನಸಭಾ ಕ್ಷೇತ್ರಕ್ಕೆ ಕೆ.ಎಸ್.ಆರ್.ಟಿ.ಸಿ ಬಸ್‌ಗಳು-೩೬, ಕ್ರೂಸರ್-೩೫, ಜೀಪ್-೩೦, ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು ಕೆ.ಎಸ್.ಆರ್.ಟಿ.ಸಿ ಬಸ್‌ಗಳು-೧೭೦, ಕ್ರೂಸರ್-೧೪೫, ಜೀಪ್-೧೫೦, ಮ್ಯಾಕ್ಸಿಕ್ಯಾಬ್-೩೦, ಹಾಗೂ ಮಿನಿಬಸ್-೧೦, ಉಪಯೋಗಿಸಲಾಗುವುದು.
ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು : ಕೊಪ್ಪಳ ಜಿಲ್ಲೆಯಲ್ಲಿ ಇದುವರೆಗೆ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ವಿವರ ಇಂತಿದೆ. ಅಬಕಾರಿ ಇಲಾಖೆಯಿಂದ ೨೯೪.೧೧ ಲೀ. ( ಅಂದಾಜು ಮೌಲ್ಯ ರೂ. ೧,೨೫,೭೭೬) ಹಾಗೂ ಪೊಲೀಸ್ ಇಲಾಖೆಯಿಂದ ೧೬೩೧.೯೪ ಲೀ. (ಅಂದಾಜು ಮೌಲ್ಯ ರೂ. ೧,೯೮,೭೨೬) ಮದ್ಯ ವಶಪಡಿಸಿಕೊಂಡಿದ್ದಾರೆ. ೦.೩ ಕೆಜಿ ಗಾಂಜಾ, ೧೫ ಕೆಜಿ ಗಾಂಜಾ ಗ್ರೀನ್ ಪ್ಲ್ಯಾಂಟ್ಸ್, ೨೫.೫೦ ಕೆಜಿ ಗಾಂಜಾ ಗ್ರೀನ್ ಪ್ಲ್ಯಾಂಟ್ಸ್ (ಮೌಲ್ಯ ರೂ.೪೪,೦೦೦) ಹಾಗೂ ೧೫ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಫ್ಲೈಯಿಂಗ್ ಸ್ಕ್ವಾಡ್‌ಗಳು ೬,೦೦,೮೮೦/- ಲಕ್ಷವನ್ನು ವಶಪಡಿಸಿಕೊಂಡಿದ್ದಾರೆ. ೫ ಲಕ್ಷವನ್ನು ಪರಿಶೀಲನೆ ನಂತರ ಬಿಡುಗಡೆಗೊಳಿಸಿದ್ದಾರೆ. ಹಾಗೂ ೧,೦೦,೮೮೦ ರೂ. ಮೊತ್ತ ಖಜಾನೆಯಲ್ಲಿ ಠೇವಣಿ ಇರಿಸಿದ್ದಾರೆ. ಎಸ್.ಎಸ್.ಟಿ. ತಂಡದಿಂದ ೭,೬೮,೮೦೦/- ರೂ. ವಶಪಡಿಸಿಕೊಂಡಿದ್ದಾರೆ. ೨,೭೭,೦೦೦ ರೂ. ಪರಿಶೀಲನೆ ನಂತರ ಬಿಡುಗಡೆಗೊಳಿಸಿದ್ದಾರೆ. ಹಾಗೂ ೪,೯೧,೮೦೦ ರೂ. ಮೊತ್ತ ಖಜಾನೆಯಲ್ಲಿ ಠೇವಣಿ ಇರಿಸಿದ್ದಾರೆ.
ಚುನಾವಣಾ ಸಂಬಂಧಿತ ಸಾರ್ವಜನಿಕರಿಂದ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳನ್ನು ಸೇರಿ ಒಟ್ಟು ೪೦ ದೂರುಗಳ ದಾಖಲಾಗಿದ್ದು, ೪೦ ದೂರುಗಳನ್ನು ವಿಲೇವಾರಿಗೊಳಿಸಲಾಗಿದೆ. ಚುನಾವಣಾ ಪ್ರಚಾರದ ಅನುಮತಿಗಾಗಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳನ್ನು ಸೇರಿ ಒಟ್ಟು ೪೯೯ ಅರ್ಜಿಗಳು ಸ್ವೀಕೃತಿಯಾಗಿದ್ದು, ೪೮೬ ವಿಲೇವಾರಿಯಾಗಿ ೧೩ ಬಾಕಿ ಇವೆ.
ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಮೇ. ೧೨ ರಂದು ಜಿಲ್ಲೆಯಾದ್ಯಂತ ಬೆಳಿಗ್ಗೆ ೦೭ ಗಂಟೆಯಿಂದ ಸಂಜೆ ೦೬ ಗಂಟೆಯವರೆಗೆ ಮತದಾನ ನಡೆಯಲಿದ್ದು, ಎಲ್ಲ ಮತದಾರರು ತಪ್ಪದೆ ಸಂವಿಧಾನಾತ್ಮಕ ಹಕ್ಕನ್ನು ಚಲಾಯಿಸುವ ಮೂಲಕ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗಿಯಾಗುವಂತೆ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಮನವಿ ಮಾಡಿದ್ದಾರೆ.

Please follow and like us:
error