ಕೊಪ್ಪಳ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಜೆಡಿಎಸ್ ಬೆಂಬಲಿಸಿ : ಕೆ.ಎಂ.ಸಯ್ಯದ್


ಕೊಪ್ಪಳ: ಕೊಪ್ಪಳ ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಈ ಬಾರಿ ಜೆಡಿಎಸ್ ಪಕ್ಷವನ್ನು ಬೆಂಬಲಿಸಿ ಎಂದು ಕೊಪ್ಪಳ ವಿಧಾನಸಭಾ ಕ್ಷೇತ್ರದ ನಿಯೋಜಿತ ಅಭ್ಯರ್ಥಿ ಕೆ.ಎಂ.ಸಯ್ಯದ್ ಹೇಳಿದರು.
ಅವರು ನಗರದ ೭ನೇ ವಾರ್ಡ್‌ನ ಪಕ್ಷದ ಕಾರ್ಯಕರ್ತರನ್ನು ಭೇಟಿಮಾಡಿ ನಂತರ ಮಾತನಾಡಿ ಕೊಪ್ಪಳ ಕ್ಷೇತ್ರದಲ್ಲಿ ಈ ಬಾರಿ ಜೆಡಿಎಸ್ ಪಕ್ಷಕ್ಕೆ ಒಂದು ಅವಕಾಶ ನೀಡಿ ನಂತರ ಕ್ಷೇತ್ರದ ಅಭಿವೃದ್ಧಿ ನೋಡಿ. ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ದುರಾಡಳಿತದಿಂದ ಅಭಿವೃದ್ಧಿ ಕುಂಟಿತವಾಗಿದ್ದು ಹೀಗಾಗಿ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ಬರುವುದಕ್ಕಾಗಿ ಜೆಡಿಎಸ್ ಪಕ್ಷವನ್ನು ಬೆಂಬಲಿಸಿ ಹೆಚ್.ಡಿ.ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿಯನ್ನಾಗಿ ಮಾಡೊಣ ಎಂದರು.
ಈ ಸಂದರ್ಭದಲ್ಲಿ ವೇದಿಕೆಮೇಲೆ ಜೆಡಿಎಸ್. ತಾಲ್ಲುಕ ಅಧ್ಯಕ್ಷ ಶಿವು ಮೋರನಾಳ, ಮುಖಂಡರಾದ ಖಾಜಾವಲಿ ಬನ್ನಿಕೊಪ್ಪ, ಮೆಹಬೂಬಸಾಬ ನಾಲಬಂದ, ಜಾಫರಸಾಬ ಸಂಗಟಿ, ಸಂಗಪ್ಪ ಬಾಣಕರ, ಮಕಬೂಲಸಾಬ, ವಹಾಬಸಾಬ ಅತ್ತಾರ, ಮುಸ್ತಫಾ ಮುಜಾವರ, ಜಿಲಾನಸಾಬ ನಿಶಾನಿ, ಮೈನುಸಾಬ ಗಿರಣಿ, ಅಜಿಜಸಾಬ ಮನಿಯಾರ, ವಜೀರ ಅಹ್ಮದ ನಿಶಾನಿ, ಖಾಜಾವಲಿ ಕುರಿ, ಅಜ್ಜು ನಿಶಾನಿ, ಖಾಜಾವಲಿ ಮುಂಡರಗಿ, ಕೆ.ಎಂ. ಸಯ್ಯದ್‌ರವರು ಆಪ್ತಕಾರ್ಯದರ್ಶಿಯಾದ ವಸೀಮ ಹುಲಗೇರಿ ಉಪಸ್ಥಿತರಿದ್ದರು.