ಕಾಂಗ್ರೆಸ್ ಗೆಲುವು ಖಚಿತ – ಶಾಸಕ ಕೆ. ರಾಘವೇಂದ್ರ ಹಿಟ್ನಾಳ


ಕೊಪ್ಪಳ : ೧೫ ಗೊಂಡಬಾಳ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಹಾಲವರ್ತಿ, ಕುಣಿಕೇರಿ ತಾಂಡಾ, ಕುಣಿಕೇರಿ, ಬಗನಾಳ, ಚಿಕ್ಕಬಗನಾಳ, ಕರ್ಕಿಹಳ್ಳಿ, ಅಲ್ಲಾನಗರ ಗ್ರಾಮಗಳಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಮತ ಯಾಚನೆ ಮಾಡಿ ಬಳಿಕ ಮಾತನಾಡಿದ ಕಾಂಗ್ರೆಸ್ ಅಭ್ಯರ್ಥಿ ಕೆ. ರಾಘವೇಂದ್ರ ಹಿಟ್ನಾಳ ಕೊಪ್ಪಳ ಕ್ಷೇತ್ರಕ್ಕೆ ಈ ಐದು ವರ್ಷದಲ್ಲಿ ರೂ. ೨೨೩೦ ಕೋಟಿ ಅನುದಾನ ಬೀಡುಗಡೆಯಾಗಿದ್ದು ಕೊಪ್ಪಳ ಕ್ಷೇತ್ರದ ಮೂವತ್ತು ವರ್ಷದ ಇತಿಹಾಸದಲ್ಲಿ ಇಷ್ಟೊಂದು ಅನುದಾನ ಬಿಡುಗಡೆಯಾಗಿದ್ದು ಅಭಿವೃದ್ಧಿಯ ಮೈಲುಗಲ್ಲಾಗಿದೆ. ಶಿಕ್ಷಣಕ್ಷೇತ್ರ, ನೀರಾವರಿ, ಕೃಷಿ ಕ್ಷೇತ್ರ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಈ ಅನುದಾನದಿಂದ ಸಾಕಷ್ಟು ಸಹಕಾರಿಯಾಗಿದೆ ಚೆಕ್‌ಡ್ಯಾಮ್, ಬ್ರಿಜ್‌ಕಮ್ ಬ್ಯಾರೇಜ್, ಪಿಜಿಸೆಂಟರ್, ಐಟಿಐ ಕಾಲೇಜ, ಡಿಪ್ಲೋಮಾ ಕಾಲೇಜು, ವೈಧ್ಯಕೀಯ ಕಾಲೇಜು ಹಾಗೂ ಹೆಚ್ಚುವರಿ ಪ್ರೌಢಶಾಲೆಗಳು ಮತ್ತು ಪಿಯು ಕಾಲೇಜಗಳು ನಿರ್ಮಾಣವಾಗಿವೆ. ಶೀಘ್ರದಲ್ಲಿಯೇ ನಗರದಲ್ಲಿ ಕಾಂಗ್ರೆಸ್ ಸರ್ಕಾರದ ಅತ್ಯಂತ ಮಹತ್ತರ ಯೋಜನೆಯಾದ ಇಂದಿರಾ ಕ್ಯಾಂಟಿನ್ ಪ್ರಾರಂಭಗೊಳ್ಳಲಿದ್ದು ಬಡ ಹಾಗೂ ಮಧ್ಯಮವರ್ಗದವರಿಗೆ ಹೆಚ್ಚು ಅನುಕೂಲವಾಗಲಿದೆ ನುಡಿದಂತೆ ನಡೆದಿರುವ ಕಾಂಗ್ರೆಸ್ ಸರ್ಕಾರವು ನಮ್ಮ ಭಾಗವು ೩೭೧ಜೇ ಕಲಂ ಒಳಪಡುವುದರಿಂದ ಹೆಚ್‌ಕೆಅರ್‌ಡಿಬಿ ಯೋಜನೆ ಅಡಿಯಿಂದ ಕ್ಷೇತ್ರದ ಸರ್ವಾಂಗಿಣ ಅಭಿವೃದ್ಧಿಗೆ ಸಹಕಾರಿಯಾಗಿದೆ ಕ್ಷೇತ್ರದಲ್ಲಿ ಪಕ್ಷಾತಿತವಾಗಿ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದ್ದು ಕೊಪ್ಪಳ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಶ್ಚಿತವಾಗಿ ಗೆಲವು ಸಾಧಿಸುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿ.ಪಂ ಅಧ್ಯಕ್ಷ ಕೆ. ರಾಜಶೇಖರ ಹಿಟ್ನಾಳ, ಜಿ,ಪಂ ಸದಸ್ಯ ಗೂಳಪ್ಪ ಹಲಗೇರಿ, ತಾ.ಪಂ ಅಧ್ಯಕ್ಷ ಬಾಲಚಂದ್ರನ್, ಬ್ಲಾಕ ಕಾಂಗ್ರೆಸ್ ಅಧ್ಯಕ್ಷ ಸುರೇಶ ಭೂಮರಡ್ಡಿ, ಎಪಿಎಂಸಿ ಅಧ್ಯಕ್ಷ ವೆಂಕನಗೌಡ ಹಿರೇಗೌಡ್ರು, ತಾ.ಪಂ ಸದಸ್ಯರಾದ ರಾಜು ರೆಡ್ಡಿ, ದ್ಯಾಮಣ್ಣ, ನಿಂಗಪ್ಪ ಯತ್ನಟ್ಟಿ, ಗ್ರಾ.ಪಂ ಅಧ್ಯಕ್ಷ ಬಸಣ್ಣ ಬಂಗಾಳಿ, ಮುಖಂಡರುಗಳಾದ ಮಹಿಳಾ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಕಿಶೋರಿ ಭೂದನೂರ, ವಿರುಪಣ್ಣ ನವೋದಯ, ಯಂಕನಗೌಡ್ರು ಹೊರತಟ್ನಾಳ, ಭರಮಪ್ಪ ನಗರ, ಕೃಷ್ಣರೆಡ್ಡಿ ಗಲಬಿ, ಜಡಿಯಪ್ಪ ಬಂಗಾಳಿ, ಹೇಮಣ್ಣ ದೇವರಮನಿ, ಕೇಶವರಡ್ಡಿ, ಅಂಬರೇಶ ಉಪಲಾಪೂರ, ಕೌಶಲ ಛೋಪ್ರಾ, ಮಹಾವೀರ ಜೈನ್, ಹನುಂತಪ್ಪ ಕಿಡದಾಳ, ಶಿವಕುಮಾರ ಚಳ್ಳಾರಿ, ಎಸ್. ಮೆಹಬೂಬ, ಇಸ್ಮಾಯಿಲ್, ಮಂಜುನಾಥ ಹಿರೇಮಠ, ಮುದಿಯಪ್ಪ ಆದೋನಿ, ಆನಂದ ಹಾಲವರ್ತಿ, ಈರಪ್ಪಣ್ಣ ಕುಣಿಕೇರಿ, ಕಾಳಪ್ಪ, ಉಮಾ ಜನಾದ್ರಿ ಹಾಗೂ ವಕ್ತಾರ ಅಕ್ಬರ ಪಾಷಾ ಪಲ್ಟನ್ ಉಪಸ್ಥಿತರಿದ್ದರು.

Please follow and like us:
error