ಕರಡಿ ಕುಟುಂಬಕ್ಕೆ ಕೊಪ್ಪಳ ಟಿಕೇಟ್ : ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹಾಕಿದ ಸಂಸದ

ಕೊಪ್ಪಳ ವಿಧಾನಸಭಾ ಕ್ಷೇತ್ರದ  ಬಿಜೆಪಿ ಟಿಕೆಟ್ ಬಗ್ಗೆ ಜನಸಾಮಾನ್ಯರಲ್ಲಿ ಬಹಳಷ್ಟು ಕುತೂಹಲ ಇದೆ. ಕೊಪ್ಪಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸಂಗಣ್ಣ ಕರಡಿ ಅಥವಾ ಅಮರೇಶ ಕರಡಿ ಹೆಸರು ಅಂತಿಮವಾಗಿದೆ ಎಂದು ತಮ್ಮ ಸಾಮಾಜಿಕ ತಾಣದಲ್ಲಿ ಸಂಸದ ಕರಡಿ ಸಂಗಣ್ಣ ಸುದ್ದಿ ಹಾಕಿದ್ದಾರೆ. ಸಂಸದ ಕರಡಿ ಸಂಗಣ್ಣ ಇಂದು ಬೆಂಗಳೂರಿನಲ್ಲಿ ನಡೆದ ಮೀಟಿಂಗ್ ನ ವಿವರಣೆ ಹಾಕಿದ್ಧಾರೆ. 

ಕೊಪ್ಪಳ ವಿಧಾನಸಭಾ ಕ್ಷೇತ್ರದ  ಬಿಜೆಪಿ ಟಿಕೆಟ್ ಬಗ್ಗೆ ಜನಸಾಮಾನ್ಯರಲ್ಲಿ ಬಹಳಷ್ಟು ಕುತೂಹಲ ಇದೆ.  ಎಲ್ಲ ಪಕ್ಷಗಳ ಅಭ್ಯರ್ಥಿಗಳ ಹೆಸರು ಫೈನಲ್ ಆಗುವ ಹಂತ ತಲುಪಿದ್ದರೂ ಸಹ ಕೊಪ್ಪಳ ಬಿಜೆಪಿಯ ಟಿಕೆಟ್ ಯಾರಿಗೆ ಎನ್ನುವುದರ ಬಗ್ಗೆ ಇನ್ನೂ ಸ್ಪಷ್ಟವಾದ ನಿರ್ಧಾರವಾಗಿಲ್ಲ.  ಇದು ಜನಸಾಮಾನ್ಯರಲ್ಲಿ ಕುತೂಹಲ ಮೂಡಿಸಿದರೆ ಕಾರ್ಯಕರ್ತರಲ್ಲಿ ಆತಂಕ ಮೂಡಿಸಿದೆ. ಚುನಾವಣೆಗೆ ಕೇವಲ 40 ದಿನಗಳು ಉಳಿದರೂ ಸಹ  ಇನ್ನೂ ಅಭ್ಯರ್ಥಿಯ ಕುರಿತು ಸ್ಪಷ್ಟ ನಿರ್ಧಾರವಾಗುತ್ತಿಲ್ಲ. ಅಲ್ಲದೇ ಕೊಪ್ಪಳ ಬಿಜೆಪಿಯಲ್ಲಿ ಬಣ ರಾಜಕೀಯ ಶುರುವಾಗಿರುವುದೂ ಸಹ ಕಾರ್ಯಕರ್ತರಲ್ಲಿ ಮತ್ತು ಮುಖಂಡರಲ್ಲಿ ಬಹಳಷ್ಟು ನಿರಾಸೆ ಮತ್ತು ಆತಂಕ ಸೃಷ್ಟಿಸಿದೆ.  ಕರಡಿ ಸಂಗಣ್ಣ  ಹಾಗೂ ಸಿ.ವಿ,.ಚಂದ್ರಶೇಖರ್ ಮತ್ತು ಇವರಿಬ್ಬರನ್ನೂ ಹೊರತು ಪಡಿಸಿದ ಮತ್ತೊಂದು ಬಣ ಹೀಗೆ ಬಿಜೆಪಿಯಲ್ಲಿ ಉಂಟಾಗಿರುವ ಬಣ ರಾಜಕೀಯ ಪಕ್ಷಕ್ಕೆ ಹಾನಿಕಾರಕ ಎನ್ನುವುದು ನಿಷ್ಠಾವಂತ ಕಾರ್ಯಕರ್ತರ ನೋವಾಗಿದೆ.  ಅಲ್ಲದೇ ಯಾವ ಬಣದಲ್ಲಿ ಗುರುತಿಸಿಕೊಳ್ಳಬೇಕು ? ಯಾರ ಜೊತೆ ಹೋಗಬೇಕು ಎನ್ನುವ ಗೊಂದಲದಲ್ಲಿ ಕಾರ್ಯಕರ್ತರಿದ್ದಾರೆ. ಅವರತ್ತ ಹೋದರೆ ಇವರಿಗೆ ಸಿಟ್ಟು ಎನ್ನುವಂತಾಗಿರುವುದರಿಂದ ಯಾರ ತಂಟೆಯೂ ಬೇಡ  ಎಂದು ಬಹಳಷ್ಟು ಕಾರ್ಯಕರ್ತರು ಮುಖಂಡರು ನಿರಾಸೆಯಿಂದ ಸುಮ್ಮನಾಗಿದ್ದಾರೆ. ಆದರೆ ಇವತ್ತಿನ ಬೆಳವಣಿಗೆಯಲ್ಲಿ  ಕೊಪ್ಪಳ , ಬಳ್ಳಾರಿ ಜಿಲ್ಲೆಗಳ ಅಭ್ಯರ್ಥಿಗಳ ಹೆಸರನ್ನು ನಿರ್ದರಿಸಲಾಗಿದೆ ಎಂದೇ ಹೇಳಲಾಗಿದೆ. ಅದರ ಮಾಹಿತಿಯನ್ನು ಸಂಸದ ಕರಡಿ ಸಂಗಣ್ಣ ತಮ್ಮ ಫೇಸ್ ಬುಕ್ ಪುಟದಲ್ಲಿ ಹಂಚಿಕೊಂಡಿದ್ದಾರೆ.

ಕೊಪ್ಪಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಅನ್ನು ಸಂಗಣ್ಣ ಕರಡಿ ಅವರಿಗೇ ನೀಡಬೇಕೆಂದು ಬೆಂಗಳೂರಿನಲ್ಲಿ ಇಂದು (ಬುಧವಾರ 4-4-2018) ಸೇರಿದ ಬಿಜೆಪಿ ಕೋರ್ ಕಮಿಟಿ ಸಭೆ ನಿರ್ಧರಿಸಿದೆ.

ಇಪ್ಪತ್ತೈದು ಜನರಿದ್ದ ಕೋರ್ ಕಮೀಟಿಯ ಪೈಕಿ ಸಂಗಣ್ಣ ಕರಡಿ ಅಭ್ಯರ್ಥಿಯಾಗಬೇಕೆಂದು 25 ಜನರೂ ಸಮ್ಮತಿ ಸೂಚಿಸಿದರು. ಎರಡನೇ ಆಯ್ಕೆಯಾಗಿ ಅವರ ಪುತ್ರ ಅಮರೇಶ ಕರಡಿ ಅವರು ಅಭ್ಯರ್ಥಿಯಾಗಲೆಂದು 25 ಜನರ ಪೈಕಿ 23 ಜನ ಸಮ್ಮತಿ ವ್ಯಕ್ತಪಡಿಸಿದರು. ಮೂರನೇ ಆಯ್ಕೆಯಾಗಿ ಸಿ.ವಿ. ಚಂದ್ರಶೇಖರ ಪರ ಬಂದಿದ್ದು ಕೇವಲ 3 ಮತಗಳು ಮಾತ್ರ. ಬಿ. ಗಿರೀಶಾನಂದ, ಶಿವು ಹಕ್ಕಾಪಕ್ಕಿ ಮತ್ತು ಕೊಟ್ರೇಶ ಶೇಡ್ಮಿ ಮಾತ್ರ ಸಿ.ವಿ.ಸಿ. ಉಮೇದುವಾರಿಕೆ ಬೆಂಬಲಿಸಿದರು. ಅಂತೂ ಕರಡಿ ಕುಟುಂಬದ ಪ್ರಯತ್ನಕ್ಕೆ ಕೋರ್ ಕಮಿಟಿ ಬೆಂಬಲಿಸಿದಂತಾಗಿದೆ. ಆ ಮೂಲಕ ಕೊಪ್ಪಳ ಕ್ಷೇತ್ರದ ಅಭ್ಯರ್ಥಿ ಯಾರಾಗಬೇಕೆಂಬುದು ನಿರ್ಧಾರವಾಗಿದೆ. ಏಪ್ರಿಲ್ 10ರೊಳಗೆ ಅಭ್ಯರ್ಥಿಯ ಹೆಸರು ಅಧಿಕೃತವಾಗಿ ಘೋಷಣೆಯಾಗಲಿದೆ ಎಂದು ಬರೆದಿದ್ದಾರೆ.

ಕರಡಿ ಸಂಗಣ್ಣನವರು ಸ್ಪಷ್ಟವಾಗಿ  ಟಿಕೇಟ್ ತಮ್ಮ ಕುಟುಂಬಕ್ಕೆ ಸಿಗುತ್ತೆ ಎಂದು ಬರೆದುಕೊಂಡಿದ್ದರೂ ಸಹ   ಸಿ.ವಿ.ಚಂದ್ರಶೇಖರ  ಈಗಲೂ ಸಹ ಟಿಕೇಟ್ ತಮಗೆ ಸಿಗುತ್ತೆ ಎನ್ನುವ ವಿಶ್ವಾಸವನ್ನು ವ್ಯಕ್ತಪಡಿಸುತ್ತಿದ್ಧಾರೆ.  ಅಮೀತ್ ಶಾ 8 ಅಥವಾ 9 ರಂದು ಅಧಿಕೃತವಾಗಿ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಲಿದ್ದಾರೆ ಅಲ್ಲಿಯವರೆಗೆ ಈ ಗೊಂದಲ ಮುಂದುವರೆಯಲಿದೆ.

Please follow and like us:
error