ಕಮಲ ಅರಳೋದು ಶತಸಿದ್ಧ: ಅಮರೇಶ್ ಕರಡಿ

Koppal Election News

ನಗರಸಭೆ ಚುನಾವಣೆ ಮತಪ್ರಚಾರ | ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಲು ಮನವಿ

ಕೊಪ್ಪಳ: 
ನಗರದ ೩೧ ವಾರ್ಡ್‌ಗಳಲ್ಲಿ ಬಿಜೆಪಿಯಿಂದ ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಈ ಬಾರಿ ನಗರಸಭೆ ಆಡಳಿತ ಬಿಜೆಪಿಗೆ ಸಿಗಲಿದೆ. ಆ ಮೂಲಕ ನಗರಸಭೆಯಲ್ಲಿ ಕಮಲ ಅರಳುವುದು ಶತಸಿದ್ಧ ಎಂದು ಕೊಪ್ಪಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ಅಮರೇಶ್ ಕರಡಿ ಭವಿಷ್ಯ ನುಡಿದರು.
ನಗರಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಂಗಳವಾರ ಸಂಜೆ ನಗರದ ವಿವಿಧ ವಾರ್ಡ್‌ಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮತಪ್ರಚಾರ ನಡೆಸಿದ ಆನಂತರ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಗರದ ಅಭಿವೃದ್ಧಿಗಾಗಿ ಕೊಪ್ಪಳದ ಜನತೆ ಈ ಬಾರಿ ಬಿಜೆಪಿಯನ್ನು ಬೆಂಬಲಿಸಲಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದರೆ ನಗರದ ಸರ್ವತೋಮುಖ ಅಭಿವೃದ್ಧಿ ಸಾಧ್ಯವಾಗಲಿದೆ. ಇದುವರೆಗೂ ಅಧಿಕಾರ ನಡೆಸಿದ ಕಾಂಗ್ರೆಸ್‌ನವರಿಂದ ನಗರದ ಅಭಿವೃದ್ಧಿಯಾಗದೇ ಕಾಂಗ್ರೆಸ್‌ನವರು ಅಭಿವೃದ್ಧಿಯಾಗಿದ್ದಾರೆ. ಇಂತವರನ್ನು ಮತ್ತೊಮ್ಮೆ ಅಧಿಕಾರ ನಡೆಸಲು ಬಿಟ್ಟರೆ ಅಭಿವೃದ್ಧಿ ಕನಸಾಗಿಯೇ ಉಳಿಯಲಿದೆ. ಈ ಹಿನ್ನೆಲೆಯಲ್ಲಿ ನಗರಸಭೆಯಲ್ಲಿ ಈ ಬಾರಿ ಬಿಜೆಪಿಗೆ ಮತ ಹಾಕುವ ಮೂಲಕ ಉತ್ತಮ ಆಡಳಿತಕ್ಕೆ ಜನತೆ ಸಾಥ್ ನೀಡಬೇಕು ಎಂದು ಮನವಿ ಮಾಡಿದರು.
ನಮ್ಮ ಪಕ್ಷದ ಹಿರಿಯರೆಲ್ಲ ಸೇರಿ ಚರ್ಚಿಸಿ ಉತ್ತಮ, ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ. ಯುವಕರು, ಉತ್ಸಾಹಿಗಳು, ಅಭಿವೃದ್ಧಿ ಪರ ಚಿಂತನೆ ಇರುವವರೆ ಅಭ್ಯರ್ಥಿಗಳು ಇದ್ದಾರೆ. ನಗರದ ಜನತೆ ಅವರೆಲ್ಲರಿಗೂ ಆಶೀರ್ವಾದ ಮಾಡುವ ಮೂಲಕ ಕೊಪ್ಪಳವನ್ನು ಮಾದರಿ ನಗರದವನ್ನಾಗಿ ರೂಪಿಸಲು ಕೈಜೋಡಿಸಬೇಕು. ರಾಜ್ಯದಲ್ಲಿ ಶಿರ್ಘದಲ್ಲೆ ಸಮ್ಮಿಶ್ರ ಸರಕಾರ ಪತನವಾಗಲಿದ್ದು, ಮತ್ತೊಮ್ಮೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಲಿದ್ದಾರೆ. ಕೊಪ್ಪಳ ನಗರಸಭೆಯಲ್ಲೂ ಬಿಜೆಪಿ ಆಡಳಿತಕ್ಕೆ ಬಂದರೆ ನಗರದ ಅಭಿವೃದ್ಧಿಗೆ ಸಹಕಾರವಾಗಲಿದೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಬಿಜೆಪಿ ಪಕ್ಷಕ್ಕೆ ಪ್ರತಿಯೊಬ್ಬರೂ ಮತ ನೀಡುವ ಮೂಲಕ ಅಭಿವೃದ್ಧಿಯಲ್ಲೂ ತಾವುಸಹ ಕೈಜೋಡಿಸುವಂತೆ ಮನವಿ ಮಾಡಿದರು.
ಹಿರಿಯ ಮುಖಂಡರಾದ ಅಂದಣ್ಣ ಅಗಡಿ, ಸಿ.ವಿ. ಚಂದ್ರಶೇಖರ್, ಅಪ್ಪಣ್ಣ ಪದಕಿ ಮಾತನಾಡಿ ಬಿಜೆಪಿ ಅಭ್ಯರ್ಥಿಗಳಿಗೆ ಮತ ಹಾಕಿ ಗೆಲ್ಲಿಸುವಂತೆ ಕೋರಿದರು.
ಕಾರ್ಯಕ್ರಮದಲ್ಲಿ ಅಪ್ಪಣ್ಣ ಪದಕಿ, ಸಿ.ವಿ. ಚಂದ್ರಶೇಖರ್, ಅಂದಣ್ಣ ಅಗಡಿ, ಬಸವರಾಜ ಭೋವಿ ಸೇರಿದಂತೆ ಪ್ರಮುಖ ನಾಯಕರು, ಪದಾಧಿಕಾರಿಗಳು, ಮುಸ್ಲಿಂ ಸಮಾಜದ ಮುಖಂಡರು, ನೂರಾರು ಕಾರ್ಯಕರ್ತರು ಪಾಳ್ಗೊಂಡಿದ್ದರು.

Please follow and like us: