ಈಶಾನ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರ ಅಮರೇಶ ಕರಡಿ ಪ್ರಚಾರ

ಕೊಪ್ಪಳ: ಹೈದ್ರಬಾದ್ ಕರ್ನಾಟಕ ಪ್ರದೇಶದಲ್ಲಿ ವರ್ಷದಿಂದ ವರ್ಷಕ್ಕೆ ನಿರುದ್ಯೋಗದ ಸಮಸ್ಯೆ ಹೆಚ್ಚಳವಾಗುತ್ತಲಿದೆ. ಕಳೆದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಈ ಭಾಗದ ನಿರುದ್ಯೋಗ ಯುವಕರಿಗೆ ಉದ್ಯೋಗ ನೀಡುವಲ್ಲಿ ವಿಫಲವಾಗಿದೆ. ಹೈ-ಕ ಪ್ರದೇಶದಲ್ಲಿ ಉಪನ್ಯಾಸಕರಿಗೆ ಸರಿಯಾದ ಸೌಲಭ್ಯವಿಲ್ಲದೇ ನರಕಯಾತನೆ ಅನುಭವಿಸುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಅಮರೇಶ ಕರಡಿ ಶಿಕ್ಷಕರಲ್ಲಿ ಮನವಿ ಮಾಡಿದರು.
ಅವರು ತಾಲೂಕಿನ ಹೀರೆಸಿಂದೋಗಿ ವ್ಯಾಪ್ತಿಯ ವಿವಿಧ ಹಳ್ಳಿಗಳ ಶಾಲೆಗಳಿಗೆ ತೆರಳಿ ಈಶಾನ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ. ಬಿ. ಶ್ರೀನಿವಾಸ ರಡ್ಡಿ ಪರ ಮತಯಾಚಿಸಿ ಮಾತನಾಡಿದ ಅವರು, ಹೈ-ಕ ಭಾಗದಲ್ಲಿ ಶಿಕ್ಷಕರ ಸಮಸ್ಯೆ, ನಿರುದ್ಯೋಗ, ಶೈಕ್ಷಣಿಕ ಸೌಲಭ್ಯ, ಉನ್ನತ ಶಿಕ್ಷಣ ಸೇರಿದಂತೆ ಪ್ರತಿ ವರ್ಷ ಲಕ್ಷಾಂತರ ಯುವಕರು ಉದ್ಯೋಗವಿಲ್ಲದೆ ಸಂಕಟ ಎದುರಿಸುತ್ತಿದ್ದಾರೆ. ಈ ಪ್ರದೇಶದ ಪದವೀಧರ ಎಲ್ಲಾ ಸಮಸ್ಯೆಗಳಿಗೆ ಈಡೇರಿಕೆಗಾಗಿ ಜೂ. ೮ರಂದು ನಡೆಯುವ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಮತ ನೀಡಿ ಹೆಚ್ಚಿನ ಮತಗಳಿಂದ ಗೆಲ್ಲಿಸಬೇಕು ಎಂದು ವಿವಿಧ ಶಾಲೆಯ ಶಿಕ್ಷಕರ ಹತ್ತಿರ ಮನವಿ ಮಾಡಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶದಲ್ಲಿ ಅನೇಕ ಅಭೀವೃದ್ಧಿ ಯೋಗನೆ ಜಾರಿಗೂಳಿಸುವ ಮೂಲಕ ದೇಶವನ್ನು ಅಭಿವೃದ್ಧಿಪಥದಂತ ಮುನ್ನೇಡೆಸುತ್ತಿದ್ದಾರೆ. ಹೈ-ಕ ಭಾಗಕ್ಕೆ ಪ್ರಧಾನಿ ಮೋದಿ ಅನೇಕ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಿದ್ದಾರೆ. ಬರುವ ದಿನಗಳಲ್ಲಿ ಈ ಭಾಗದ ನಿರುದ್ಯೋಗ ಯುವಕರಿಗೆ ಹಾಗೂ ಶಿಕ್ಷಕರಿಗೆ, ಪದವೀಧರ ಉಪನ್ಯಾಸಕರಿಗೆ ಸಕಲ ರೀತಿಯಲ್ಲಿ ಪರಿಹಾರ ಒದಗಿಸಲಾಗುವುದು. ಜೂ. ೮ ರಂದು ನಡೆಯುವ ಚುನಾವಣೆಯಲ್ಲಿ ಯಾವುದೇ ಆಮಿಷಕ್ಕೆ ಒಳಾಗಾಗದೇ ಮುಕ್ತ ಮತ್ತು ನ್ಯಾಯಾ ಸಮ್ಮತವಾಗಿ ಬಿಜೆಪಿ ಅಭ್ಯರ್ಥಿಗೆ ಮತ ನೀಡುವಂತೆ ಕೋರಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಈಶಪ್ಪ ಮಾದಿನೂರ, ಬಿಜೆಪಿ ಗ್ರಾಮೀಣ ಘಟಕಾಧ್ಯಕ್ಷ ತೋಟಪ್ಪ ಕಾಮನೂರ, ಎಪಿಎಂಸಿ ಸದಸ್ಯ ಬಸವರಾಜ ಈಶ್ವರಗೌಡ್ರ, ಮುಖಂಡರಾದ ಬಸವಣ್ಣ ವಾಡಿ, ಸುರೇಶ ದಾಸರಡ್ಡಿ ಸೇರಿದಂತೆ ಇತರರಿದ್ದರು.