ಇ.ವಿ.ಎಮ್ ಮತ್ತು ವಿ.ವಿ ಪ್ಯಾಟ್ ಕುರಿತು ಜಾಗೃತಿ : ಏ. ೦೩ ರಿಂದ ಪ್ರಾತ್ಯಕ್ಷಿತೆ ಕಾರ್ಯಕ್ರಮ

: ಕರ್ನಾಟಕ ವಿಧಾನಸಭಾ ಚುನಾವಣೆಯ ಅಂಗವಾಗಿ ಚುನಾವಣೆ ಮತಯಂತ್ರ ಹಾಗೂ ಮತದಾನ ಖಾತ್ರಿ ಯಂತ್ರ (ಇ.ವಿ.ಎಮ್ ಮತ್ತು ವಿ.ವಿ ಪ್ಯಾಟ್) ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಸ್ವೀಪ್ ಕಾರ್ಯಕ್ರಮದಡಿ ಕೊಪ್ಪಳ ಜಿಲ್ಲಾ ಪಂಚಾಯತ ಏ. ೦೩ ರಿಂದ ಪ್ರಾತ್ಯಕ್ಷಿತೆ ಕಾರ್ಯಕ್ರಮವನ್ನು ಆಯೋಜಿಸಿದೆ ಎಂದು ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಟರಾಜಾ ಅವರು ತಿಳಿಸಿದ್ದಾರೆ.
ಚುನಾವಣೆ ಕುರಿತು ಮತದಾರರಲ್ಲಿ ವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ಇ.ವಿ.ಎಮ್. ಮತ್ತು ವಿ.ವಿ ಪ್ಯಾಟ್ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಂಬಂಧ ಏ. ೦೩ ರಿಂದ ೦೭ ರವರೆಗೆ ಕೊಪ್ಪಳ ಜಿಲ್ಲೆಯಲ್ಲಿ ಇ.ವಿ.ಎಮ್. ಮತ್ತು ವಿ.ವಿ ಪ್ಯಾಟ್ ಪ್ರಾತ್ಯಕ್ಷಿತೆ ಮೂಲಕ ಜನ ಜಾಗೃತಿ ಮೂಡಿಸಲು, ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ಯಶಸ್ವಿಗೊಳಿಸಬೇಕು ಹಾಗೂ ತಪ್ಪದೆ ಎಲ್ಲ ಮತದಾರರು ನೈತಿಕ ಮತದಾನ ಮಾಡಬೇಕು. ಕಾರ್ಯಕ್ರಮದ ಯಶಸ್ವಿ ಆಯೋಜನೆಗಾಗಿ ಈಗಾಗಲೆ ಆಯಾ ಕ್ಷೇತ್ರದಲ್ಲಿ ನೋಡಲ್ ಅಧಿಕಾರಿಗಳನ್ನು ಕೂಡ ನೇಮಿಸಲಾಗಿದೆ.
ಎಲ್ಲೆಲ್ಲಿ ಕಾರ್ಯಕ್ರಮ: ಇ.ವಿ.ಎಮ್ ಮತ್ತು ವಿ.ವಿ ಪ್ಯಾಟ್ ಕುರಿತು ಜಾಗೃತಿ ಮೂಡಿಸಲು ಏ. ೦೩ ರಿಂದ ೦೭ ರವರೆಗೆ ಕೊಪ್ಪಳ ಜಿಲ್ಲೆಯಲ್ಲಿ ಪ್ರಾತ್ಯಕ್ಷಿತೆ ಕಾರ್ಯಕ್ರಮ ಜರುಗಲಿದ್ದು, ಕಾರ್ಯಕ್ರಮದ ವಿವರ ಇಂತಿದೆ. ಕೊಪ್ಪಳ ತಾಲೂಕಿನಲ್ಲಿ ಏ. ೦೩ ರಂದು ಬೆಳಿಗ್ಗೆ ೧೦ ಗಂಟೆಗೆ ತಾ.ಪಂ ಆವರಣದಲ್ಲಿ, ಮಧ್ಯಾಹ್ನ. ೧೨ ಗಂಟೆಗೆ ನಗರಸಭೆ ಆವರಣ, ಸಾಯಂಕಾಲ ೬ ಕ್ಕೆ ಬಸ್‌ಸ್ಟ್ಯಾಂಡ್ ಬಳಿ ಹಾಗೂ ೭ ಗಂಟೆಗೆ ಮಾರ್ಕೆಟ್ ಹತ್ತಿರ ಜವಾಹರ ರಸ್ತೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ಗಂಗಾವತಿ ತಾಲೂಕಿನಲ್ಲಿ ಏ. ೦೪ ರಂದು ೧೦ ಗಂಟೆಗೆ ನಗರಸಭೆ ಆವರಣದಲ್ಲಿ, ಸಾಯಂಕಾಲ ೫ ಕ್ಕೆ ಬಸ್‌ಸ್ಟ್ಯಾಂಡ್ ಹಾಗೂ ೬ ಗಂಟೆಗೆ ಗಾಂಧಿ ಸರ್ಕಲ್‌ನಲ್ಲಿ. ಕುಷ್ಟಗಿ ತಾಲೂಕಿನಲ್ಲಿ ಏ. ೦೫ ರಂದು ಬೆಳಿಗ್ಗೆ ೧೦ ಗಂಟೆಗೆ ತಾ.ಪಂ ಆವರಣದಲ್ಲಿ, ಮಧ್ಯಾಹ್ನ. ೧೨ ಕ್ಕೆ ಪುರಸಭೆ ಆವರಣ, ಸಾಯಂಕಾಲ. ೦೬ ಕ್ಕೆ ಬಸ್‌ಸ್ಟ್ಯಾಂಡ್ ಹಾಗೂ ೭ ಗಂಟೆಗೆ ಮಾರ್ಕೆಟ್‌ನಲ್ಲಿ. ಯಲಬುರ್ಗಾ ತಾಲೂಕಿನಲ್ಲಿ ಏ. ೦೬ ರಂದು ಬೆಳಿಗ್ಗೆ ೧೦ ಗಂಟೆಗೆ ತಾ.ಪಂ ಕಾರ್ಯಾಲಯದ ಆವರಣದಲ್ಲಿ, ಮಧ್ಯಾಹ್ನ. ೧೨ ಕ್ಕೆ ಪುರಸಭೆ ಆವರಣ, ಸಾಯಂಕಾಲ ೬ ಕ್ಕೆ ಕಿತ್ತೂರು ರಾಣಿ ಚೆನ್ನಮ್ಮ ಸರ್ಕಲ್ ಹಾಗೂ ೭ ಗಂಟೆಗೆ ಯಲಬುರ್ಗಾ ಬಸ್‌ಸ್ಟ್ಯಾಂಡ್‌ನಲ್ಲಿ, ಗಂಗಾವತಿ ತಾಲೂಕಿನ ಕನಕಗಿರಿ ಕ್ಷೇತ್ರದಲ್ಲಿ ಏ. ೦೭ ರಂದು ಬೆಳಿಗ್ಗೆ ೧೦ ಗಂಟೆಗೆ ಕೃಷಿ ಉತ್ಪನ್ನ ಮಾರುಕಟ್ಟೆ ಹತ್ತಿರ, ಮಧ್ಯಾಹ್ನ ೧೨ ಕ್ಕೆ ಸರ್ಕಲ್ ಹಾಗೂ ಸಾಯಂಕಾಲ ೬ ಗಂಟೆಗೆ ಪುರಸಭೆ ಆವರಣದಲ್ಲಿ ಪ್ರಾತ್ಯಕ್ಷಿತೆ ಕಾರ್ಯಕ್ರಮಗಳು ಜರುಗಲಿವೆ. ಸಂಬಂಧಪಟ್ಟ ತಾಲೂಕ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ನಗರಸಭೆ/ ಪುರಸಭೆ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನಿಯೋಜಿಸಿದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟ್ ರಾಜಾ ತಿಳಿಸಿದ್ದಾರೆ.

Please follow and like us:
error