ಅಲ್ಪಸಂಖ್ಯಾತರ, ಶೋಷಿತರ ಶಕ್ತಿಯೇ ಕಾಂಗ್ರೆಸ್ : ಹೊನ್ನೂರಸಾಬ್


ಕೊಪ್ಪಳ, ಮೇ. ೦೬: ದೇಶದಲ್ಲಿ ಸಂವಿಧಾನಬದ್ಧವಾಗಿ ಆಡಳಿತ ನಡೆಸಿ, ಅಲ್ಪಸಂಖ್ಯಾತರ, ಶೋಷಿತರ ಬಗ್ಗೆ ನಿಜವಾದ ಕಾಳಜಿ ಇರುವದು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಎಂದು ಪಟ್ಟಣ ಪಂಚಾಯತ್ ಸದಸ್ಯ ಹೊನ್ನೂರಸಾಬ್ ಭೈರಾಪೂರ ಹೇಳಿದರು.
ಅವರು ಭಾಗ್ಯನಗರದ ವಿವಿಧ ವಾರ್ಡಗಳಲ್ಲಿ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಕೆ. ರಾಘವೇಂದ್ರ ಹಿಟ್ನಾಳ್‌ರವರ ಪರವಾಗಿ ಮನೆಮನೆಗೆ ರಾಘಣ್ಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನುಡಿದಂತೆ ನಡೆದ ಕಾಂಗ್ರೆಸ್ ಮತ್ತು ಅಭಿವೃದ್ಧಿಗೆ ಮತ್ತೊಂದು ಹೆಸರಾದ ಕೊಪ್ಪಳ ಕ್ಷೇತ್ರದ ಶಾಸಕ ರಾಘವೇಂದ್ರ ಅವರು ಯುವಕರಾಗಿದ್ದು ಮುಂದಿನ ಅವಧಿಯಲ್ಲಿಯೂ ಕ್ಷೇತ್ರವನ್ನು ಇನ್ನಷ್ಟು ಪರಿಪೂರ್ಣವಾಗಿ ಅಭಿವೃದ್ಧಿಗೊಳಿಸುವ ಸಾಮರ್ಥ್ಯ ಹೊಂದಿದ್ದಾರೆ, ಹಗಲಿರುಳು ಕ್ಷೇತ್ರದ ಅಭಿವೃದ್ಧಿಗೆ ತುಡಿಯುತ್ತಿದ್ದಾರೆ, ಅವರ ಈ ಐದು ವರ್ಷದ ಅವಧಿಯಲ್ಲಿ ಭಾಗ್ಯನಗರಕ್ಕೆ ವಿವಿಧ ಯೋಜನೆಗಳಲ್ಲಿ ಸುಮಾರು ೨೦ ಕೋಟಿ ರೂಪಾಯಿಗೂ ಅಧಿಕ ವೆಚ್ಚದ ಕಾಮಗಾರಿಗಳು ಆಗಿದ್ದು, ಹಲವು ಕಾಮಗಾರಿಗಳು ನಡೆಯುತ್ತಿವೆ, ಜನರು ಅದನ್ನು ಗಮನಿಸುತ್ತಾರೆ, ಈ ಬಾರಿ ಭಾಗ್ಯನಗರದ ಜನ ಖಂಡಿತ ಕಾಂಗ್ರೆಸ್‌ಗೆ ಹೆಚ್ಚು ಶಕ್ತಿ ನೀಡುತ್ತಾರೆ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣಾ ಇಟ್ಟಂಗಿ, ವಿಧಾನಸಭಾ ಕ್ಷೇತ್ರದ ಪ್ರಚಾರ ಸಮಿತಿ ಅಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ, ಮುಖಂಡರುಗಳಾದ ಶ್ರೀನಿವಾಸ ಗುಪ್ತಾ, ಚನ್ನಪ್ಪ ತಟ್ಟಿ, ವೆಂಕಟೇಶ ಇಟ್ಟಂಗಿ, ಭೋಗಪ್ಪ ಡಾಣಿ, ಪಟ್ಟಣ ಪಂಚಾಯತ ಸದಸ್ಯರುಗಳಾದ ತುಕಾರಾಮಪ್ಪ ಗಡಾದ, ಮಂಜುನಾಥ ಸಾಲಿಮಠ, ಹೊನ್ನೂರಸಾಬ ಭೈರಾಪೂರ, ಗಂಗಾಧರ ಕಬ್ಬೇರ್, ಸವಿತಾ ಗೋರಂಟ್ಲಿ, ಯಶೋದಾ ಮರಡಿ, ಹುಲಿಗೆಮ್ಮ ತಟ್ಟಿ, ರಮೇಶ ಹ್ಯಾಟಿ, ಸುರೇಶ ಕವಲೂರ, ಸುಮಿತ್ರಾ ಕಲಾಲ್, ಬಸವರಾಜ ಡಾಣಿ, ನಿವೃತ್ತ ಪೋಲಿಸ್ ಅಧಿಕಾರಿ ಹನುಮಂತಪ್ಪ, ಸುರೇಶ ಮುಂಡರಗಿ, ಶ್ರೀನಿವಾಸ ವರ್ಮಾ, ಪ್ರಭು ಪಾಟೀಲ, ಪಿ.ವಿ.ಪಾಟೀಲ, ವರಮೂರ್ತಿ, ಮರಿಶಾಂತವೀರಸ್ವಾಮಿ ಚಕ್ಕಡಿ ಇತರರು ಉಪಸ್ಥಿತರಿದ್ದರು.

Please follow and like us:
error