ಅಭಿವೃದ್ಧಿ ಹೆಸರಲ್ಲಿ ಕಾಂಗ್ರೆಸ್ ಅಧಿಕಾರ ದುರುಪಯೋಗ: ಅಮರೇಶ ವಾಗ್ದಾಳಿ


ಕೊಪ್ಪಳ:  ಅಭಿವೃದ್ಧಿ ಹೆಸರಲ್ಲಿ ಅಧಿಕಾರ ದುರುಪಯೋಗಪಡಿಸಿಕೊಂಡ ಕೀರ್ತಿ ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರಕ್ಕೆ ಸಲ್ಲುತ್ತದೆ. ಐದು ವರ್ಷ ಬರೀ ಅಕ್ರಮ ಎಸಗುವುದರಲ್ಲೇ ಕಾಂಗ್ರೆಸ್‌ನವರು ಕಾಲಹರಣ ಮಾಡಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಅಮರೇಶ್ ಕರಡಿ ವಾಗ್ದಾಳಿ ನಡೆಸಿದರು.
ಅವರು ತಾಲೂಕಿನ ಬಂಡಿಹರ್ಲಾಪುರ, ಹಳೇಬಂಡಿಹರ್ಲಾಪುರ, ಹೊಸಬಂಡಿಹರ್ಲಾಪುರ, ಬಸಾಪುರ, ಕವಳಿ, ಮಹಮ್ಮದ್‌ನಗರ ಗ್ರಾಮಗಳಲ್ಲಿ ಶನಿವಾರ ಮತಪ್ರಚಾರ ನಡೆಸಿ ಮಾತನಾಡಿ, ತಮ್ಮ ಅಧಿಕಾರ ಕೊನೆಗೊಳ್ಳುವ ನಾಲ್ಕೈದು ತಿಂಗಳಲ್ಲಿ ಕೋಟಿಗಟ್ಟಲೆ ಹಣವನ್ನು ಲೂಟಿ ಮಾಡಿದ್ದೇ ಕಾಂಗ್ರೆಸ್‌ನವರ ಬಹುದೊಡ್ಡ ಸಾಧನೆ. ಕೊನೆಗಳಿಗೆಯಲ್ಲಿ ರಾಜ್ಯದೆಲ್ಲೆಡೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ. ಚಾಲನೆ ನೀಡಿದ ಕಾಮಗಾರಿಗಳಿಗೆ ಅನುದಾನನವಿಲ್ಲದೆ ಅವುಗಳು ಹಾಗೆಯೆ ನಿಂತಿವೆ. ಕೊಪ್ಪಳ ಕ್ಷೇತ್ರದಲ್ಲೂ ಸಹ ನಿರೀಕ್ಷೆಗೆ ತಕ್ಕಂತೆ ಅಭಿವೃದ್ಧಿ ಕೆಲಸ ಮಾಡುವಲ್ಲಿ ಶಾಸಕರು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಅಭಿವೃದ್ಧಿ ನೆಪದಲ್ಲಿ ಕಾಲಹರಣ ಮಾಡಿದೆ. ಪ್ರಧಾನಿ ಮೋದಿ ಅನೇಕ ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತಿದ್ದಾರೆ. ರಾಜ್ಯದಲ್ಲಿ ಈ ಬಾರಿ ಪ್ರಧಾನಿ ಮೋದಿ ಅಲೆಗೆ ಕಾಂಗ್ರೆಸ್ ಕೊಚ್ಚಿ ಹೋಗಲಿದೆ. ಈ ಬಾರಿ ಅಧಿಕ ಮತಗಳಿಂದ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಹಾಗಾಗಿ ಕ್ಷೇತ್ರದ ಮತದಾರರು ಸುಳ್ಳು ಹೇಳುವ ಕಾಂಗ್ರೆಸ್‌ನ್ನು ಮನೆಗೆ ಕಳಿಸಿ ಬಿಜೆಪಿಗೆ ಮತ ನೀಡಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ತಾಪಂ ಸದಸ್ಯ ಪಾಲಾಕ್ಷಪ್ಪ ಗುಂಗಾಡಿ, ಮುಖಂಡರಾದ ಸುಬ್ಬಾರೆಡ್ಡಿ, ವೆಂಕಟಯ್ಯ, ಪ್ರಸಾದರಾವ್, ಶಿವಣ್ಣ ಬೆಣಕಲ್, ರಾಮಾಸ್ವಾಮಿ, ಮುದಿಯಪ್ಪ ಕೊಪ್ಪಳ, ರಫೀಕ್, ನಿಂಗಜ್ಜ ಲಿಂಗದಳ್ಳಿ, ಹನುಮಂತಪ್ಪ ಕಟ್ಟಿಮನಿ, ಹನುಮೇಶ, ರಂಜೀತ್, ಸುಧಾಕರ, ರಾಜಾರಾಮುಲು, ಚಂದ್ರಶೇಖರ ಲಮಾಣಿ, ಬಸಪ್ಪ ಗುಮ್ಮನೂರು, ಮಾನ್ವಿ ನರಸಿಂಹಲು, ಕನಕ, ಮುದಿಯಪ್ಪ, ಲಾಲ್‌ಸ್ವಾಮಿ, ಲಚಮಯ್ಯ, ಸುಕ್ಮಣಿ, ವೆಂಕಟೇಶ, ಕೇಶಪ್ಪ, ಪರಮೇಶ ಹೊಟೇಲ್, ಮರೆಗೌಡ ಹೊಟೆಲ್, ಅಂಬರೀಷ್, ಖಾಜಾ ಸೇರಿದಂತೆ ಕಾರ್ಯಕರ್ತರು, ಮುಖಂಡರು ಪಾಲ್ಗೊಂಡಿದ್ದರು.
ನಂತರ ಕೊಪ್ಪಳ ತಾಲೂಕಿನ ಕವಳಿ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಅಮರೇಶ ಕರಡಿ ಚುನಾವಣಾ ಪ್ರಚಾರ ನಡೆಸಿದರು. ಈವೇಲೇ ಎಸ್ಸಿ ಮೋರ್ಚಾ ಪ್ರಧಾನ ಕರ್ಯದರ್ಶಿ ಕನಕಮೂರ್ತಿ, ಊರಿನ ಮುಖಂಡರಾದ ಚನ್ನಬಸಪ್ಪ ಅಂಗಡಿ, ಲಕ್ಷ್ಮಣ್ ನಾಯಕ, ಚೌಡಾ ನಾಯಕ, ಸೇವಾ ನಾಯಕ, ನಾಗ್ಯಾ ನಾಯಕ, ಅಶೋಕ ಅಂಗಡಿ, ಭೀಮಾ ನಾಯಕ, ಶರಣಪ್ಪ ನಾಯಕ, ಮುಖಂಡರು ಪಾಲ್ಗೊಂಡಿದ್ದರು.

ಕೊಪ್ಪಳ ತಾಲೂಕಿನ ಹೊಸಬಂಡಿಹರ್ಲಾಪುರ ಗ್ರಾಮದಲ್ಲಿ ಬಿಜೆಪಿಯವರು ಪ್ರಚಾರ ನಡೆಸಲು ಬರುತ್ತಾರೆ ಎಂದು ಮನಗಂಡ ಕಾಂಗ್ರೆಸ್ ಕಾರ್ಯಕರ್ತರು ಅವರ ಮುಖಂಡರ ಮಾತು ಕೇಳಿ ಶುಕ್ರವಾರ ಕಾರ್ಯಕ್ರಮ ನಡೆಸದಂತೆ ತಡೆಯೊಡ್ಡಲು ಮುಂದಾಗಿದ್ದಾರೆ. ಇದರಿಂದ ತೀವ್ರ ಅಸಮಾಧಾನಗೊಂಡ ಗ್ರಾಮದ ಜನತೆ ಕಾಂಗ್ರೆಸ್‌ನ ಕುತಂತ್ರ ಖಂಡಿಸಿ ಶನಿವಾರ ಬಿಜೆಪಿ ಅಭ್ಯರ್ಥಿ ಅಮರೇಶ್ ಕರಡಿ ಸಮ್ಮುಖದಲ್ಲಿ ೭೨ಕ್ಕೂ ಹೆಚ್ಚು ಕಾರ್ಯಕರ್ತರು ಬಿಜೆಪಿ ಸೇರಿದರು.
ಎಸ್.ಕೆ. ಗೋಪಾಲ್, ಮಹೇಶ, ಗುಣಶೇಖರ, ಗೋಪಾಲ ಇಲಕಲ್, ಆನಂದ, ಮಹೇಂದ್ರ , ವೇಲುಮಣಿ, ಶಶಿಕುಮಾರ ಇಳಕಲ್ಲ, ಉದಯ, ಸುರೇಶ, ಧರ್ಮಣ್ಣ, ಶಿವಶಂಕರ, ಗಣೇಶ, ಗೋಪಿ, ಸೆಲ್ವರಾಜ, ರವಿ ಹುಲಗೇಶ, ಮಂಜುನಾಥ, ಮಾರುತಿ, ಲಕ್ಷ್ಮಣ್, ಪ್ರಶಾಂತ್, ಶ್ರೀಕಾಂತ, ಶಶಿ, ಮಣಿ, ಶ್ರಿನಿವಾಸ, ವಡಿವೇಲು, ಮಂಜು ಎನ್., ಶಾಂತು, ಮಲ್ಲಿಕಾರ್ಜುನ ಸೇರಿದಂತೆ ೭೨ಕ್ಕೂ ಹೆಚ್ಚು ಕಾರ್ಯಕರ್ತರು ವಿವಿಧ ಪಕ್ಷಗಳನ್ನು ತೊರೆದು ಬಿಜೆಪಿ ಸೇರ್ಪಡೆಗೊಂಡರು.
ಮುಖಂಡ ಧರ್ಮಯ್ಯ, ಗ್ರಾಪಂ ಸದಸ್ಯ ಅಮರೇಶ, ರಫೀಕ್, ಮಂಜುನಾಥ, ರವಿ, ಶಿವಪ್ಪ, ದೇವಪ್ಪ, ಮೋಹನ, ಕಳಸಯ್ಯಜ್ಜ ಇದ್ದರು.

Please follow and like us:
error