ಅಭಿವೃದ್ಧಿಗಾಗಿ ಬಿಜೆಪಿ ಬೆಂಬಲಿಸಿ – ಅಮರೇಶ ಕರಡಿ

 

ಕೊಪ್ಪಳ: ಕಾಂಗ್ರಸ್ ಸರ್ಕಾರ ಕಳೆದ ಐದು ವರ್ಷದಲ್ಲಿ ಕಮಿಷನ್ ಪಡೆಯುವ ಅಬ್ಬರದಲ್ಲಿ ಅಭಿವೃದ್ಧಿಯನ್ನು ಮರೆತಿದೆ. ರಾಜ್ಯದ ಅಭಿವೃದ್ಧಿಗಾಗಿ ಈ ಬಾರಿ ಬಿಜೆಪಿಗೆ ಮತ ನೀಡಿ ಎಂದು ಬಿಜೆಪಿ ಅಭ್ಯರ್ಥಿ ಅಮರೇಶ ಕರಡಿ ಮತದಾರರಲ್ಲಿ ವಿನಂತಿಸಿಕೊಂಡರು.
ಕೊಪ್ಪಳ ತಾಲೂಕಿನ ಯತ್ನಟ್ಟಿಗ್ರಾಮದಲ್ಲಿ ಭಾನುವಾರ ಮತಯಾಚನೆ ಮಾಡಿ ಮಾತನಾಡಿದ ಅವರು, ನೀರಾವರಿಗೆ ಹೆಚ್ಚಿನ ಒತ್ತು ನೀಡುವುದಾಗಿ ಕೂಡಲ ಸಂಗಮದವರೆಗೆ ಪಾದಯಾತ್ರೆ ಮಾಡಿ, ರೈತರ ಹೆಸರಲ್ಲಿ ಅಧಿಕಾರ ಪಡೆದು ಅದೇ ರೈತರನ್ನ ನಿರ್ಲಕ್ಷಿಸಿದ್ದಾರೆ. ಕೊಟ್ಟಮಾತಿನಂತೆ ಕ್ಷೇತ್ರದ ನಿರಾವರಿ ಯೋಜನೆಗಳಿಗೆ ಹಣ ಬಿಡುಗಡೆ ಮಾಡಲಿಲ್ಲ. ಇದರಿಂದಾಗಿ ಸಿಂಗಟಾಲೂರ ಏತ ನಿರಾವಾರಿ ನೆನೆಗುದಿಗೆ ಬಿದ್ದಿದೆ. ಹಾಗಾಗಿ ಕಾಂಗ್ರೆಸ್ ಪಕ್ಷಕ್ಕೆ ಮನೆ ದಾರಿ ತೋರಿಸಿ. ಬಿಜೆಪಿಗೆ ಮತ ನೀಡಿ. ನನ್ನ ತಂದೆ ಸಂಗಣ್ಣ ಕರಡಿ ಅವರು ನಾಲ್ಕು ಅವಧಿ ಶಾಸಕರಾಗಿದ್ದಾಗ ಮಾಡಿರುವ ಅಭಿವೃದ್ಧಿ ಕಾರ್ಯಗಳು, ಅವರ ಮಾರ್ಗದರ್ಶನ, ನಿಮ್ಮೆಲ್ಲರ ಆಶಿರ್ವಾದವೆ ನನಗೆ ಶ್ರೀರಕ್ಷೆ. ಅಭಿವೃದ್ಧಿಪರ ಇರುವ ಪಕ್ಷವಾದ ಬಿಜೆಪಿಗೆ ಮತ ನೀಡಿ ಎಂದು ವಿನಂತಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಮಂಜುನಾಥ ಹೆಬ್ಬಳ್ಳಿ, ದೇವೇಂದ್ರಗೌಡ ಹೊಸಮನಿ, ಹೇಮಣ್ಣ ಮಂಗಳೂರ, ನಾಗನಗೌಡ ಹೊಸಮನಿ, ಶರಣಪ್ಪ ಗೊಂಡಬಾಳ, ಶರಣಪ್ಪ ಮಂಗಲೂರ, ದೇವಪ್ಪ ಸೇರಿದಂತೆ ಮುಂತಾದವರು ಇದ್ದರು.

Please follow and like us:
error