ಅಭಿವೃದ್ದಿಗಾಗಿ ಮತ ಹಾಕಿ: ಅಮರೇಶ್ ಕರಡಿ

ಕೊಪ್ಪಳ ತಾಲೂಕಿನ ಹಟ್ಟಿ ಗ್ರಾಮದಲ್ಲಿ ಗುರುವಾರ ಮತಯಾಚನೆ ಮಾಡಿ ಮಾತನಾಡಿದ ಬಿಜೆಪಿ ಅಭ್ಯರ್ಥಿ ಅಮರೇಶ ಕರಡಿ.

ಹಟ್ಟಿ ಗ್ರಾಮದಲ್ಲಿ ಬಿರುಸಿನ ಪ್ರಚಾರ | ಬಿಜೆಪಿ ಬೆಂಬಲಿಸಲು ಮನವಿ

ಕೊಪ್ಪಳ:
ಬಿಜೆಪಿ ಅಭ್ಯರ್ಥಿ ಅಮರೇಶ ಕರಡಿ ಅವರು ಕೊಪ್ಪಳ ತಾಲೂಕಿನ ಹಟ್ಟಿ ಗ್ರಾಮದಲ್ಲಿ ಗುರುವಾರ ಮತಯಾಚನೆ ಮಾಡಿದರು.
ಗ್ರಾಮದಲ್ಲಿ ಪಾದಯಾತ್ರೆ ಬಳಿಕ ಮಾತನಾಡಿದ ಅವರು, ಕಳೆದ ಬಾರಿಯ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಮ್ಮ ತಂದೆಯವರು ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಮಾಡಿದ ಎಲ್ಲ ಕೆಲಸಗಳನ್ನು ನೊಡಿಕೊಂಡು ಈ ಬಾರಿಯ ಚುನಾವಣೆಯಲ್ಲಿ ನನಗೆ ಮತ ನೀಡಬೇಕು ಎಂದು ಮನವಿ ಮಾಡಿಕೊಂಡರು.
ರಾಜ್ಯ ಸರ್ಕಾರ ಕಳೆದ ಐದು ವರ್ಷಗಳಿಂದ ಉತ್ತಮ ಆಡಳಿತ ನೀಡುವ ಬದಲಾಗಿ ಜಾತಿ ಜಾತಿಗಳ ಮಧ್ಯೆ ಬಿರುಕು ತಂದಿಡುವ ಕೆಲಸ ಮಾಡಿದೆ. ಧರ್ಮ ಒಡೆಯುವ ಕಾರ್ಯಕ್ಕೆ ಸಿಎಂ ಕೈ ಹಾಕಿದ್ದರು. ಇವುಗಳಿಗೆ ಅಧಿಕಾರ ಮೀಸಲಿಡುವ ಬದಲು ರಾಜ್ಯವನ್ನು ಅಭಿವೃದ್ಧಿಪಥದತ್ತ ಕೊಂಡೊಯ್ಯಲು ಚಿಂತಿಸಿದ್ದರೆ ಉತ್ತಮವಾಗಿರುತ್ತಿತ್ತು ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಆರೋಪಿಸಿದರು.
ಈ ಸಂದರ್ಭದಲ್ಲಿ ಜಿಪಂ ಸದಸ್ಯ ರಾಮಣ್ಣ ಚೌಡ್ಕಿ, ಎಪಿಎಂಸಿ ಸದಸ್ಯ ಬಸವರಾಜ ಈಶ್ವರಗೌಡ್ರ, ಮಾಜಿ ಸದಸ್ಯ ಸುದೇಶಪ್ಪ ಪಟ್ಟಣಶೆಟ್ಟಿ, ಜಿಲ್ಲಾ ಎಸ್ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕನಕಮೂರ್ತಿ, ಗ್ರಾಮದ ಮುಖಂಡರಾದ ಬಸವನಗೌಡ್ರ ಯಂಕನಗೌಡ್ರ, ಪಕ್ಕೀರಪ್ಪ ಹುಲಿಗಿ, ಗಂಗಪ್ಪ ಉಳ್ಳಾಗಡ್ಡಿ, ಶೇಖರಗೌಡ್ರ ಪೊಲೀಸ್‌ಪಾಟೀಲ್, ಇಮಾಮ್ ಸಾಬ್, ಗಿಡ್ಡಪ್ಪ ಪೂಜಾರ, ಗುಡದಪ್ಪ ಪೂಜಾರ, ರಾಮಪ್ಪ ಹರಿಜನ, ಲಕ್ಷ್ಮಣ ಚೌಡ್ಕಿ, ನಿಂಗಪ್ಪ ಪೂಜಾರ, ದ್ಯಾಮಪ್ಪ ಉಳ್ಳಾಗಡ್ಡಿ, ಶರಣಪ್ಪ ಉಳ್ಳಾಗಡ್ಡಿ, ಧ್ಯಾಮಣ್ಣ ಬೇವೂರ, ಗಿರಿಯಪ್ಪ ಕುಣಿಕೇರಿ ಸೇರಿದಂತೆ ಗ್ರಾಮದ ಯುವಕರು, ಹಿರಿಯರು ಭಾಗವಹಿಸಿದ್ದರು.

Please follow and like us:
error