ಅದಕ್ಷ ಪದಾಧಿಕಾರಿಗಳ ವಿರುದ್ದ ಕ್ರಮ ಜರುಗಿಸಿ , ಪಕ್ಷ ಸಂಘಟಿಸಿ- ದಿನೇಶ್ ಗುಂಡೂರಾವ್

Koppal ಮುಂಬರುವ ಲೋಕಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆಗೆ ಮುಂದಾಗಿರುವ ಕಾಂಗ್ರೆಸ್ ಕೊಪ್ಪಳದಲ್ಲಿಂದು ಶಕ್ತಿ ಕಾರ್ಯಾಗಾರ ನಡೆಸಿತು. ನಗರದ ಶಿವಶಾಂತವೀರ ಕಲ್ಯಾಣ ಮಂಟದದಲ್ಲಿ ನಡೆದ  ಕಾರ್ಯಾಗಾರವನ್ನು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್  ಉದ್ಘಾಟಿಸಿದರು. ಪಕ್ಷದ ಜವಾಬ್ದಾರಿವ ಯಾರು ಹೊತ್ತಿರುತ್ತಾರೋ ಅವರ ಕಲಸ ಬಹಳ ಅಗತ್ಯ ಜಿಲ್ಲಾ ಮಟ್ಟದಿಂದ ಹಿಡಿದು, ಹೊಬಳಿ ಮಟ್ಟದ ಕಾರ್ಯಕರ್ತರ ಜವಾಬ್ದಾರಿ ಅಷ್ಟೆ ಅಗತ್ಯ ಪ್ರಾಮಾಣಿಕವಾಗಿ ಕೆಲಸ ಮಾಡುವುದರಿಂದ ಪಕ್ಷ ಬೆಳೆಯಯತ್ತದೆ ಪಕ್ಷ ಸಂಘಟನೆ ಸದೃಡವಾಗಿರಲು ತಳಮಟ್ಟದಲ್ಲಿ ಕಾರ್ಯಕರ್ತರು ಕೆಲಸ ಮಾಡಬೇಕಿದೆ. ಈ ನಿಟ್ಟಿನಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರಾವಾರು ಕನಿಷ್ಠ 10 ಸಾವಿರ ಜನರನ್ನಾದರೂ ಶಕ್ತಿ ಪ್ರೊಜೆಕ್ಟ್ ನಲ್ಲಿ ನೊಂದಾಯಿಸಬೇಕಾಗಿದೆ. ಕೊಪ್ಪಳದಲ್ಲಿ ಶಕ್ತಿ ಪ್ರೊಜೆಕ್ಟ್ ಗೆ ನೊಂದಣಿಗೆ ತೀವ್ರ ಹಿನ್ನಡೆಯಾಗಿದೆ. ಕೇವಲ 1300 ಜನರ ನೋಂದಣಿಯಾಗಿದೆ. ಬೂತ್ ಹಾಗೂ ಬ್ಲಾಕ್ ಅಧ್ಯಕ್ಷರು ಕ್ರಿಯಾಶೀಲರಾಗಿ ಕೆಲಸ ಮಾಡಿದರೆ, ಜಿಲ್ಲಾ ಸಂಘಟನೆ ಬಲಿಷ್ಠವಾಗಿರುತ್ತದೆ. ಯಾವ ಬ್ಲಾಕ್ ಅಧ್ಯಕ್ಷರು ಕೆಲಸ ಮಾಡುವುದಿಲ್ಲವೋ ಅವರನ್ನು  ತೆಗದು ಹಾಕಿ, ಆಸಕ್ತಿ ಇರಲಾರದವರನ್ನು ತೆಗೆದು ಹಾಕಿಯಾರನ್ನು ಮೆಚ್ಚಿಸುವಂತ ಕೆಲಸ ಆಡುವ ಅಗತ್ಯವಿಲ್ಲ ಕ್ರಮ ಕೈಗೊಳ್ಳದಿದ್ದರೆ  ನಾನು ಜಿಲ್ಲಾಧ್ಯಕ್ಷರ ಮೇಲೆ ಕ್ರಮಕೈಗೊಳ್ಳಬೇಕಾಗುತ್ತದೆ.ಕೊಪ್ಪಳದಲ್ಲಿ ಕಾಂಗ್ರೆಸ್ ದುರ್ಬಲವಿಲ್ಲ ಬಲಿಷ್ಠವಾಗಿದೆ ಇಲ್ಲಿ ಪದಾಧಿಕಾರಿಗಳು ಇನ್ನು ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಬೇಕು ಎಂಪಿ ಎಲೆಕ್ಷನ್ಗೆ ನಾವು ತಯಾರಿ ನಡೆಸಬೇಕು ಸಂಘಟನಾತ್ಮಕವಾಗಿ ಒಗ್ಗಟ್ಟಾಗಿ ಕೆಲಸ ಮಾಡಬೇಕಾಗಿದೆ ಬಿಜೆಪಿ ಹಾಗೂ ಆರ್ ಎಸ್ ಎಸ್ ಅಪಪ್ರಚಾರ ವಿರುದ್ಧ ಹೋರಾಡಬೇಕಾಗಿದೆ ಅವರ ಸುಳ್ಳಿಗೆ ಸರಿಯಾದ ಉತ್ತರ ನೀಡಬೇಕಾಗಿದೆ ಸರ್ವಾಧಿಕಾರಿ ಧೋರಣೆಯನ್ನು ಮೋದಿ ಈ ದೇಶಲ್ಲಿ ಮಾಡುತ್ತಿದ್ದಾರೆ .ಬಿಜೆಪಿ ಹಾಗೂ ಆರ್ ಎಸ್ ಎಸ್ ಅಪಪ್ರಚಾರ ವಿರುದ್ಧ ಹೋರಾಡಬೇಕಾಗಿದೆ ಅವರ ಸುಳ್ಳಿಗೆ ಸರಿಯಾದ ಉತ್ತರ  ಡಬೇಕಾಗಿದೆ ಸರ್ವಾಧಿಕಾರಿ ಧೋರಣೆಯನ್ನು ಮೋದಿ ಈ ದೇಶಲ್ಲಿ ಮಾಡುತ್ತಿದ್ದಾರೆ ಅವರ ಕ್ಯಾಬಿನೆಟ್ ಸಚವರ ಗಮನಕ್ಕೆ ಕೆಲ ವಿಷಯಗಳನ್ನು ಯರುವುದಿಲ್ಲ ತಾವೇ ಸರ್ವಾಧಿಕಾರಿಯಂತೆ ಆಡಳಿತ ಮಾಡುತ್ತಿದ್ದಾರೆ ಅವರು ಸದನಕ್ಕೆ ಹೋಗುವುದಿಲ್ಲ, ಸಭೆ ನಡೆಸುವುದಿಲ್ಲ ಕ್ಯಾಬಿನೆಟ್ ಸಚಿವರ ಸಲಹೆ ಪಡೆಯುವುದಿಲ್ಲ

ಯಾವುದೇ ತೀರ್ಮಾನ ತೆಗೆದುಕೊಳ್ಳಬೇಕಾದರೆ ತಾವೇ ತೆಗೆದುಕೊಳ್ಳುತ್ತಾರೆ ಕೇಂದ್ರ ಗೃಹ, ಹಣಕಾಸು, ವಿದೇಶಾಂಗ,ರೈಲ್ವೆ, ಇನ್ನಿತರ ಸಚಿವರು ಸ್ವಂತ ನಿರ್ಣಯ ತೆಗೆದುಕೊಳ್ಳುವಂತಿಲ್ಲ ನಾಲ್ಕೂವರೆ ವರ್ಷದಲ್ಲಿ ಪತ್ರಿಕಾಗೋಷ್ಠಿ ಮಾಡುತ್ತಿಲ್ಲ ಯಾರ ಮಾತನ್ನು ಇವರು ಕೇಳುವುದಿಲ್ಲ ಅವರ ಮಾತನ್ನ ಮಾತ್ರ ಕೇಳಬೇಕು ನಾಲ್ಕು ಜನ ಸುಪ್ರೀ ಕೋರ್ಟ್ ಜಡ್ಜ್ ಗಳು ಈ ಸರ್ಕಾರ ವ್ಯವಸ್ಥೆ ಸರಿ ಇಲ್ಲ ಅಂತ ಹೇಳಿದರು ಯಾರು ಸತ್ಯವನ್ನು ಹೇಳುತ್ತಾರೆ ಅವರ ಮೇಲೆ ರೇಡ್ ಮಾಡಿಸುತ್ತಾರೆ ಒಂದು ರೀತಿ ಸಮಾಜದಲ್ಲಿ ಮೋದಿ ಭಯದ ವಾತಾವರಣ ಸೃಷ್ಟಿಸಿದ್ದಾರೆ ಸಿಬಿಐನ್ನು ಸರ್ವನಾಶ ಮಾಡಿದ್ದಾರೆ ಆರ್ ಬಿ ಐ ನ್ನು ಕೂಡ ಕಂಟ್ರೋಲ್ ಮಾಡುತ್ತಿದ್ದಾರೆ ಪ್ರತಿಯೊಂದು ಇಲಾಖೆಯನ್ನು ಕಂಟ್ರೋಲ್ ಇಟ್ಟುಕೊಳ್ಳಲು ಹೊರಟಿದ್ದಾರೆ ಜನರು ಈ ಸರ್ಕಾರ ವಿರುದ್ಧ ತಿರುಗಿ ಬಿದ್ದಿದ್ದಾರೆ

ಮೋದಿಯಂತ ಸುಳ್ಳುಗಾರ ಈ ದೇಶಕ್ಕರ ಬೇಕಾಗಿಲ್ಲ ಅಂತ ತಿರುಗಿಬಿದ್ದಿದ್ದಾರೆ ಸಮಾಜದಲ್ಲಿ ಕೆಟ್ಟ ವಾತಾವರಣ ನಿರ್ಮಾಣ ಮಾಡಿದ್ದಾರೆ ದೇಶದಲ್ಲಿ ಅಶಾಂತಿ ಗಲಭೆ ವಾತಾವರಣ ನಿರ್ಮಾಣ ಮಾಡಿದೆ ಅಭಿವೃದ್ಧಿ ಕೆಲಸಗಳಾಗಿಲ್ಲ ಬರೀ ಮನ್ ಕೀ ಬಾತ್ ಲ್ಲಿ ಕಾಲಕಳೆಯುತ್ತಿದ್ದಾರೆ ರೈತರ, ಕಾರ್ಮಿಕರ, ಶೋಷಿತರ, ಮಹಿಳೆಯರ ಬಗ್ಗೆ ಕಾಳಜೀ ಇಲ್ಲದ ಸರ್ಕಾರವಿದೆ ತಮ್ಮ ಮಾಧ್ಯಮಗಳ ಮುಖಾಂತರ, ಸಮಾಜಿಕ ಜಾಲ ತಾಣಗಳ ಮುಖಾಂತರ ಅಶಾಂತಿಯನ್ನು ಸೃಷ್ಟಿಮಾಡುತ್ತಿದ್ದಾರೆ. ಮೋದಿ ಸರ್ಕಾರ ಬರಿ ತಮಗೆ ಬೇಕಾದ ಬಂಡವಾಳಶಾಹಿಗಳಿಗೆ ಲಾಭ ಮಾಡಿದೆ ಇಂತಹ ಪ್ರಧಾನಿ ಈ ದೇಶಕ್ಕೆ ಅಗತ್ಯ ಇಲ್ಲ ಅಂತ ಜನರಿಗೆ ಮನವರಿಕೆ ಮಾಡಬೇಕಾಗಿದೆ ಮೋದಿ ಮತ್ತೊಮ್ಮ ಪ್ರಧಾನಿ ಆದ್ರೆ ದೇಶಕ್ಕೆ ಕಂಟಕ ಕಾಡಿದ್ದಾರೆ ವಾಜಪೇಯಿ ಅವರ ಸರ್ಕಾರ ಬಹಳ ಅರೋಗ್ಯಕ್ಕಾರ ವಾಗಿತ್ತು ಆದ್ರೆ ಈ ಮೋದಿ ಸರ್ಕಾರ ಸಮಾಜಕ್ಕೆ ಕಂಟಕವಾಗಿದೆ ಎಂದು ಹರಿಹಾಯ್ದರು.

ಕಾರ್ಯಾಗಾರದಲ್ಲಿ ಮಾಜಿ ಸಂಸದ ಶಿವರಾಮೆಗೌಡ, ಶಾಸಕರಾದ ರಾಘವೇಂದ್ರ ಹಿಟ್ನಾಳ, ಅಮರೇಗೌಡ ಬಯ್ಯಾಪೂರ, ಮಾಜಿ ಸಚಿವ ಶಿವರಾಜ್ ತಂಗಡಗಿ, ಹಸನಸಾಬ ದೋಟಿಹಾಳ, ಚಂದ್ರಶೇಖರ್ ಭಟ್ಟ, ಬಸವರಾಜ್ ಹಿಟ್ನಾಳ ಸೇರಿದಮತೆ ಜನಪ್ರತಿನಿಧಿಗಳು, ಪದಾಧಿಕಾರಿಗಳು, ಹಾಗೂ ಶಕ್ತಿ ಕಾರ್ಯಕ್ರಮದ ಕಾರ್ಯಕರ್ತರು ಭಾಗವಹಿಸಿದ್ದರು. ಮಾಜಿ ಸಚಿವರಾದ ಇಕ್ಬಾಲ್ ಅನ್ಸಾರಿ, ಬಸವರಾಜ್ ರಾಯರಡ್ಡಿ ಗೈರಾಗಿದ್ದರು

Please follow and like us:
error