ಕನ್ನಡನೆಟ್.ಕಾಂ ದಶಮಾನೋತ್ಸವ : 4ನೇ ಕೊಪ್ಪಳ ಜಿಲ್ಲಾ ಡೈರೆಕ್ಟರಿ ಲೋಕಾರ್ಪಣೆ


ಕೊಪ್ಪಳ : ಮಾಜಿ ಮುಖ್ಯಮಂತ್ರಿಗಳು ಹಾಗೂ ಸಮ್ಮಿಶ್ರ ಸರಕಾರದ ಸಮನ್ವಯ ಸಮಿತಿಯ ಅಧ್ಯಕ್ಷರಾಗಿರುವ ಸಿದ್ದರಾಮಯ್ಯನವರು ಕನ್ನಡನೆಟ್ ಡಾಟ್ ಕಾಂನ ಕೊಪ್ಪಳ ಜಿಲ್ಲಾ ಡೈರೆಕ್ಟರಿ ೪ನೇ ಆವೃತ್ತಿಯನ್ನು ಲೋಕಾರ್ಪಣೆ ಮಾಡಿದರು. ಕುಷ್ಟಗಿ ತಾಲೂಕಿನ ತೋಪಲಕಟ್ಟಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಡೈರೆಕ್ಟರಿಯನ್ನು ಲೋಕಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಸಂಪಾದಕ ರಾಜಾಬಕ್ಷಿ ಎಚ್.ವಿಯವರು ಕನ್ನಡನೆಟ್ ಡಾಟ್ ಕಾಂ ಹತ್ತುವರ್ಷಗಳ ಸೇವೆಯ ಬಗ್ಗೆ ಮಾಹಿತಿ ನೀಡಿದರು. ಕನ್ನಡನೆಟ್ ಡಾಟ್ ಕಾಂ ಬಳಗ ಹತ್ತು ವರ್ಷಗಳಿಂದ ಆನ್‌ಲೈನ್‌ನಲ್ಲಿ ನೀಡುತ್ತಿರುವ ಸೇವೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ ಇಂದಿನ ದಿನಗಳಲ್ಲಿ ಆನ್‌ಲೈನ್ ಪತ್ರಿಕೆಗಳ ಜವಾಬ್ದಾರಿ ಹೆಚ್ಚಾಗಿದೆ ಶುಭವಾಗಲಿ ಎಂದು ಹಾರೈಸಿದರು.
ಕೊಪ್ಪಳ ಜಿಲ್ಲೆಯ ಹಾಗೂ ಹೈದ್ರಾಬಾದ್ ಕರ್ನಾಟಕದ ಪ್ರಪ್ರಥಮ ಕನ್ನಡ ಆನ್ ಲೈನ್ ಪತ್ರಿಕೆ ಕನ್ನಡನೆಟ್ ಡಾಟ್ ಕಾಂ ತನ್ನ ಹತ್ತನೇಯ ವರ್ಷದ ಸಂಭ್ರಮದಲ್ಲಿ ಈ ಸಂದರ್ಭದಲ್ಲಿ ವಿಶೇಷ ಸಂಚಿಕೆಯನ್ನು ಹೊರತಂದಿದೆ. ಈ ಆವೃತ್ತಿಯಲ್ಲಿ ಜಿಲ್ಲೆಯ ಸಮಗ್ರ ಮಾಹಿತಿಯೊಂದಿಗೆ ಇತಿಹಾಸದ ಅಪರೂಪದ ವಿಷಯಗಳ ಲೇಖನಗಳು ಇವೆ.
ಈ ಸಂದರ್ಭದಲ್ಲಿ ಶಾಸಕರಾದ ರಾಘವೇಂದ್ರ ಹಿಟ್ನಾಳ, ಅಮರೇಗೌಡ ಪಾಟೀಲ್ ಬಯ್ಯಾಪೂರ, ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್, ಕೆ.ವಿರುಪಾಕ್ಷಪ್ಪ, ಕೆ.ಶರಣಪ್ಪ, ಬಸವರಾಜ್ ಹಿಟ್ನಾಳ, ರಾಜಶೇಖರ್ ಹಿಟ್ನಾಳ, ಹಸನಸಾಬ ದೋಟಿಹಾಳ್ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು.

Please follow and like us:
error