5 ದಿನಗಳಲ್ಲಿ ಕೊಲೆ ಪ್ರಕರಣ ಬೇಧಿಸಿದ ಕುಷ್ಟಗಿ ಪೊಲೀಸರು; ಕೊಲೆ ಆರೋಪಿ ಅರೆಸ್ಟ್

ಕೊಪ್ಪಳಕುಷ್ಟಗಿ ತಾಲೂಕಿನ ಯಲಬುರ್ತಿ ಗ್ರಾಮದ  ಮಹಿಳೆಯ ಕೊಲೆ ಪ್ರಕರಣವನ್ನು‌ ಕೊಪ್ಪಳದ ಪೊಲೀಸರು ಐದೇ ದಿನದಲ್ಲಿ ಬೇಧಿಸಿ ಆರೋಪಿಯನ್ನು ಬಂಧಿಸಿದ್ದಾರೆ.

ಜೂನ್ 1ಶರಣಪ್ಪ ಮ್ಯಾಗೇರಿ ಎಂಬುವವರ ಪತ್ನಿ ಶರಣಮ್ಮ ಕಾಣೆಯಾಗಿದ್ದರೆ ಎಂದು ದೂರು ನೀಡಿದ್ದರು. ತನ್ನ ಹೆಂಡತಿ ಶ್ರೀಮತಿ ಶರಣಮ್ಮ ಅದೇ ಗ್ರಾಮದ ಬಸವರಾಜ ತಂದೆ ಶರಣಪ್ಪ ಕಂಡಕ್ಟರ ತಟ್ಟಿ ಈತನೊಂದಿಗೆ ಅನೈತಿಕ ಸಂಬಂಧ ಬೆಳೆಸಿದ್ದು ಮೇ 29 ರಂದು ರಾತ್ರಿ ಫಿರ್ಯಾದಿದಾರರ ಕೈಯಲ್ಲಿ ಖುದ್ದಾಗಿ ಸಿಕ್ಕಿ ಬಿದ್ದಿದ್ದು, ಆಗ ಅವರಿಬ್ಬರೂ ಓಡಿ ಹೋಗಿದ್ದಾರೆ ಎಂದು ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಹೆಂಡತಿ ಕಾಣೆಯಾದ ಬಗ್ಗೆ ದೂರು ಸಲ್ಲಿಸಿದ್ದ.

ಜೂನ್ 13 ರಂದು ಸಂಜೆ 6-30 ಗಂಟೆಯ ಸುಮಾರು ತಮ್ಮೂರ ಸೀಮಾದ ಶರಣಪ್ಪ ತಟ್ಟಿ ಹೊಲದ ಹತ್ತಿರ ಇರುವ ತೆಗ್ಗಿನ ನಾಲೆಯಲ್ಲಿ ಯಾರೋ ಹೆಣ್ಣು ಮಗಳನ್ನು ಹೊಡೆದು, ಕುತ್ತಿಗೆ ಹಿಚುಕಿ ಸಾಯಿಸಿದ ಸುದ್ದಿ ತಿಳಿದು ಅಲ್ಲಿಗೆ ಹೋಗಿ ನೋಡಿದಾಗ ಸತ್ತ ಮಹಿಳೆಯು ತನ್ನ ಹೆಂಡತಿ ಶರಣಮ್ಮಳಾಗಿದ್ದು, ಆಕೆಯನ್ನು ಬಸವರಾಜ ತಂದೆ ಶರಣಪ್ಪ ಕಂಡಕ್ಟರ್ ಯಲಬುರ್ತಿ ಈತನು ತನ್ನ ಹೆಂಡತಿಯೊಂದಿಗೆ ಅನೈತಿಕ ಸಂಬಂಧವನ್ನು ಹೊಂದಿದ್ದು, ತನ್ನ ಹೆಂಡತಿಯನ್ನು ಕೊಲೆ ಮಾಡಿ ಸಾಕ್ಷ್ಯವನ್ನು ನಾಶಪಡಿಸಲು ತೆಗ್ಗಿನಲ್ಲಿ ಹಾಕಿರಬಹುದು ಎಂದು ಪತಿ ಮತ್ತೊಮ್ಮೆ ಹೇಳಿಕೆ ನೀಡಿದ.

ಪ್ರಕರಣದ ಆರೋಪಿತನ ಪತ್ತೆ ಕುರಿತು ಕೊಪ್ಪಳ ಜಿಲ್ಲಾ ಪೊಲೀಸ್ ಅಧೀಕ್ಷಕಿ, ಜಿ. ಸಂಗೀತಾ ಮಾರ್ಗದರ್ಶನದಲ್ಲಿ ಮತ್ತು ಗಂಗಾವತಿ ಡಿ. ವಾಯ್ ಎಸ್.ಪಿ ಬಿ.ಪಿ.ಚಂದ್ರಶೇಖರರ ನೇತೃತ್ವದಲ್ಲಿ ಜಿ.ಚಂದ್ರಶೇಖರ, ಸಿ.ಪಿ.ಐ. ಕುಷ್ಟಗಿ ವೃತ್ತ ಹಾಗೂ ಅಮರೇಶ ಹುಬ್ಬಳ್ಳಿ, ಪಿ.ಎಸ್.ಐ. ಹನಮಸಾಗರ ಠಾಣೆ ಮತ್ತು ವೀರಪ್ಪ ನಾಯಕ, ಎ.ಎಸ್.ಐ. ಕುಷ್ಟಗಿ ಹಾಗೂ ಸಿಬ್ಬಂದಿಯವರಾದ ಶಿವರಾಜ, ಅಮರೇಶ, ಶ್ರೀಧರ, ಷಣ್ಮುಖಪ್ಪ, ಪರಶುರಾಮರನ್ನೊಳಗೊಂಡ ತಂಡವನ್ನು ರಚನೆ ಮಾಡಿದರು. ತಂಡವು ವೈಜ್ಞಾನಿಕ ತನಿಖೆ ಕೈಗೊಂಡು ಜೂನ್ 18 ರಂದು ಬಂಡಿ ಕ್ರಾಸ್ ಹತ್ತಿರ ಖಚಿತ ಮಾಹಿತಿ ಮೇರೆಗೆ ಬಸವರಾಜ ತಂದೆ ಶರಣಪ್ಪನನ್ನು ಬಂಧಿಸಿ ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿದ್ದು ಕೃತ್ಯವನ್ನು ಎಸಗಿದ ಬಗ್ಗೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.

ಕೇವಲ ಐದೇ ದಿನದಲ್ಲಿ ಅವಿರತವಾಗಿ ತನಿಖೆ ಕೈಗೊಂಡು ಕ್ಲಿಷ್ಟಕರ ಪ್ರಕರಣವನ್ನು ಭೇದಿಸಿದ ತಂಡಕ್ಕೆ ಕೊಪ್ಪಳ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಜಿ. ಸಂಗೀತಾ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

 

Please follow and like us:
error