ಶಾಲಾ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಶಿಕ್ಷಕ ಪೋಕ್ಸೋ ಕಾಯ್ದೆಯಡಿ ಬಂಧನ

ಶಿಕ್ಷಕನೆಂದರೇ ದೈವ ಸಮಾನ ಗುರುವೇ ದೇವರು ಎನ್ನುವ ಸಮಾಜ ನಮ್ಮದು ಆದರೆ ಇತ್ತಿಚಿನ ದಿನಗಳಲ್ಲಿ ಕೆಲವು ಶಿಕ್ಷಕರು ತಮ್ಮ ವೃತ್ತಿಗೆ ಅಗೌರವ ತರುವಂತಹ ಕೆಲಸ ಮಾಡುತ್ತಿದ್ಧಾರೆ. ಹೆಣ್ಣುಮಕ್ಕಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಶಿಕ್ಷಕನೊರ್ವ ಈಗ ಕಂಬಿ ಎಣಿಸುತ್ತಿದ್ಧಾನೆ

ಗುರುಬ್ರಹ್ಮ, ಗುರುವಿಷ್ಣು ಗುರುದೇವೊ ಮಹೇಶ್ವರ,ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈಶ್ರೀ ಗುರುವೆ ನಮಃ ಎನ್ನುವಂತಹ ನಮ್ಮ ದೇಶದಲ್ಲಿ ಗುರುವಿಗೆ ಅತ್ಯಂತ ದೊಡ್ಡ ಸ್ಥಾನ ನೀಡಲಾಗಿದೆ. ಆದರೆ ಇತ್ತೀಚಿಗೆ ಕೆಲವು ಶಿಕ್ಷಕರು ಮಾಡುತ್ತಿರುವ ಕೃತ್ಯಗಳಿಂದ  ಇಡೀ ಗುರುಕುಲಕ್ಕೆ ಅವಮಾನವಾಗುತ್ತಿದೆ.  ಈ ಫೋಟದಲ್ಲಿ ಕಾಣುತ್ತಿರುವ ವ್ಯಕ್ತಿಯ ಹೆಸರು ಶಶಿಧರ ಹಿರೇಮಠ ವೃತ್ತಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕ . ಪುಟ್ಟ ಪುಟ್ಟ ಮಕ್ಕಳಿಗೆ ಪಾಠ ಹೇಳಿ ಮಾರ್ಗದರ್ಶನ ತೋರಬೇಕಾದ ಈಗುರು ಮಾಡಿದ್ದು ಘನಂದಾರಿ ಕೆಲಸ.

ಯಲಬುರ್ಗಾ ತಾಲೂಕಿನ ಗೆದಗೇರಿಯ ಗ್ರಾಮದ ಸರಕಾರಿ ಬಾಲಕಿಯರ ಕಿರಿಯ ಪ್ರಾಥಮಿಕ  ಶಾಲೆಯಲ್ಲಿ ಕೆಲಸ ಮಾಡುತ್ತಾನೆ. ಆದರೆ ಕೆಲವು ದಿನಗಳಿಂದ ಈ ಶಿಕ್ಷಕನ ಮೇಲೆ ಆರೋಪಗಳು ಕೇಳಿಬರುತ್ತಿದ್ದವು. ತನ್ನ ಶಾಲೆಯಲ್ಲಿ 4-5 ತರಗತಿಯಲ್ಲಿ ಓದುವ ಬಾಲಕಿಯರಿಗೆ ಲೈಂಗಿಕ ಕಿರುಕುಳ ಕೊಡುವುದು ಹಾಗೂ ಆಶ್ಲಿಲವಾಗಿ ಮಾತನಾಡುವುದು ಅಲ್ಲದೇ ಮೊಬೈಲ್ ನಲ್ಲಿ ಅಶ್ಲೀಲ ಚಿತ್ರಗಳನ್ನು ತೋರಿಸುತ್ತಿದ್ದ. ಇದರ ಬಗ್ಗೆ ಬಾಲಕಿಯರು ತಮ್ಮ ಪಾಲಕರಿಗೆ ತಿಳಿಸಿದ್ದಾರೆ. ಆದರೆ ಶಿಕ್ಷಕನಿಗೆ ಗೌರವ ಕೊಟ್ಟು ಆರೀತಿ ಮಾಡಿರಲಿಕ್ಕಿಲ್ಲ ಎಂದು ತಮ್ಮ ಮಕ್ಕಳಿಗೇ ಬೈಯ್ದಿದ್ಧಾರೆ. ಆದರೆ ಯಾವಾಗ ಇತನ ಉಪಟಳ ಜಾಸ್ತಿಯಾಯಿತೋ ಆವಾಗ ಪಾಲಕರು ಕಣ್ಣು ತೆರದಿದ್ದಾರೆ. ಇತನ ವಿರು್ದ ಪ್ರತಿಭಟನೆ ಮಾಡಿದ್ದಾರೆ. ಶಿಕ್ಷಣ ಇಲಾಖೆಯವರೂ ಸಹ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದಿಲ್ಲ. ಯಾವಾಗ ಪ್ರತಿಭಟನೆ ಶುರುವಾಯಿತೋ ಆಗ ಇತನನ್ನು ನೆಪಮಾತ್ರಕ್ಕೆ ಸಸ್ಪೆಂಡ್ ಮಾಡಿದ್ದಾರೆ.

ನಂತರ ಮರುದಿನವೇ ಬೇರೆ ಶಾಲೆಗೆ ವರ್ಗಮಾಡಿದ್ಧಾರೆ. ಇದರ ಬಗ್ಗೆ ಮಕ್ಕಳ ಕಲ್ಯಾಣ ಸಮಿತಿಯವರು ಕೂಲಂಕುಷವಾಗಿ ವಿಚಾರಣೆ ಮಾಡಿ ರಾಜ್ಯ ಸಮಿತಿಗೆ ವರದಿ ಮಾಡಿದ್ದಾರೆ. ರಾಜ್ಯ ಸಮಿತಿಯವರು  ಯಲಬುರ್ಗಾ ಬಿಇಓಗೆ ಇದರ ಬಗ್ಗೆ ಮಾಹಿತಿ ಕೇಳಿ ಸೂಕ್ತ ಕ್ರಮಕ್ಕೆ ಆದೇಶ ಮಾಡಿದ್ಧಾರೆ. ಆದರೂ ಸಹ ಯಾವುದೇ ಕ್ರಮ ಜರುಗಿರಲಿಲ್ಲ. ಕೊನೆಗೆ  ಹಿರಿಯ ಅಧಿಕಾರಿಗಳಿಂದ ಕ್ರಮದ ಎಚ್ಚರಿಕೆ ನೀಡಿದಾಗ ಬಿಇಓ  ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ಧಾರೆ

 ಅಮಾಯಕ ಮುಗ್ದ ಮಕ್ಕಳನ್ನು ತಮ್ಮ ಲೈಂಗಿಕ ತೃಷೆಗೆ ಬಳಸುವ ಇಂತಹ ನೀಚರಿಂದಾಗಿ ಶಿಕ್ಷಕ ವೃತ್ತಿಗೆ ಅಪಮ಻ನವಾಗುತ್ತಿದೆ. ಈಗ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳಿಸಿದ್ಧಾರೆ. ಇಂತಹ ಶಿಕ್ಷಕರಿಗೆ ಉಗ್ರ ಶಿಕ್ಷೆಯಾದಲ್ಲಿ ಉಳಿದವರಿಗೆ ಪಾಠವಾದೀತು

ನಿಲೋಫರ್ ರಾಂಪೂರಿ ( ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ )

ನಿಲೋಫರ್ ರಾಂಪೂರಿ ( ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ )

Please follow and like us:
error