ಹಣಕ್ಕಾಗಿ ಅಪಹರಣ 24 ಗಂಟೆಯೊಳಗೆ ಇಬ್ಬರ ಬಂಧನ

ಹನುಮಸಾಗರ :  ಹಣಕ್ಕಾಗಿ ವ್ಯಕ್ತಿಯನ್ನು ಅಪಹರಿಸಿದ್ದ ಇಬ್ಬರನ್ನು 24 ಗಂಟೆಯೊಳಗೆ ಬಂಧಿಸುವಲ್ಲಿ ಹನುಮಸಾಗರ ಪೋಲಿಸರು ಯಶಸ್ವಿಯಾಗಿದ್ದಾರೆ.

ಪ್ರಕರಣದ ವರದಿ ಈ ರೀತಿ ಇದೆ :   ಯಾರೋ ಇಬ್ಬರು ಅಪರಿಚಿತ ವ್ಯಕ್ತಿಗಳು ಕಾರಿನಲ್ಲಿ ಬಂದು ಪರಸಪ್ಪ ತಂದೆ ಭೀಮಪ್ಪ ಕೊತಬಾಳ ಸಾ: ನಿಲೋಗಲ್‌ ಇವರನ್ನು ಅಪಹರಿಸಿಕೊಂಡು ಹೋಗಿದ್ದು, ನಂತರ ಅಪಹರಣಕ್ಕೊಳಗಾದ ಪರಸಪ್ಪ ಕೊತಬಾಳ ಇವರ ಮಗನಿಗೆ ಫೋನ ಮಾಡಿ. ನಿಮ್ಮ ಅಪ್ಪನನ್ನು ಬಿಡಲು ನಮಗೆ ಒಂದು ಲಕ್ಷ ರೂಪಾಯಿ ಕೊಡಬೇಕು ಪೊಲೀಸರಿಗೆ ಹೇಳಿದರೆ ನಿಮ್ಮ | ತಂದೆಯನ್ನು ಕೊಲೆಮಾಡಿ ಊರಿಗೆ ಹೆಣ ಕಳಸ್ತಿವಿ ಅಂತಾ ಪದೆ, ಪದೆ ತಮ್ಮ ತಂದೆ ಸಂಗಡ ಫೋನ ಮಾಡಿ ಬೆದರಿಕೆ ಹಾಕಿದ್ದು, ಈ ಬಗ್ಗೆ ಹನಮಸಾಗರ ವೊಲೀಸ್‌ ರಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಪಹರಣಕ್ಕೊಳಗಾದ ವ್ಯಕ್ತಿ ಪರಸಪ್ಪ ಕೊತಬಾಳ ಮತ್ತು ಆರೋಪಿತರನ್ನು ಪತ್ತೆ ಮಾಡಲು ಕೊಪ್ಪಳ ಎಸ್ಪಿ ಶ್ರೀಮತಿ ಜಿ. ಸಂಗೀತಾ ಎಸ್‌.ಪಿ. ಕೊಪ್ಪಳರವರ ಮಾರ್ಗದರ್ಶನದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಿದ್ದು, ಬಿ.ಪಿ. ಚಂದ್ರಶೇಖರ ಡಿ.ಎಸ್‌ ಪಿ. ಗಂಗಾವತಿ ಮೇಲ್ವಿಚಾರಣೆಯಲ್ಲಿ, ಚಂದ್ರಶೇಖರ ಸಿಪಿಐ ಕುಷ್ಟಗಿ ವೃತ್ತ ಹಾಗೂ ಅಮರೇಶ ಹುಬ್ಬಳ್ಳಿ ಪಿ ಎಸ್‌.ಐ. ಹಾಗೂ ಹನುಮಸಾಗರ ಪೊಲೀಸ್‌ ಠಾಣೆಯ ಸಿಬ್ಬಂದಿಯವರಾದ  ಡಿ.ಕೆ. ನಾಯಕ, ಬಸವರಾಜ ಗೌಡರ. ರವಿ ನಡುವಿಸಮನಿ ಹಾಗೂ ಕುಷ್ಟಗಿ ಠಾಣೆಯ ಸಿಬ್ಬಂದಿಯವರಾದ ಅಮರೇಶ ಹುಬ್ಬಳ್ಳಿ ಶ್ರೀಧರ ರವರನ್ನೊಳಗೊಂಡ ಒಂದು ತಂಡವನ್ನು ರಚನೆ ಮಾಡಲಾಗಿತ್ತು.  ಅದರಂತೆ ವಿಶೇಷ ತನಿಖಾ ತಂಡವು ಮಿಂಚಿನ ಕಾರ್ಯಾಚರಣೆ ಮಾಡಿ ಪ್ರಕರಣ ದಾಖಲಾಗಿ ಕೇವಲ ಇಪ್ಪತ್ನಾಲ್ಕು ಗಂಟೆಯಲ್ಲಿ ವೈಜ್ಞಾನಿಕ ತನಿಖೆಯಿಂದ ಅಪಹರಣಕ್ಕೊಳಗಾದ ವ್ಯಕ್ತಿ ಪರಸಪ್ಪ ಕೊತಬಾಳ ಹಾಗೂ ಆರೋಪಿತರಾದ ಜಂಗಮರಕಲ್ಗುಡಿಯ  ನಾಗೇಶ್ವರ ರಾವ್‌ ತಂದಿ ಸತ್ಯನಾರಾಯ ನೆಕ್ಕಂಟಿ , ಆಳಂದದ ರಾಘವೇಂದ್ರ ತಂದಿ ಚಂದ್ರಶೇಖರ ಹೂಗಾರನ್ನು 03-12-2019 ರಂದು ಕಾರಟಗಿ ಹತ್ತಿರ ಆರೋಪಿತರನ್ನು ದಸ್ತಗಿರಿ ಮಾಡಲಾಗಿದ್ದು  ಸದರಿ ಆರೋಪಿತರಿಂದ

1] ಇಂಡಿಕಾ ಕಾರ್‌ 2] ಕಬ್ಬಿಣದ ಪೈಪು 3] ಹಗ್ಗ 4] ಕಬ್ಬಿಣದ ಚೈನ್‌ 5] ಪ್ರಕರಣಕ್ಕೆ ಉಪಯೋಗಿಸಿದ ಎರಡು ಮೋಬೈಲ್‌ 6] ಕಬ್ಬಿಣದ ಜಾಕ್‌ ಲಿವಿರ್‌  ವಶಪಡಿಸಿಕೊಳ್ಳಲಾಗಿದೆ.

Please follow and like us:
error