Breaking News
Home / Crime_news_karnataka / ಶಾಸಕ ಪರಣ್ಣ ಮುನವಳ್ಳಿಗೆ ಸ್ಕೆಚ್ ಹಾಕಿದ್ದು ಯಾರು ಗೊತ್ತಾ?
ಶಾಸಕ ಪರಣ್ಣ ಮುನವಳ್ಳಿಗೆ ಸ್ಕೆಚ್ ಹಾಕಿದ್ದು ಯಾರು ಗೊತ್ತಾ?

ಶಾಸಕ ಪರಣ್ಣ ಮುನವಳ್ಳಿಗೆ ಸ್ಕೆಚ್ ಹಾಕಿದ್ದು ಯಾರು ಗೊತ್ತಾ?

ಜೀವಬೆದರಿಕೆ ಹಾಕಿ ಬ್ಲಾಕ್ ಮೇಲ್ ಗೆ ಇಳಿದ ಬಿಜೆಪಿಯ ಮುಖಂಡ, ಜೊತೆ ಸೇರಿದವರ್ಯಾರು ಗೊತ್ತಾ?

ಕೊಪ್ಪಳ :  ಇತ್ತೀಚಿಗಷ್ಟೇ ಶಾಸಕ ಪರಣ್ಣ ಮುನವಳ್ಳಿಗೆ ಜೀವ ಬೆದರಿಕೆಯ ಕರೆ ಬಂದಿತ್ತು, ಮನೆಗೆ ಬಂದು ಬೆದರಿಕೆಯ ಪತ್ರ ಕೊಟ್ಟು ಜೊತೆಗೆ ಕವರ್ ನಲ್ಲಿ ಖೋಟಾನೋಟು ಕೊಟ್ಟು ಹೋಗಿದ್ದರು. ಇದರಿಂದ ಕಂಗಾಲಾಗಿದ್ದ ಶಾಸಕ ಪೋಲಿಸರಿಗೆ ದೂರು ಕೊಟ್ಟಿದ್ದರು. ಪ್ರಕರಣದ ಜಾಡು ಹಿಡಿದು ಹೊರಟ ಪೋಲಿಸರಿಗೆ ಶಾಕ್ ಕಾದಿತ್ತು ಕೈ ಹಾಕಿದ್ದು ಮೀನುಗಳಿಗಾಗಿ ಆದರೆ ಸಿಕ್ಕಿದ್ದು ಮೊಸಳೆಗಳು, ತಿಮಿಂಗಲಗಳು ..ಗಂಗಾವತಿಯ ಶಾಸಕ ಪರಣ್ಣ ಮುನವಳ್ಳಿಗೆ ಕೊಲೆ ಬೆದರಿಕೆ ಹಾಗೂ ಬ್ಲಾಕ್ ಮೇಲ್ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೊಪ್ಪಳ ಪೋಲಿಸರು  10 ಜನರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.  

ಗಂಗಾವತಿಯ ಶಾಸಕ ಪರಣ್ಣ ಮುನವಳ್ಳಿಯ ಮನೆಗೆ ಬಂದಿದ್ದ ದುಷ್ಕರ್ಮಿಗಳು ಬೆದರಿಕೆಯ ಪತ್ರದೊಂದಿಗೆ ಖೋಟಾನೋಟು ಕೊಟ್ಟು ಹೋಗಿದ್ದರು ಅಷ್ಟೇ ಸಾಲದು ಎಂಬಂತೆ ಮರುದಿನ ಫೋನ್ ಮಾಡಿ ಬೆದರಿಕೆಯ ಕರೆ ಮಾಡಿದ್ದರು . ಬೆದರಿಕೆಯ ಪತ್ರದಲ್ಲಿ  ನಾವು ನಿನಗೆ ಖೋಟಾ ನೋಟು ಕೊಟ್ಟಿದ್ವಿ ಅದರ ಪೇಮೆಂಟ್ 50 ಲಕ್ಷ ಬಾಕಿ ಇದೆ ಕೊಡದೇ ಇದ್ರೆ ಖೋಟಾನೋಟು ನಿನ್ನ ಮನೆಯಲ್ಲಿ ಇಟ್ಟು ಕೇಸ್ ಹಾಕಿಸ್ತಿವಿ ಎಂದು ಬೆದರಿಕೆ ಹಾಕಿದ್ದರು.ಇದರಿಂದ ಕಂಗಾಲಾದ ಶಾಸಕ ಪೋಲಿಸರಿಗೆ ದೂರು ನೀಡಿದ್ದರು. ಕೇಸ್ ನ ಜಾಡು ಹಿಡಿದು ಹೊರಟ ಪೋಲಿಸರಿಗೆ ಶಾಕ್ ಕಾದಿತ್ತು

ಮೊದಲೇ ಕೋಮುಸೂಕ್ಷ್ಮ ಪ್ರದೇಶ ಗಂಗಾವತಿಯಲ್ಲಿ ಗಲಭೆಗಳಾಗಲು ನೆಪಗಳು ಬೇಕು ಎನ್ನುವಂತಿದೆ. ಹೀಗಾಗಿ ಪ್ರಕರಣದ ತೀವ್ರತೆಯನ್ನು ಅರಿತ ಪೋಲಿಸರು ತನಿಖೆಗೆ ಇಳಿದಿದ್ದರು.  ಅಪರಾಧಿಗಳನ್ನು ಬಂಧಿಸಲು ಸ್ಪೇಷಲ್ ಟಿಂ ರಚಿಸಿದ ಎಸ್ಪಿ ಅನೂಪ್ ಶೆಟ್ಟಿ ಆರೋಪಿಗಳನ್ನು ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದರು. ತನಿಖೆ ಸಾಗಿದಂತೆ ಪೋಲಿಸರೇ ಕಂಗಾಲಾಗಿ ಹೋಗಿದ್ದರು.. ಯಾಕೆಂದರೆ ಬಿಜೆಪಿಯಿಂದ ಆಯ್ಕೆಯಾಗಿರುವ ಶಾಸಕ ಪರಣ್ಣ ಮುನವಳ್ಳಿಗೆ ಜೀವಬೆದರಿಕೆ ಹಾಕಿ ಬ್ಲಾಕ್ ಮೇಲ್ ಮಾಡಿದ್ದು ಬೇರ್ಯಾರು ಅಲ್ಲ ಖುದ್ದು ಬಿಜೆಪಿಯ ಮುಖಂಡ ಯರ್ರಿಸ್ವಾಮಿ ಬಿಲ್ಗಾರ ಮತ್ತು ಅವನ ಪಟಾಲಂ. ಅವರೆಲ್ಲರೂ ಸಹ ಒಂದಿಲ್ಲೊಂದು ರೀತಿಯಲ್ಲಿ ಶಾಸಕ ಪರಣ್ಣ ಮುನವಳ್ಳಿಗೆ ಪರಮಾಪ್ತರೇ.  ಯರ್ರಿಸ್ವಾಮಿ ಬಿಲ್ಗಾರ್ ಬಿಜೆಪಿ ಸಕ್ರಿಯ ಮುಖಂಡ. ಮೊನ್ನೆ ನರೇಂದ್ರ ಮೋದಿ ಬಂದಾಗ ಅವರನ್ನು ನೇರವಾಗಿ ಭೆಟ್ಟಿಯಾಗಿದ್ದ.

ಯರ್ರಿಸ್ವಾಮಿ ಬಿಲ್ಗಾರ್ ಜೊತೆ ಇನ್ನೂ 9 ಜನರನ್ನು ಪೋಲಿಸರು ಬಂದಿಸಿದ್ದಾರೆ. ಅದರಲ್ಲಿ  ಮೊನ್ನೆಯ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಆಲಂ ಸಹ ಒಬ್ಬ.  ಗಂಗಾವತಿಯಲ್ಲಿ ಈ ಹಿಂದೆಯೂ ಸಹ ಖೋಟಾನೋಟಿನ ಪ್ರಕರಣಗಳ ಬೆಳಕಿಗೆ ಬಂದಿದ್ದವು. ಆದರೆ ಒಬ್ಬಿಬ್ಬರನ್ನು ಬಂದಿಸಿದ್ದನ್ನು ಬಿಟ್ಟರೆ ಯಾವುದೇ ರೀತಿಯ ಕಡಿವಾಣ ಬಿದ್ದಿರಲಿಲ್ಲ. ಶಾಸಕ ಪರಣ್ಣ ಮುನವಳ್ಳಿಯನ್ನು ಬ್ಲಾಕ್ ಮೇಲ್ ಮಾಡಿದ ಯರ್ರಿಸ್ವಾಮಿ, ಐಸಾಕ್ ದೇವರಾಜ್ ತಂಡ ಖೋಟಾನೋಟನ್ನು ತಂದಿದ್ದು ಬಳ್ಳಾರಿಯಿಂದ. ಬಳ್ಳಾರಿಯಲ್ಲಿ ಚಲಾವಣೆಗೊಳ್ಳುತ್ತಿದ್ದ ಖೋಟಾ ನೋಟುಗಳನ್ನು ತಂದು ಉಪಯೋಗಿಸಲಾಗಿತ್ತು. ಪ್ರಕರಣ ತನಿಖೆಯಲ್ಲಿ 2014ರಲ್ಲೂ ಸಹ ಶಾಸಕ ಪರಣ್ಣ ಮುನವಳ್ಳಿಗೆ ಇದೇ ರೀತಿ ಬೆದರಿಕೆ ಹಾಕಿ ಬ್ಲಾಕ್ ಮೇಲ್ ಮಾಢಲಾಗಿತ್ತು ಆದರೆ ಆ ತನಿಖೆಯನ್ನು ನಿಲ್ಲಿಸಲಾಗಿತ್ತು.

ಪೋಲಿಸರ ತನಿಖೆಯಲ್ಲಿ ಬಿಜೆಪಿ, ಜೆಡಿಎಸ್ ಹಾಗೂ ಕನ್ನಡಪರ ಸಂಘಟನೆಗಳ ಜೊತೆ ಗುರುತಿಸಿಕೊಂಡಿದ್ದವರನ್ನು ಬಂಧಿಸಲಾಗಿದೆ.  ಪೋಲಿಸರ ಪ್ರಕಾರ ಬಹಳಷ್ಟು ಸಾಲ ಮಾಡಿಕೊಂಡಿದ್ದ ಈ ತಂಡ ದುಡ್ಡಿಗಾಗಿ ಶಾಸಕ ಪರಣ್ಣ ಮುನವಳ್ಳಿಗೆ ಬ್ಲಾಕ್ ಮೇಲ್ ಮಾಡಿತ್ತು. ನೀವು ಮೊದಲು ಬ್ಲಾಕ್ ಮೇಲ್ ಮಾಡಿ ನಂತರ ನಾನು ಬಂದು ಸೆಟ್ಲಮೆಂಟ್ ಮಾಡುತ್ತೇನೆ ಎಂದು ಬಿಜೆಪಿಯ ಮುಖಂಡ ಯರ್ರಿಸ್ವಾಮಿ ಬಿಲ್ಗಾರ ಪ್ಲಾನ್ ರೂಪಿಸಿದ್ದ ಎನ್ನಲಾಗಿದೆ.

ಪ್ರಕರಣವನ್ನು ಬೇದಿಸಿ ಪೋಲಿಸರು ಐಶಾಕ್ (೩೪), ಎರ್ರಿಸ್ವಾಮಿ ಬಿಲಗಾರ್ (೩೭), ಮಹ್ಮದ್ ನಾತೀಕ್ ( ೩೬), ಮಹ್ಮದ್ ಶಾಲಂ ( ೩೬) , ಮಧು (೨೫), ನಾಗರಾಜ್ (೨೫), ಸಹಾಯ ಮಾಡಿದ ಆರೋಪಿಗಳು ತಂದೆ ತಾಯಿ ಮಕ್ಕಳಾದ ವಿಜಯಲಕ್ಷ್ಮಿ, (೫೦), ರಾಘವೇಂದ್ರ(೫೮), ಆಕಾಶ (೨೫), ನಿರಂಜನ್ ( ೨೦) ಖೋಟಾ ನೋಟ ವ್ಯವಹಾರದ ಆರೋಪಿಗಳನ್ನು ಬಂಧಿಸಿದ್ಧಾರೆ. ಅವರಿಂದ ೫೦೦ ಮುಖಬೆಲೆಯ ೨೬೪ ನೋಟುಗಳು, ೧ ಲಕ್ಷ ೩೨ ಸಾವಿರ ಮುಖಬೆಲೆಯ ಖೋಟಾ ನೋಟುಗಳು ಸಿಮ್ ಕಾರ್ಡ್ ಸೇರಿದಂತೆ ೫ ಮೊಬೈಲ್ ಗಳ ವಶಕ್ಕೆ ಪಡೆಯಲಾಗಿದೆ. ಆರೋಪಿಗಳ ವಿರುದ್ಧ ನಗರ ಠಾಣೆಯಲ್ಲಿ  ೪೮೯ಎ, ೧೨೦ ಬಿ, ೫೦೬,೫೦೭ ಸೆಕ್ಷನ್ ಅಡಿ ಕೇಸ್ ದಾಖಲಿಸಲಾಗಿದೆ. ರಾಜಕುಮಾರ್ ವಾಜಂತ್ರಿ, ದೀಪಕ್ ಬೂಸರೆಡ್ಡಿ, ಜಿ.ಎಸ್.ಹೆಬ್ಬಾಳ, ರವಿ ಉಕ್ಕುಂದ ನೇತೃತದ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಇಷ್ಟೆಲ್ಲಾ ಕಷ್ಟಪಟ್ಟು ಪ್ರಕರಣ ಬೇದಿಸಿದ ಮೇಲೂ ಸಹ ಕೆಲವು ಅನುಮಾನಗಳು ಹುಟ್ಟಿಕೊಂಡಿವೆ. ಅವರು ಪರಣ್ಣ ಮುನವಳ್ಳಿಯರನ್ನು ಆಯ್ಕೆ ಮಾಡಿದ್ದು ಯಾಕೆ? ಬ್ಲಾಕಮೇಲ್ ಮಾಡಲು ಮುಂದಾದವರು ಫೇಕ್ ಕರೆನ್ಸಿ ಉಪಯೋಗಿಸಿದ್ದು ಯಾಕೆ?  ಇವರ ಬೆದರಿಕೆಗೆ ತುತ್ತಾದವರು ಇವರೊಬ್ಬರೇನಾ?  ಪ್ರಕರಣದಲ್ಲಿ ಬಹಳಷ್ಟು ಮಿಸ್ಸಿಂಗ್ ಲಿಂಕ್ ಗಳಿವೆ…

ಪೋಲಿಸರು ಇನ್ನೂ ತನಿಖೆಗೆ ಪೂರ್ಣಗೊಳಿಸಿಲ್ಲ . ಪ್ರಕರಣದ ತನಿಖೆ ಇನ್ನೂ ಮುಂದುವರೆದಂತೆ ಖೋಟಾ ನೋಟಿನ ಮೂಲವನ್ನು ತಲುಪುತ್ತಾರಾ  ನೋಡಬೇಕಿದೆ.

About admin

Comments are closed.

Scroll To Top