ಶಾಸಕನಿಗೆ ಆವಾಜ್ ಹಾಕಿದ ರೌಡಿ ಶೀಟರ್ !

koppal ಮತ ಕೇಳುವ ಸಂಧರ್ಭದಲ್ಲಿ ರೌಡಿ ಶೀಟರ್ನೊಬ್ಬ ಶಾಸಕನಿಗೆ ಆವಾಜ್ ಹಾಕಿದ ಘಟನೆ ಕೊಪ್ಪಳದಲ್ಲಿ ನಡೆದಿದೆ. ಕೊಪ್ಪಳ ನಗರದ ಹಟಗಾರ ಪೇಟೆಯಲ್ಲಿ ನಿನ್ನೆ ಶಾಸಕ ರಾಘವೇಂದ್ರ ಹಿಟ್ನಾಳ್ ಮತಕೇಳಲು ವಾರ್ಡಿಗೆ ಬಂದಿದ್ರು.

ಇದೇ ವೇಳೆ  ಜುಬೇರಿ ಎನ್ನುವ ರೌಡಿ ಶೀಟರ್ ನನ್ನನ್ನು ರೌಡಿ ಶೀಟರ್ ಪಟ್ಟಿಯಿಂದ ನಿವು ನನ್ನ ಹೆಸರು ತೆಗೆಸಬೇಕು ಎಂದು ಆವಾಜ್ ಹಾಕಿದ್ದಾರೆ. ಇನ್ನು ಹಲವಾರು ಭಾರಿ ನಿಮ್ಮ ಬಳಿ ನನ್ನ ಹೆಸರು ತೆಗೆಸಿ ಎಂದು ಮನವಿ ಮಾಡಿದ್ದೇನೆ ಅದ್ರೆ ನಿವು ನನ್ನ ಹೆಸರು ತೆಗೆಸಲು ಹಿಂದೇಟು ಹಾಕ್ತಾ ಇದ್ದೀರಿ. ಇದರ ಪರಿಣಾಮ ಬೇರೆ ಆಗುತ್ತೆ ಅಂತಾ ಆವಾಜ್ ಹಾಕಿದ್ದಾನೆ. ಇದಕ್ಕೆ ಸರಿಯಾಗಿ ಟಾಂಗ್ ನೀಡಿದ ಶಾಸಕ ಕಾನೂನಿನ ಪ್ರಕಾರ ಪೊಲೀಸ್ ಇಲಾಖೆ ಕ್ರಮ ತೆಗೆದುಕೊಳ್ಳುತ್ತೆ. ನಿನ್ನ ಹೆಸರು ತೆಗೆಸೋಕೆ ನಾನ್ಯಾರು ಅಂತ ಹೇಳಿದ್ದಾರೆ. ಒಟ್ನಲ್ಲಿ ರೌಡಿ ಶೀಟರ್ನೊಬ್ಬ ಬಹಿರಂಗವಾಗಿಯೇ ಸಾರ್ವಜನಿಕರ ಎದುರು ಆವಾಜ್ ಹಾಕಿದ್ದು, ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ.