ರಾಸಲೀಲೆ ಸಿಡಿಯಲ್ಲಿರುವ ವ್ಯಕ್ತಿ ನಿತ್ಯಾನಂದ ಸ್ವಾಮಿ..!

ಬೆಂಗಳೂರು, ನ.22:  ಬಿಡದಿ ಧ್ಯಾನಪೀಠ ಆಶ್ರಮದ ನಿತ್ಯಾನಂದ ಸ್ವಾಮಿ ವಿರುದ್ಧ ರಾಸಲೀಲೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದ ಸಿಡಿಯ ಎಫ್ ಎಸ್ ಎಲ್ ವರದಿ ಬಹರಂಗಗೊಂಡಿದ್ದು, ಸಿಡಿಯಲ್ಲಿರುವ ವ್ಯಕ್ತಿ  ನಿತ್ಯಾನಂದನೇ ಎಂದು  ದಿಲ್ಲಿಯ ವಿಧಿವಿಜ್ಞಾನ ಪ್ರಯೋಗಾಲಯ(ಎಫ್‍ಎಸ್‍ಎಲ್) ವರದಿ ದೃಢಪಡಿಸಿದೆ.  

ಇದರೊಂದಿಗೆ ನಿತ್ಯಾನಂದ ತೀವ್ರ ಮುಖಭಂಗ ಅನುಭವಿಸುವಂತಾಗಿದೆ.

2010ರಲ್ಲಿ ನಿತ್ಯಾನಂದ ಸ್ವಾಮಿ ತಮಿಳು ನಟಿಯೊಂದಿಗೆ ರಾಸಲೀಲೆಯಲ್ಲಿ ತೊಡಗಿರುವ ಸುದ್ದಿ  ಬಹಿರಂಗಗೊಂಡಿತ್ತು. ನಿತ್ಯಾನಂದ ಸ್ವಾಮಿ ರಾಸಲೀಲೆ ಪ್ರಕರಣದ ಸಿಡಿಯಲ್ಲಿರುವುದು ನಿತ್ಯಾನಂದನೇ  ಎಂದು ಖಚಿತ ಪಡಿಸಿಕೊಳ್ಳಲು ಸಿಐಡಿ ಡಿವೈಎಸ್‍ಪಿ ಚರಣ್ ರೆಡ್ಡಿ  ಸಿಡಿಯನ್ನು ಎಫ್‍ಎಸ್‍ಎಲ್‍ಗೆ ಕಳುಹಿಸಿದ್ದರು. ಈ ಸಂದರ್ಭದಲ್ಲಿ ಸಿಡಿಯಲ್ಲಿರುವುದು ನಾನಲ್ಲ ಅಂತ ನಿತ್ಯಾನಂದ ಸ್ವಾಮಿ ವಾದ ಮಂಡಿಸಿದ್ದನು.

Please follow and like us: