ರಾಜ್ ಕುಮಾರ್ ಅಪಹರಣ ಪ್ರಕರಣ; 9 ಆರೋಪಿಗಳು ಖುಲಾಸೆ

ಚೆನ್ನೈ, ಸೆ.25: ಹದಿನೆಂಟು ವರ್ಷಗಳ ಹಿಂದೆ ನಡೆದ ವರನಟ ಡಾ.ರಾಜ್ ಕುಮಾರ್  ಅವರನ್ನು ದಂತಚೋರ ವೀರಪ್ಪನ್ ಸಹಚರರು ಅಪಹರಣ ಮಾಡಿರುವ ಪ್ರಕರಣದ ಎಲ್ಲ 9 ಮಂದಿ ಆರೋಪಿಗಳನ್ನು ಈರೋಡ್ ಜಿಲ್ಲೆಯ ಗೋಪಿಚೆಟ್ಟಿಪಾಳ್ಯಂನ ಜಿಲ್ಲಾ ನ್ಯಾಯಾಲಯ ಮಂಗಳವಾರ  ದೋಷಮುಕ್ತಗೊಳಿಸಿ ತೀರ್ಪು ನೀಡಿದೆ. 

ಅಪಹರಣ ಪ್ರಕರಣಕ್ಕೆ ಸಂಬಂಧಿಸಿ ಸರಿಯಾದ ಸಾಕ್ಷ್ಯ ಒದಗಿಸಲು  ಪ್ರಾಸಿಕ್ಯೂಷನ್ ವಿಫಲವಾಗಿದೆ. ರಾಜ್ ಕುಮಾರ್ ಪತ್ನಿ ಪಾರ್ವತಮ್ಮ ಈ ಸಂಬಂಧ ಸಾಕ್ಷ್ಯ ನೀಡಿಲ್ಲ ಎಂದು  ಹೇಳಿದ ನ್ಯಾಯಾಲಯ ಪ್ರಕರಣದಲ್ಲಿ ಆರೋಪ ಎದುರಿಸುತ್ತಿದ್ದ ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಿದೆ

2000ನೇ  ಜುಲೈ 30ರಂದು ತಮಿಳುನಾಡಿನ ಗಡಿಭಾಗದಲ್ಲಿರುವ ಗಾಜನೂರಿನ ಮನೆಯಿಂದ ರಾಜ್‌ಕುಮಾರ್ ಅವರನ್ನು ವೀರಪ್ಪನ್ ಸಹಚರರು ಅಪಹರಣ ಮಾಡಿದ್ದರು.

108 ದಿನದ ಬಳಿಕ  ರಾಜ್ ಕುಮಾರ್ ಅವರನ್ನು ವೀರಪ್ಪನ್  ಬಿಡುಗಡೆ ಮಾಡಿದ್ದ. ಈ ಸಂಬಂಧ ವೀರಪ್ಪನ್ ಸೇರಿದಂತೆ 9  ಮಂದಿ  ವಿರುದ್ಧ ದೂರು ದಾಖಲಾಗಿತ್ತು. ಆದರೆ ವಿಚಾರಣೆ ಸಮಯದಲ್ಲಿ  ವೀರಪ್ಪನ್, ಸೇತುಕುಡಿ ಗೋವಿಂದನ್, ರಂಗಸಾಮಿ ಸಾವನ್ನಪ್ಪಿದ್ದರು. ಉಳಿದ 6 ಮಂದಿ  ಜೈಲು ಸೇರಿದ್ದರು.

Please follow and like us:
error