ಯುವತಿ ಕಾಣೆ : ಪತ್ತೆಗೆ ಸಹಕರಿಸಲು ಮನವಿ


ಕೊಪ್ಪಳ ಜ.  : ಕೊಪ್ಪಳ ಸಮೀಪದ ಭಾಗ್ಯನಗರದ ನಿವಾಸಿ ಪ್ರತಿಭಾ ತಂದೆ ಶಿವಪುತ್ರಪ್ಪ ಮದ್ಲಿ ವಯಸು ೨೦ ವರ್ಷ, ಎಂಬ ಯುವತಿಯು ಜ. ೦೧ ರಂದು ಕಾಣೆಯಾದ್ದು, ಪತ್ತೆಗೆ ಸಹಕರಿಸುವಂತೆ ಕೊಪ್ಪಳ ನಗರ ಪೋಲಿಸ್ ಠಾಣಾಧಿಕಾರಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಪ್ರತಿಭಾ ತಂದೆ ಶಿವಪುತ್ರಪ್ಪ ಮದ್ಲಿ ವಯಸು ೨೦ ವರ್ಷ, ಎಂಬ ಯುವತಿಯು ಜ. ೦೧ ರಂದು ಬೆಳಿಗ್ಗೆ ೧೧-೩೦ ಗಂಟೆಯ ಸುಮಾರಿಗೆ ಜಂಪರ್ ತೆಗೆದುಕೊಂಡು ಬರುತ್ತೇನೆಂದು ಮನೆಯಿಂದ ಹೇಳಿ ಹೋದವಳು ವಾಪಸ್ ಬಾರದೇ ಎಲಿಯೋ ಹೋಗಿ ಕಾಣೆಯಾಗಿದ್ದಾಳೆ ಎಂದು ಯುವತಿಯ ತಂದೆ ಶಿವಪುತ್ರಪ್ಪ ಮದ್ಲಿ ಕೊಪ್ಪಳ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಯುವತಿಯ ಚಹರೆ ವಿವರ ಇಂತಿದೆ, ೫.೨ ಫೀಟ್ ಎತ್ತರ, ಸಾದಾರಣ ಮೈಕಟ್ಟು, ದುಂಡು ಮುಖ, ಗೋದಿ ಮೈ ಬಣ್ಣ, ಕಪ್ಪು ತಲೆ ಕೂದಲು, ಕನ್ನಡ ಮಾತನಾಡುತ್ತಾಳೆ. ಕಾಣೆಯಾದಾಗ ತಿಳಿ ಗುಲಾಬಿ ಬಣ್ಣದ ಚೂಡಿದಾರ ನೀಲಿ ಬಣ್ಣದ ಪ್ಯಾಂಟ್ ಧರಿಸಿದ್ದು, ಈ ಯುವತಿಯ ಬಗ್ಗೆ ಯಾರಿಗಾದರೂ ಮಾಹಿತಿ ದೊರೆತಲ್ಲಿ ಕೊಪ್ಪಳ ಕಂಟ್ರೋಲ್ ರೂಂ.ನಂ ೦೮೫೩೯-೨೩೦೧೦೦, ೨೩೦೨೨೨, ನಗರ ಪೊಲೀಸ್ ಠಾಣೆ ಇನ್ಸಪೆಕ್ಟರ್ ಮೊ.ಸಂ ೯೪೮೦೮೦೩೭೪೫, ಠಾಣೆ ಸಬ್‌ಇನ್ಸಪೆಕ್ಟರ್ (ಕಾ&ಸು) ಮೊ.ಸಂ. ೯೪೪೯೯೯೫೩೫೩, ದೂ.ಸಂ ೦೮೫೩೯-೨೨೦೩೩೩, ಇಲ್ಲಿಗೆ ಮಾಹಿತಿ ನೀಡುವಂತೆ  ತಿಳಿಸಿದೆ.

Please follow and like us:
error