ಯುವತಿ ಕಾಣೆ : ಪತ್ತೆಗೆ ಸಹಕರಿಸಲು ಮನವಿ

Koppal News :   ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಮಸಾರಿ ಕ್ಯಾಂಪ್‌ನ ಸತ್ಯಮ್ಮ ತಂದೆ ಯಲ್ಲಪ್ಪ ವಡ್ಡರ (೧೯), ಎಂಬ ಯುವತಿಯು ಆ. ೨೦ ರಂದು ಕೊಪ್ಪಳದಿಂದ ಕಾಣೆಯಾಗಿದ್ದು, ಪತ್ತೆಗೆ ಸಹಕರಿಸುವಂತೆ ಕೊಪ್ಪಳ ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಮಸಾರಿ ಕ್ಯಾಂಪ್‌ನ ಸತ್ಯಮ್ಮ ತಂದೆ ಯಲ್ಲಪ್ಪ ವಡ್ಡರ ಎಂಬ ಯುವತಿಯು ಬಾಲ್ಯ ವಿವಾಹ ಪ್ರಕರಣದಲ್ಲಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯು ಕೊಪ್ಪಳ ಸ್ವಾಧಾರ ಕೇಂದ್ರಕ್ಕೆ ಜುಲೈ. ೧೨ ರಂದು ವರ್ಗಾಯಿಸಿದ್ದು, ಯುವತಿಯು ಆ. ೨೦ ರಂದು ಬೆಳಿಗ್ಗೆ ೬ ಗಂಟೆ ಸುಮಾರಿಗೆ ಕೊಪ್ಪಳ ಸ್ವಾಧಾರ ಕೇಂದ್ರದಲ್ಲಿರುವ ಶೌಚಾಲಯಕ್ಕೆ ಹೋಗಿ ಬರುತ್ತೆನೆ ಎಂದು ಹೇಳಿ ಹೋದವಳು ವಾಪಾಸ ಬಾರದೇ ಕಾಣೆಯಾಗಿದ್ದಾಳೆ ಎಂದು ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಣೆಯಾದ ಯುವತಿಯ ಚಹರೆ ವಿವರ ಇಂತಿದೆ. ಸತ್ಯಮ್ಮ ತಂದೆ ಯಲ್ಲಪ್ಪ ವಡ್ಡರ (೧೯), ಎತ್ತರ ೫.೬ ಅಡಿ, ಸಾದಾರಣ ಮೈಕಟ್ಟು, ದುಂಡು ಮುಖ, ಗೋಧಿ ಮೈಬಣ್ಣ, ಕಪ್ಪು ತಲೆ ಕೂದಲು ಹೊಂದಿದ್ದಾಳೆ. ಕಾಣೆಯಾದಾಗ ಚೆಕ್ಸ ಕಲರ್ ಚೂಡಿದಾರ ಧರಿಸಿದ್ದು, ಕನ್ನಡ ಭಾಷೆಯನ್ನು ಮಾತನಾಡುತ್ತಾಳೆ. ಈ ಯುವತಿಯ ಬಗ್ಗೆ ಯಾರಿಗಾದರು ಮಾಹಿತಿ ದೊರೆತಲ್ಲಿ ಕೊಪ್ಪಳ ಕಂಟ್ರೋಲ್ ರೂಂ.ನಂ. ೦೮೫೩೯-೨೩೦೧೦೦ & ೨೩೦೨೨೨, ನಗರ ಪೊಲೀಸ ಠಾಣೆ ಪೊಲೀಸ ಇನ್ಸಪೆಕ್ಟರ್ ಮೊ.ಸಂ. ೯೪೮೦೮೦೩೭೪೫, ಪೊಲೀಸ ಸಬ್ ಇನ್ಸಪೆಕ್ಟರ್ (ಕಾ&ಸು) ನಗರ ಠಾಣೆ ಮೊ.ಸಂ. ೯೪೪೯೯೯೫೩೫೩, ನಗರ ಪೊಲೀಸ ಠಾಣೆ ದೂರವಾಣಿ ಸಂಖ್ಯೆ. ೦೮೫೩೯-೨೨೦೩೩೩ ಇಲ್ಲಿಗೆ ಮಾಹಿತಿ ನೀಡುವಂತೆ ತಿಳಿಸಿದೆ.