ಯುವತಿ ಕಾಣೆ : ಪತ್ತೆಗೆ ಸಹಕರಿಸಲು ಮನವಿ

ಕೊಪ್ಪಳದ ಗಾಂಧಿನಗರದ ನಿವಾಸಿ ದೀಪಾ ತಂದೆ ಏಕನಾಥ ಸುರ್ವೆ (೧೯), ಎಂಬ ಯುವತಿ ಜು. ೨೪ ರಂದು ಕಾಣೆಯಾಗಿದ್ದು, ಪತ್ತೆಗೆ ಸಹಕರಿಸುವಂತೆ ಕೊಪ್ಪಳ ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ದೀಪಾ ತಂದೆ ಏಕನಾಥ ಸುರ್ವೇ, ಪ್ರತಿ ಮಂಗಳವಾರ ಮತ್ತು ಶುಕ್ರವಾರ ನಗರದ ದುರ್ಗಾ ದೇವಿ ಗುಡಿಯನ್ನು ಸ್ವಚ್ಛಗೊಳಿಸಲು ಹೋಗುತ್ತಿದ್ದರು. ಅದರಂತೆ ಜು. ೨೪ ರಂದು ಗುಡಿಯನ್ನು ಸ್ವಚ್ಛಗೊಳಿಸುತ್ತೇನೆಂದು ಹೇಳಿ ಹೋದವರು ಮನೆಗೆ ಹಿಂದಿರುವುದಿಲ್ಲ. ಈ ಬಗ್ಗೆ ಓಣಿಯಲ್ಲಿ ವಿಚಾರಿಸಿದಾಗ ಕರಿಯಪ್ಪ ತಂದಿ ಸುಂಕಪ್ಪ ಪೂಜಾರ ಈತನ ಅಳಿಯನಾದ ಯಮನೂರಪ್ಪ ಇಲಕಲ್ ಈತನು ಸಹ ಓಣಿಯಲ್ಲಿ ಇರದೆ ಇದ್ದದ್ದು ಕಂಡುಬಂದಿದ್ದು, ಯಮನೂರಪ್ಪ ಇಲಕಲ್ ಈತನ ಮೇಲೆ ಸಂಶಯವಿದೆ, ಕಾಣೆಯಾದ ನನ್ನ ಮಗಳನ್ನು ಪತ್ತೆ ಮಾಡುವಂತೆ ಯುವತಿಯ ತಂದೆ ಏಕನಾಥ ಸುರ್ವೇ ಅವರು ಕೊಪ್ಪಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಕಾಣೆಯಾದ ಯುವತಿಯ ಚಹರೆ ವಿವರ ಇಂತಿದೆ. ದೀಪಾ ತಂದೆ ಏಕನಾಥ ಸುರ್ವೇ ವಯಸ್ಸು ೧೯, ಎತ್ತರ ೫ ಅಡಿ, ಸಾದಾರಣ ಮೈಕಟ್ಟು, ದುಂಡು ಮುಖ, ಗೋಧಿ ಮೈಬಣ್ಣ, ಕಪ್ಪು ತಲೆ ಕೂದಲು ಹೊಂದಿದ್ದು, ಕಾಣೆಯಾದಾಗ ಹಸಿರು ಬಣ್ಣದ ನೈಟಿ ಧರಿಸಿದ್ದು, ಕನ್ನಡ ಹಾಗೂ ಮರಾಠಿ ಭಾಷೆಯನ್ನು ಮಾತನಾಡುತ್ತಾಳೆ. ಈ ಯುವತಿಯ ಬಗ್ಗೆ ಯಾರಿಗಾದರೂ ಮಾಹಿತಿ ದೊರೆತಲ್ಲಿ ಕೊಪ್ಪಳ ಕಂಟ್ರೋಲ್ ರೂಂ.ನಂ. ೦೮೫೩೯-೨೩೦೧೦೦ & ೨೩೦೨೨೨, ನಗರ ಪೊಲೀಸ ಠಾಣೆ ಪೊಲೀಸ ಇನ್ಸಪೆಕ್ಟರ್ ಮೊ.ಸಂ. ೯೪೮೦೮೦೩೭೪೫, ಪೊಲೀಸ ಸಬ್ ಇನ್ಸಪೆಕ್ಟರ್ ಮೊ.ಸಂ. ೯೪೪೯೯೯೫೩೫೩, ನಗರ ಪೊಲೀಸ ಠಾಣೆ ದೂರವಾಣಿ ಸಂಖ್ಯೆ. ೦೮೫೩೯-೨೨೦೩೩೩ ಇಲ್ಲಿಗೆ ಮಾಹಿತಿ ನೀಡುವಂತೆ   ತಿಳಿಸಿದೆ.

Please follow and like us:
error

Related posts