ಯುವತಿ ಕಾಣೆ : ಪತ್ತೆಗೆ ಸಹಕರಿಸಲು ಮನವಿ

: ಕೊಪ್ಪಳ ತಾಲೂಕಿನ ನರೇಗಲ್ ಗ್ರಾಮದ ಗಂಗಮ್ಮ ತಂದೆ ವಾಸಪ್ಪ ದೇವಲಾಪೂರ (೧೯) ಎಂಬ ಯುವತಿ ಸೆಪ್ಟೆಂಬರ್. ೦೭ ರಂದು ಕಾಣೆಯಾಗಿದ್ದು, ಪತ್ತೆಗೆ ಸಹಕರಿಸುವಂತೆ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸಪೆಕ್ಟರ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಗಂಗಮ್ಮ ತಂದೆ ವಾಸಪ್ಪ ದೇವಲಾಪೂರ (೧೯) ಎಂಬ ಯುವತಿ ಸೆಪ್ಟೆಂಬರ್. ೦೭ ರಂದು ಬೆಳಿಗ್ಗೆ ೧೧ ಗಂಟೆ ಸುಮಾರಿಗೆ ನರೇಗಲ್ ಗ್ರಾಮದ ತನ್ನ ಮನೆಯಿಂದ ಕೊಪ್ಪಳದಲ್ಲಿ ಗಣೇಶ ಮೂರ್ತಿಗಳನ್ನು ನೋಡಿಕೊಂಡು ಬರುತ್ತೇನೆಂದು ಪಕ್ಕದ ಮನೆಯಲ್ಲಿ ಹೇಳಿಹೋಗಿದ್ದು, ವಾಪಸ್ ಮನೆಗೆ ಬಾರದೆ ಕಾಣೆಯಾಗಿದ್ದಾಳೆ. ಕಾಣೆಯಾದ ಯುವತಿಯ ಚಹರೆ ವಿವರ ಇಂತಿದೆ, ಗಂಗಮ್ಮ ತಂದೆ ವಾಸಪ್ಪ ದೇವಲಾಪೂರ (೧೯), ಎತ್ತರ ೫ ಅಡಿ, ತಳ್ಳನೆಯ ಮೈಕಟ್ಟು, ಕೆಂಪು ಮೈಬಣ್ಣ, ಕಪ್ಪು ತಲೆ ಕೂದಲು, ದುಂಡು ಮುಖ ಹೊಂದಿದ್ದಾಳೆ. ಕಾಣೆಯಾದಾಗ ಹಸಿರು ಬಣ್ಣದ ಚೂಡಿದಾರ ಧರಿಸಿದ್ದು, ಕನ್ನಡ ಮತ್ತು ಹಿಂದೆ ಭಾಷೆ ಮಾತನಾಡುತ್ತಾಳೆ.
ಈ ಯುವತಿಯ ಬಗ್ಗೆ ಯಾರಿಗಾದರೂ ಮಾಹಿತಿ ದೊರೆತಲ್ಲಿ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಪಿ.ಎಸ್.ಐ ದೂ.ಸಂ ೦೮೫೩೯-೨೨೧೩೩೩, ಮೊ-೯೪೮೦೮೦೩೭೪೬, ಸಿ.ಪಿ.ಐ ಮೊ-೯೪೮೦೮೦೩೭೩೧, ಡಿ.ಎಸ್.ಪಿ ದೂ.ಸಂ ೦೮೫೩೯-೨೩೦೩೪೨, ಮೊ-೯೪೮೦೮೦೩೭೨೦, ಕೊಪ್ಪಳ ಎಸ್.ಪಿ ಕಛೇರಿ ದೂ.ಸಂ ೦೮೫೩೯-೨೩೦೧೧೧, ಹಾಗೂ ಜಿಲ್ಲಾ ಕಂಟ್ರೋಲ್ ರೂಂ ದೂ.ಸಂ ೦೮೫೩೯-೨೩೦೨೨೨-೧೦೦, ಇಲ್ಲಿಗೆ ಮಾಹಿತಿ ನೀಡುವಂತೆ ಪ್ರಕಟಣೆ ತಿಳಿಸಿದೆ.

Please follow and like us:
error