ಯುವಕ ಕಾಣೆ : ಪತ್ತೆಗೆ ಸಹಕರಿಸಲು ಮನವಿ

: ಕೊಪ್ಪಳ ಜಿಲ್ಲೆಯ ಯಲಬುರ್ಗಾದ ನಿವಾಸಿ ಮಂಜುನಾಥ (೨೨) ತಂದೆ ಮೈಲಾರಪ್ಪ ಭೂಮೋಜಿ ಎಂಬ ಯುವಕ ಫೆ. ೦೭ ರಂದು ಕಾಣೆಯಾಗಿದ್ದು ಪತ್ತೆಗೆ ಸಹಕರಿಸುವಂತೆ ಯಲಬುರ್ಗಾ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸಪೆಕ್ಟರ್ ಅವರು ಮನವಿ ಮಾಡಿದ್ದಾರೆ.
ಯಲಬುರ್ಗಾದ ಸರ್ಕಾರಿ ಆಸ್ಪತ್ರೆಯಲ್ಲಿ ದಿನಗೂಲಿ ಕೆಲಸ ಮಾಡುತ್ತಿದ್ದ, ಮಂಜುನಾಥ ತಂದೆ ಮೈಲಾರಪ್ಪ ಭೂಮೋಜಿ (೨೨) ಎಂಬ ಯುವಕ, ಫೆ. ೦೭ ರಂದು ಕೆಲಸಕ್ಕೆ ಹೋಗಿ ಬರುತ್ತೇನೆಂದು ಮನೆಯಲ್ಲಿ ಹೇಳಿ ಹೋಗಿದ್ದು, ವಾಪಸ್‌ಬಾರದೇ ಕಾಣೆಯಾಗಿದ್ದಾನೆ ಎಂದು ಯುವಕನ ತಂದೆ ಮೈಲಾರಪ್ಪ ಭೂಮೋಜಿ ಅವರು ಯಲಬುರ್ಗಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಾಣೆಯಾದ ಯುವಕನ ಚಹರೆ ವಿವರ ಇಂತಿದೆ. ಮಂಜುನಾಥ ತಂದೆ ಮೈಲಾರಪ್ಪ ಭೂಮೋಜಿ (೨೨), ಎತ್ತರ ೪.೫ ಅಡಿ, ಸದೃಡ ಮೈಕಟ್ಟು, ದುಂಡು ಮುಖ, ಸಾದಾಗೆಪ್ಪು ಮೈಬಣ್ಣ, ಕಪ್ಪು ಕೂದಲು ಹೊಂದಿದ್ದು, ಪಿ.ಯು.ಸಿ ವರೆಗೆ ವಿದ್ಯಾಭ್ಯಾಸ ಹೊಂದಿದ್ದಾನೆ. ಕಾಣೆಯಾದಾಗ ಬೂದು ಬಣ್ಣದ ತುಂಬುತೋಳಿನ ಟೀ ಶರ್ಟ, ಜೀನ್ಸ ಪ್ಯಾಂಟ್ ಧರಿಸಿದ್ದು, ಕನ್ನಡ ಭಾಷೆ ಮಾತನಾಡುತ್ತಾನೆ. ಈ ಯುವಕನ ಬಗ್ಗೆ ಯಾರಿಗಾದರೂ ಮಾಹಿತಿ ದೊರೆತಲ್ಲಿ ಕೊಪ್ಪಳ ಎಸ್.ಪಿ ಕಛೇರಿ ದೂ.ಸಂ ೦೮೫೩೯-೨೩೦೧೧೧, ಡಿವೈಎಸ್‌ಪಿ ಕಛೇರಿ ದೂ.ಸಂ ೦೮೫೩೯-೨೩೦೪೩೨, ಯಲಬುರ್ಗಾ ಪೊಲೀಸ್ ಠಾಣೆ ದೂ.ಸಂ ೦೮೫೩೪-೨೨೦೧೩೩, ಸಿ.ಪಿ.ಐ ಯಲಬುರ್ಗಾ ಮೊ.ಸಂ ೯೪೮೦೮೦೩೭೩೩, ಹಾಗೂ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂ ದೂ.ಸಂ ೦೮೫೩೯-೨೩೦೧೦೦, ಇಲ್ಲಿಗೆ ಮಾಹಿತಿ ನೀಡುವಂತೆ ಪ್ರಕಟಣೆ ತಿಳಿಸಿದೆ