ಮೆತಗಲ್ ಗ್ರಾಮದ ಆರು ಜನರ ಆತ್ಮ ಹತ್ಯೆ ಪ್ರಕರಣ : ನ್ಯಾಯಾಂಗ ತನಿಖೆಗೆ ಆಗ್ರಹ

ಕೊಪ್ಪಳ ಜಿಲ್ಲೆಯ ಕೊಪ್ಪಳ ತಾಲೂಕಿನ ಮೆತಗಲ್ ಗ್ರಾಮದ ಆರು ಜನರ ಆತ್ಮ ಹತ್ಯೆ ಪ್ರಕರಣದ ಕುರಿತು ನ್ಯಾಯಾಂಗ ತನಿಖೆ ನಡೆಸುವದು ಮತ್ತು ಮೂರು ಜನ ನಿರಪರಾಧಿಗಳ ಮೇಲೆ ಹಾಕಿರುವ ಪ್ರಕರಣವನ್ನು ಕೈ ಬಿಡುವುದು.

ಪ್ರಗತಿಪರ ಸಂಘಟನೆಗಳ ಮೂಖಾಂತರ ವಿನಂತಿಸುವುದೇನಂದರೆ. ದಿನಾಂಕ ೧೧-೧-೨೦೧೯ ರಂದು ಮೆತಗಲ್ ಗ್ರಾಮಕ್ಕೆ, ಸಂಘಟನೆಗಳ ಅನೇಕ ಮುಖಂಡರು ಬೇಟಿ ಕೊಟ್ಟು ಸತ್ಯ ಶೋಧನೆ ಮಾಡಲಾಯಿತು. ಗ್ರಾಮದ ಹಿರಿಯರು ದೈವದ ಕಟ್ಟೆಯಲ್ಲಿ ಸೇರಿ ಸಭೆ ನಡೆಸಿದರು. ಶೇಖರಯ್ಯನ ಸೊಸೆಯಾದ ಶ್ರೀಮತಿ ಲಲಿಮ್ಮಳನ್ನು ಕರೆಯಿಸಲಾಗಿತ್ತು. ಜನರು ಆ ಮಹಿಳೆಯನ್ನು ಕೇಳಲಾಗಿ, ಸದರಿ ಲಲಿತಮ್ಮ ಹೇಳಿದ್ದೇನಂದರೆ. ನಾನು ಯಾವ ದೂರು ಕೊಟ್ಟಿಲ್ಲ, ಪೋಲಿಸರೆ ಬಿಳೆ ಹಾಳೆಯ ಮೇಲೆ ಸಹಿ ಮಾಡಿಸಿಕೊಂಡಿದ್ದಾರೆ. ನನ್ನ ಅಕ್ಕ ಜಯಮ್ಮ ಮತ್ತು ಮಾವ ಶೇಖರಯ್ಯ ಇತರೆ ಆರು ಜನರ ಸಾವಿನ ಕುರಿತು ನನ್ನನ್ನು ಏನು ಕೇಳಲಿಲ್ಲ. ವಿನಾ ಕಾರಣ ನಮ್ಮ ಮಾವನವರಾದ ಚನ್ನಬಸಯ್ಯ, ರುದ್ರಯ್ಯ ಮತ್ತು ಅಳಿಯನಾದ ಶರಣಯ್ಯ ಈ ಮೂರು ಜನರ ಮೇಲೆ ಕೇಸ್ ಮಾಡಿ ಬಂಧಿಸಿದ್ದಾರೆ. ಎಂದಳು. ಗ್ರಾಮದ ಅನೇಕರು, ಪೋಲಿಸರೆ ಸುಳ್ಳು ದೂರು ಸೃಷ್ಟಿ ಮಾಡಿ ಅಮಾಯಕರನ್ನು ಬಂಧಿಸಿದ್ದಾರೆಂದು ಆಕ್ರೋಶ ವ್ಯಕ್ತ ಪಡೆಸಿದರು.

ಗ್ರಾಮದ ಪ್ರತಿಯೊಬ್ಬರನ್ನು ವಿಚಾರಿಸಿ ಅಭಿಪ್ರಾಯ ಪಡೆಯಲಾಯಿತು. ಮೃತ ಶೇಖರಯ್ಯನೊಂದಿಗೆ, ಅವರ ಅಣ್ಣ ಸಮ್ಮಂದಿರು ಜಗಳ, ತಂಟೆ ತಕರಾರು ಮಾಡಿಲ್ಲವೆಂದು ಗ್ರಾಮದ ಜನರು ಹೇಳಿದರು. ಶೇಖರಯ್ಯ ಮತ್ತು ಇತರೆ ೫ ಜನರು ವಿಪರಿತ ಸಾಲದ ಬಾಧೆಯಿಂದಲೆ ಸತ್ತಿದ್ದಾರೆಂದು ತಿಳಿದು ಬಂದಿತು. ಡೆತ್ ನೋಟ್ ಬರೆದಿದ್ದಾರೆನ್ನುವುದು ಶುದ್ಧ ಸುಳ್ಳಾಗಿದೆ. ಒಂದು ವೇಳೆ ಡೆತ್ ನೋಟ್ ಬರೆದರೆ ದೈವದ ಜನರಿಗೆ ಮತ್ತು ಸಂಬಂಧಿಗಳಿಗೆ ಯಾಕೆ ತೋರಿಸಲಿಲ್ಲ. ಮೃತ ದೇಹಗಳನ್ನು ಆಸ್ಪತ್ರೆಗೆ ಸಾಗಿಸುವಾಗ ಮಹಜರು ಯಾಕೆ ಮಾಡಲಿಲ್ಲ ಎನ್ನುವ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ.

ದಿನಾಂಕ ೫-೧-೨೦೧೯ ರಂದು ಸಿಂಧನೂರಿನಲ್ಲಿ ನಡೆದ ಪಶು ಮೇಳದಲ್ಲಿ ಭಾಗವಹಿಸಲು ಬರುವ ತಮಗೆ (ಮುಖ್ಯ ಮಂತ್ರಿಗೆ) ತೊಂದರೆಯಾಗಬಹುದೆನ್ನುವ ದುರುದ್ದೇಶದಿಂದಲೇ ಪೋಲಿಸರು ಈ ತಂತ್ರ ಹೆಣಿದಿದ್ದಾರೆಂದು ಹೇಳಲಾಗತ್ತಿದೆ. ಮುಖ್ಯವಾಗಿ ಭೀಕರ ಬರ, ಬೆಳೆ ನಷ್ಟ, ಸಾಲ ಬಾದೆಯಿಂದ ಆರು ಜನರು ಆತ್ಮ ಹತ್ಯೆ ಮಾಡಿಕೊಂಡ ನಿಜ ಸಂಗತಿ ರಾಜ್ಯದ ಜನತೆಗೆ ಗೊತ್ತಾದರೆ ರಾಜಕೀಯವಾಗಿ ತೊಂದರೆಯಾಗುತ್ತದೆನ್ನುವ ಉದ್ದೇಶ ಇರಬಹುದು.
ಸರ್ಕಾರದ ವೈಫಲ್ಯಗಳನ್ನು ಮರೆ ಮಾಚಲು; ಸಹೋದರರ ಆಸ್ತಿ ಜಗಳವೆಂದು ಚಿತ್ರಿಸಿ ಮೂರು ಜನ ಅಮಾಯಕರನ್ನು ಜೈಲಿಗೆ ತಳ್ಳಲಾಗಿದೆ ಎಂದು ಜನರು ಹೇಳುತ್ತಿದ್ದಾರೆ.

ಹಕ್ಕೊತ್ತಾಯಗಳು
ಆರು ಜನರು ಬೆಳೆ ನಷ್ಟ ಮತ್ತು ಸಾಲ ಬಾಧೆಯಿಂದಲೆ ಸಾಮೂಹಿಕ ಆತ್ಮ ಹತ್ಯೆ ಮಾಡಿಕೊಂಡಿರುವುದರಿಂದ, ಪೋಲಿಸ್ ಪ್ರಾಥಮಿಕ ತನಿಖಾ ವರದಿ (ಎಫ್‌ಐಆರ್) ತಿದ್ದುಪಡಿ ಮಾಡುವುದು ಮತ್ತು ಈ ಕುರಿತು ಸತ್ಯಾಂಶ ಹೊರಹಾಕಲು ನ್ಯಾಯಾಂಗ ತನಿಖೆ ನಡೆಸಬೇಕು.
ಮೃತರ ಶವಗಳನ್ನು ವಶಪಡೆಸಿಕೊಳ್ಳುವ ಮುಂಚೆ, ಮಹಜರು ಇತರೆ ಕಾನೂನ ಕ್ರಮ ಅನುಸರಿಸದ ಮತ್ತು ಶುಳ್ಳು ದಾಖಲೆ ಸೃಷ್ಟಿಸಿದ ಪೋಲಿಸ್ ಅಧಿಕಾರಿಗಳನ್ನು ಸೇವೆಯಿಂದ ಅಮಾನತ್ತುಗೊಳಿಸಬೇಕು.
ಡೆತ್‌ನೋಟ್ ಇದೆ ಎಂದು ಸುಳ್ಳು ಸೃಷ್ಠಿಸಿ ಮೂರು ಜನ ಅಮಾಯಕರ ಮೇಲೆ ಹಾಕಿರುವ ಕೇಸ್ ವಾಪಾಸ್ ಪಡೆದು ಜೈಲಲ್ಲಿರುವವರನ್ನು ಬೇಶರತ್ತಾಗಿ ಬಿಡುಗಡೆಗೊಳಿಸಬೇಕು.
ಮೃತರ ಸಮೀಪದ ಬಂಧುಗಳಿಗೆ ಪರಿಹಾರ ನೀಡಬೇಕು. ಏಕೆಂದರೆ, ಅನೇಕ ಸಣ್ಣ ಸಣ್ಣ ರೈತರು ಮೃತ ಶೇಖರಯ್ಯನಿಗೆ ಕೈ ಸಾಲ ಕೊಟ್ಟಿದ್ದಾರೆ. ಸಂಬಂಧಿಗಳು, ಈ ಪರಿಹಾರದ ಹಣವನ್ನು ಸಾಲ ತೀರಿಸಲು ಉಪಯೋಗಿಸಿಕೊಳ್ಳುತ್ತಾರೆ.
ಮೃತ ಶೇಖರಯ್ಯನ ಅತ್ತಿಗೆಯಾದ ಶಿವ ಗಂಗಮ್ಮಳ ಬ್ಯಾಂಕ್ ಸಾಲ ಮನ್ನಾ ಮಾಡಬೇಕು. ಏಕೆಂದರೆ, ಈ ಸಾಲದ ಹಣವನ್ನು ಶೇಖರಯ್ಯ ತನ್ನ ಕೃಷಿಗೆ ಉಪಯೋಗಿಕೊಂಡಿದ್ದನು.
ದಕ್ಷ್ಷಿಣ ಕರ್ನಾಟಕ ಭಾಗದಲ್ಲಿ ಯಾರೆ ಮೃತರಾದರೂ ತಕ್ಷಣ ಪರಿಹಾರ ಘೋಣೆ ಮಾಡುವ ಸರ್ಕಾರ ಹೈದರಾಬಾದ-ಉತ್ತರ ಕರ್ನಾಟಕ ಭಾಗದ ಜನರನ್ನು ಎರಡನೆಯ ದರ್ಜೆಯ ಪ್ರಜೆಗಳಂತೆ ಕಾಣುವುದನ್ನು ನಿಲ್ಲಿಸಬೇಕು.
ಗಂಗಾವತಿ (ಕನಕಗಿರಿ ತಾಲೂಕಿನ) ತಾಲೂಕಿನ ನವಲಿ ಗ್ರಾಮದ ೫ ಜನ ಕೃಷಿ ಕಾರ್ಮಿಕರು ಕೂಲಿ ಕೆಲಸಕ್ಕೆ ಹೋಗುವಾಗ ಟ್ಯಾಕ್ಟರಿ ತುಂಗಭದ್ರ ಕಾಲುವಿಗೆ ಬಿದ್ದು ಪ್ರಾಣ ಕಳೆದುಕೊಂಡರೆ; ಸರ್ಕಾರ ನಯಾ ಪೈಸ ಪರಿಹಾರ ಕೊಡಲಿಲ್ಲ. ಆದರೆ ಮಂಡ್ಯ ಜಿಲ್ಲೆಯಲ್ಲಿ ಬಸ್ ಕಾಲುವೆಗೆ ಉರುಳಿ ಮೃತ ಪಟ್ಟಾ ೧೫ ಜನರಿಗೆ ಮುಖ್ಯ ಮಂತ್ರಿಗಳು ತಕ್ಷಣ ತಲಾ ೫ ಲಕ್ಷ ಪರಿಹಾರ ಘೋಷಿಸಿದರು. ಇದು ಈ ಭಾಗದ ಜನರಿಗೆ ಮಾಡುವ ಮೋಸವಲ್ಲವೆ?
ಇನ್ನೂತನಕ ಸರ್ಕಾರ ಪರಿಹಾರ ಘೋಷೆಣೆ ಮಾಡದಿರುವುದು ಸರಿಯಲ್ಲ. ಶಿಘ್ರವಾಗಿ ಮೃತರ ಸಂಬಂಧಿಗಳಿಗೆ ಪರಿಹಾರ ನೀಡಬೇಕು.
ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲಿ ಉದ್ಯೋಗ ಖಾತ್ರಿ ಕಾಮಗಾರಿಯನ್ನು ಸಮರ್ಪಕವಾಗಿ ಕೈ ಗೆತ್ತಿಕೊಳ್ಳಬೇಕು ಮತ್ತು ಮೆತಗಲ್ ಗ್ರಾಮ ಸೇರಿದಂತೆ ಉದ್ಯೋಗ ಖಾತ್ರಿ ಕೂಲಿಯ ಬಾಕಿ ಹಣ ನೀಡಬೇಕು.
ರಾಷ್ಟ್ರೀಯ ಭೀಮಾ ಫಸಲ್ ಯೋಜನೆಯ ಬಾಕಿ ಹಣವನ್ನು ಪಾವತಿಸಬೇಕು. ಬೆಳೆ ನಷ್ಟ ಪರಿಹಾರ ಮತ್ತು ದನಕರುಗಳಿಗೆ ಉಚಿತ ಮೇವು ಒದಗಿಸಬೇಕು.
ಕೊಪ್ಪಳ ಜಿಲ್ಲೆಅತ್ಯಂತ ಹಿಂದುಳಿದಿರುವುದರಿಂದ ವಿಶೇಷ ಅನುದಾನ ಬಿಡುಗಡೆ ಮಾಡಿ ಜನರ ಕಷ್ಟಗಳಿಗೆ ಸ್ಪಂದಿಸಬೇಕಾಗಿದೆ.

ಭಾರದ್ವಜ ವಿಠಪ್ಪ ಗೋರಂಟ್ಲಿ ಡಿ.ಎಚ್.ಪೂಜಾರ
ರಾಜ್ಯಾಧ್ಯಕ್ಷರು ರಾಜ್ಯ ಉಪಾಧ್ಯಕ್ಷರು ರಾಜ್ಯಾಧ್ಯಕ್ಷರು
ಅ,ಭಾ,ಗ್ರಾ,ಕೃ, ಕಾ,ಸಂಘ ಪಿಯುಸಿಎಲ್ ಕೆಆರ್‌ಎಸ್-ಎಐಕೆಕೆಎಸ್

ಹನುಮಂತಪ್ಪ ಹೊಳೆಯಾಚೆ ಬಸವರಾಜ ಶೀಲವಂತರ , ಕೆ.ಬಿ ಗೋನಾಳ ರಾಜ್ಯ ಕಾರ್ಯದರ್ಶಿ ಟಿಯುಸಿಐ
ಮೂಖಪ್ಪ ಮೇಸ್ತ್ರೀ ಬಸಾಪೂರ, ಗಾಳೆಪ್ಪ ಇಂದರಗಿ, ಫಕೀರಪ್ಪ ಬೂದಗುಂಪಾ, ಮುದಿಯಪ್ಪ ಇಂದರಗಿ

Please follow and like us:
error