ಮಹಿಳೆ ಕಾಣೆ : ಪತ್ತೆಗೆ ಸಹಕರಿಸಲು ಮನವಿ

ಕೊಪ್ಪಳ ಡಿ.  ಕೊಪ್ಪಳ ತಾಲ್ಲೂಕಿನ ಹಲಿಗೇರಿ ಗ್ರಾಮದ ದೀಪಾ ಅಲಿಯಾಸ ಅನ್ನಪೂರ್ಣಮ್ಮ (27) ಎಂಬ ಮಹಿಳೆಯು ನವೆಂಬರ್. 30 ರಂದು ಕಾಣೆಯಾಗಿದ್ದು, ಪತ್ತೆಗೆ ಸಹಕರಿಸುವಂತೆ ಕೊಪ್ಪಳ ಗ್ರಾಮೀಣ ಠಾಣೆಯ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ನ. 30 ರಂದು ಸಂಜೆ ಹಲಿಗೇರಿ ಗ್ರಾಮದ ಬಸ್ ನಿಲ್ದಾಣದ ಹತ್ತಿರದ ಹೋಟೆಲ್‌ನಲ್ಲಿ ಶೌಚಾಲಯಕ್ಕೆ  ಹೋಗಿಬರುವುದಾಗಿ ತಿಳಿಸಿ ಹೋದವರು ಇಲ್ಲಿಯವರೆಗೂ ಪತ್ತೆಯಿರುವುದಿಲ್ಲ. ಕಾಣೆಯಾದ ಮಹಿಳೆಯ ಚಹರೆ ವಿವರ ಇಂತಿದೆ.  ಸಾಧಾರಣ ಮೈಕಟ್ಟು, ದುಂಡು ಮುಖ, 05 ಅಡಿ 05 ಇಂಚು ಎತ್ತರ, ಕೆಂಪು ಮೈಬಣ್ಣ, ಕಪ್ಪು ತಲೆಗೂದಲು ಹೊಂದಿದ್ದಾರೆ ಮತ್ತು ಬಲ ತೋಳಿಗೆ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಕಾಣೆಯಾದಾಗ ನೀಲಿ ಬಣ್ಣದ ಡಿಸೈನ್ ಚೂಡಿದಾರ ಕ್ರೀಮ್ ಕಲರ್ ಪ್ಯಾಂಟ್ ಧÀರಿಸಿದ್ದು, ಕನ್ನಡ ಮತ್ತು ಹಿಂದಿ ಭಾಷೆಗಳನ್ನು ಮಾತನಾಡುತ್ತಾರೆ. ಈ ಮಹಿಳೆಯ ಬಗ್ಗೆ ಯಾರಿಗಾದರೂ ಮಾಹಿತಿ ದೊರೆತಲ್ಲಿ  ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಪಿ.ಎಸ್.ಐ ಇವರ ದೂ.ಸಂ: 08539-285233, ಸಿ.ಪಿ.ಐ ಇವರ ಮೊ.ಸಂ: 9480803731, ಡಿ.ವೈ.ಎಸ್.ಪಿ ಇವರ ದೂ.ಸಂ: 08539-221333, ಮೊ.ಸಂ. 9480803746, ಎಸ್.ಪಿ ಇವರ ದೂ.ಸಂ: 08539-230111, ಕಂಟ್ರೋಲ್ ರೂಂ ದೂ.ಸಂ: 08539-230222-100 ಇಲ್ಲಿಗೆ ಮಾಹಿತಿ ನೀಡುವಂತೆ  ತಿಳಿಸಿದೆ.

Please follow and like us:
error