ಮಹಿಳೆ ಆತ್ಮಹತ್ಯೆ : ಆರೋಪಿಗೆ ಶಿಕ್ಷೆ


ಕೊಪ್ಪಳ ನ.  : ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದ ನಿವಾಸಿ ಮಹಾಂತೇಶ ತಂದೆ ಮಲ್ಲಿಕಾರ್ಜುನ ಚಿಂತಾ ಎಂಬ ವ್ಯಕ್ತಿ ತನ್ನ ಹೆಂಡತಿಗೆ ನೀಡುತ್ತಿದ್ದ ಕಿರುಕುಳವನ್ನು ತಾಳದೆ ಹೆಂಡತಿ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಆರೋಪ ಸಾಬೀತಾಗಿದ್ದು, ಕೊಪ್ಪಳ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಆರೋಪಿಗೆ ನಾಲ್ಕು ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದ್ದಾರೆ.
ಗಂಗಾವತಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಬಸವಣ್ಣ ಸರ್ಕಲ್ ನಿವಾಸಿ ಸುಮಂಗಲಾ ಅಲಿಯಾಸ್ ರೇಣುಕಾಳ ಪತಿ ಮಹಾಂತೇಶ ಮದುವೆಯಾದಾಗಿನಿಂದ ಮಾನಸಿಕ ಹಾಗೂ ದೈಹಿಕ ಕಿರುಕುಳವನ್ನು ನೀಡುತ್ತಿದ್ದನು. 2013ರ ಆಗಸ್ಟ್ 09 ರಂದು ಸಂಜೆ 05 ಗಂಟೆ ಸುಮಾರಿಗೆ ಆರೋಪಿತನು ಕುಡಿದು ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರಿAದ ಸುಮಂಗಲಾ ತನ್ನ ಗಂಡನ ಕಿರುಕುಳ ತಾಳದೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ಕುರಿತು ಗಂಗಾವತಿ ನಗರ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ: 141/2013 ಕಲಂ: 498ಎ, 306 ಸವಾ 34 ಐಪಿಸಿಯಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ತನಿಖಾಧಿಕಾರಿ ಜೆ.ಆರ್. ನಿಕ್ಕಂ ಪಿಐ ಇವರು ತನಿಖೆ ಮಾಡಿ ಆರೋಪಿಯ ಮೇಲೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಎಸ್.ಸಿ ಸಂ: 83/2013 ರಲ್ಲಿ ದಾಖಲಾಗಿ ವಿಚಾರಣೆ ನಡೆಸಲಾಗಿತ್ತು.
ಪ್ರಕರಣದಲ್ಲಿ ಮಹಾಂತೇಶ ಚಿಂತಾ ಮೇಲಿರುವ ಆರೋಪಗಳು ಸಾಬೀತಾದ ಕಾರಣ 2019ರ ನವೆಂಬರ್ 18 ರಂದು ಕೊಪ್ಪಳ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಸಂಜೀವ್ ಕುಲಕರ್ಣಿ ಅವರು ಆರೋಪಿಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆ ಹಾಗೂ ರೂ. 10,000/- ಗಳ ದಂಡ ವಿಧಿಸಿ, ದಂಡದ ಮೊತ್ತವನ್ನು ಮೃತಳ ಮಗನಿಗೆ ಪರಿಹಾರ ರೂಪದಲ್ಲಿ ವಿತರಿಸಲು ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ನಿವೃತ್ತ ಸರ್ಕಾರಿ ಅಭಿಯೋಜಕರಾದ ಮಹಾಂತಪ್ಪ ಎ. ಪಾಟೀಲ ಇವರು ಪ್ರಕರಣ ನಡೆಸಿದ್ದು, ಕೊಪ್ಪಳ ಸರ್ಕಾರಿ ಅಭಿಯೋಜಕರಾದ ಅಂಬಣ್ಣ ಟಿ ಇವರು ವಾದ ಮಂಡಿಸಿದ್ದರು .

Please follow and like us:
error