You are here
Home > Crime_news_karnataka > ಮಟಕಾ, ಅಕ್ರಮ ಮದ್ಯ ಮಾರಾಟ ,ಅಕ್ರಮ ಮರಳು ಕಳ್ಳ ಸಾಗಾಣಿಕೆ ದಾಳಿ

ಮಟಕಾ, ಅಕ್ರಮ ಮದ್ಯ ಮಾರಾಟ ,ಅಕ್ರಮ ಮರಳು ಕಳ್ಳ ಸಾಗಾಣಿಕೆ ದಾಳಿ

Crime News Koppal ಗಂಗಾವತಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ನಗರದ ಹಿರೇಜಂತಕಲನ ಪಂಪಾಪತಿ ದೇವಸ್ಥಾನದ ಹತ್ತಿರ ಆರೋಪಿತನಾದ ಖಾಸಿಂಅಲಿ ತಂದೆ ಬುಡನಸಾಬ ಗಡದಾಳ ಸಾ: ಗಂಗಾವತಿ ಈತನು ಮಟಕಾ ಪಟ್ಟಿ ಬರೆಯುತ್ತಿದ್ದಾಗ   ಉದಯ ರವಿ ಪಿ.ಐ. ಗಂಗಾವತಿ ನಗರ ಠಾಣೆ ರವರು ಸಿಬ್ಬಂದಿ ಸಮೇತ ಹೋಗಿ ದಾಳಿ ಮಾಡಿ, ಆರೋಪಿತನಿಂದ ನಗದು ಹಣ ರೂ. 2,050=00 ಗಳನ್ನು ಜಪ್ತಿ ಪಡಿಸಿಕೊಂಡು ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತಾರೆ.

ಕನಕಗಿರಿ ಪೊಲೀಸ್ ಠಾಣೆ ವ್ಯಾಪ್ತಿಯ ಹನುಮನಾಳ ಗ್ರಾಮದಲ್ಲಿ ಸಿರವಾರ ಕ್ರಾಸನಲ್ಲಿ ಆರೋಪಿತನಾದ ಮಾರುತಿ ತಂದೆ ಹನುಮಂತಪ್ಪ ವಡಕಿ ಸಾ: ವಡಕಿ ಈತನು ಯಾವುದೇ ಪರವಾನಿಗೆ ಇಲ್ಲದೇ ಆಕ್ರಮವಾಗಿ ಮದ್ಯ ಸಾಗಾಟ ಮಾಡುವಾಗ   ಸೈಯ್ಯದ ಜಾಫರುದ್ದೀನ್ ಎ.ಎಸ್.ಐ. ಕನಕಗಿರಿ ಠಾಣೆ ಸಿಬ್ಬಂದಿ ಸಮೇತ ದಾಳಿ ಮಾಡಿ ಆರೋಪಿತನಿಂದ ರೂ. 2,910 ಮೌಲ್ಯದ ಆಕ್ರಮ ಮದ್ಯ ವಶಪಡಿಸಿಕೊಂಡು ಆರೋಪಿತನ ವಿರುದ್ದ ಪ್ರಕರಣ ದಾಖಲಿಸಿ ಕ್ರಮ ಕೈ ಗೊಂಡಿರುತ್ತಾರೆ.

ಯಲಬುರ್ಗಾ ಪೊಲೀಸ್ ಠಾಣೆ ವ್ಯಾಪ್ತಿಯ ಮುಧೋಳ ಸೀಮಾದ ಹಳ್ಳದಿಂದ ಯಾವುದೇ ಪರವಾನಿಗೆ ಇಲ್ಲದೇ ಆಕ್ರಮವಾಗಿ ಮರಳನ್ನು ಮಾರಾಟ ಮಾಡುವ ಉದ್ದೇಶದಿಂದ ಆರೋಪಿತನಾದ ಶರಣಪ್ಪ ತಂದೆ ಹನುಮಪ್ಪ ಸೂಡಿ ಈತನು ಟಾಟ -407 ಪಿಕಅಪ ವ್ಯಾನನಲ್ಲಿ ಸಾಗಾಟ ಮಾಡುವಾಗ  ಸಣ್ಣಬಸಪ್ಪ ಹೂಗಾರ ಎ.ಎಸ್.ಐ ಯಲಬುರ್ಗಾ ಠಾಣೆ ರವರು ಸಿಬ್ಬಂದಿ ಸಮೇತ ದಾಳಿ ಆರೋಪಿ ಮತ್ತು ಟಾಟ-407 ವಾಹನ ವಶಪಡಿಸಿಕೊಂಡು ಚಾಲಕ ಮತ್ತು ಮಾಲೀಕನ ವಿರುದ್ದ ಪ್ರಕರಣ ದಾಖಲಿಸಿ ಕ್ರಮ ಕೈ ಕೊಂಡಿರುತ್ತಾರೆ.

Top